ದೀಪಿಕಾ ಪಡುಕೋಣೆ ಬಾಲಿವುಡ್ನ ಪ್ರತಿಭಾನ್ವಿತ ನಟಿ. ಪ್ರಾಜೆಕ್ಟ್ ಕೆ ಸಿನಿಮಾ ವಿಚಾರವಾಗಿ ಬಹುಬೇಡಿಕೆ ನಟಿ ಸುದ್ದಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಜ್ಜೆ ಹಾಕಿರುವ ದೀಪಿಕಾ ಪಡುಕೋಣೆ ಇದೀಗ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ವೇದಿಕೆಯಲ್ಲಿ ಮಿಂಚು ಹರಿಸಲು ಸಜ್ಜಾಗುತ್ತಿದ್ದಾರೆ.
ಹೀಗೆ ಹಲವು ವಿಷಯಗಳಿಂದ ಸುದ್ದಿಯಲ್ಲಿರುವ ನಟಿ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಇನ್ಸ್ಟಾಗ್ರಾಮ್ ಖಾತೆ ದೀಪಿಕಾ ಪಡುಕೋಣೆ ಅವರ ಏರ್‌ಪೋರ್ಟ್ ವಿಡಿಯೋವನ್ನು ಶೇರ್ ಮಾಡಿದೆ. ಓಂ ಶಾಂತಿ ಓಂ ನಟಿ ನೇರಳೆ ಬಣ್ಣದ ದಿರಿಸಿನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ದೀಪಿಕಾ ಪಡುಕೋಣೆ ತಮ್ಮ ಕಾರಿನಿಂದಿಳಿದು ಏರ್ಪೋರ್ಟ್ಗೆ ಹೋಗುತ್ತಿರುವುದನ್ನು ಕಾಣಬಹುದು. ಮುಂಬೈ ವಿಮಾನ ನಿಲ್ದಾಣದ ವಿಡಿಯೋ ಇದು. ನೇರಳೆ ಬಣ್ಣದ ಬಟ್ಟೆಯಲ್ಲಿ ಫ್ಯಾಷನ್ ಐಕಾನ್ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ವಿಭಿನ್ನ ಶೈಲಿ ಬಟ್ಟೆ, ಬಟ್ಟೆಗೆ ತಕ್ಕ ಬೂಟುಗಳು, ಸನ್ಗ್ಲಾಸ್, ಸ್ಟೈಲಿಶ್ ಬ್ಯಾಗ್ ಮೂಲಕ ತಮ್ಮ ನೋಟ ಪೂರ್ಣಗೊಳಿಸಿಕೊಂಡರು.
ದೀಪಿಕಾ ಅವರು ವಿಮಾನ ನಿಲ್ದಾಣದೊಳಗೆ ಸಾಗುತ್ತಿದ್ದಂತೆ ಅಲ್ಲೇ ನಿಂತಿದ್ದ ಪಾಪರಾಜಿಗಳನ್ನು ನೋಡಿ ಮುಗುಳ್ನಗೆ ಬೀರಿದರು. ಬಳಿಕ ಕ್ಯಾಮರಾಗಳ ಕಣ್ಣೊಳಗೆ ಸೆರೆಯಾಗಲು, ಪರ್ಫೆಕ್ಟ್ ಪೋಸ್ ನೀಡಿದರು. ಪಠಾಣ್ ನಟಿ ಏರ್‌ಪೋರ್ಟ್ ಲುಕ್‌ನಲ್ಲಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದು, ಈ ಪೋಸ್ಟ್ ಶೇರ್ ಆದ ತಕ್ಷಣ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು. ನಟಿಯ ಗುಣಗಾನದ ಕಾಮೆಂಟ್ಗಳ ಜೊತೆಗೆ, ಫೈಯರ್ ಮತ್ತು ಹಾರ್ಟ್ ಎಮೋಜಿಗಳು ಸಹಜವಾಗಿ ಕಾಮೆಂಟ್ ವಿಭಾಗದಲ್ಲಿ ತುಂಬಿದ್ದವು.