ಚೇತನ್ ಕುಮಾರ್ ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಬರ್ಮ'ದ ಶೂಟಿಂಗ್ ಭರದಿಂದ ಸಾಗುತ್ತಿದೆ. ಟೈಟಲ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಅಂಗಳದಿಂದ ಲೇಟೆಸ್ಟ್ ಅಪ್ಡೇಟ್ ಹೊರಬಿದ್ದಿದೆ. ಬರ್ಮಾ ಬಳಗದಲ್ಲಿ ಯಾವ ಯಾವ ತಾರೆಯರು ಇರ್ತಾರೆ? ಯಾರು ಚಿತ್ರದ ಭಾಗವಾಗಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದರೆ ಈಗ ನಿರ್ದೇಶಕ ಚೇತನ್ ಕುಮಾರ್ ಬರ್ಮಾ ಗಾಗಿ ಬಾಲಿವುಡ್ ತಾರೆಯನ್ನು ಕರೆದು ತಂದಿದ್ದಾರೆ.
ಬರ್ಮ ಅಖಾಡಕ್ಕೀಗ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದೆ. ಹಿಂದಿ ಮಾತ್ರವಲ್ಲ, ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಶಾವರ್ ಅಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಆದಿತ್ಯ ನಟನೆಯ ರೆಬಲ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಶಾವರ್ ಅಲಿ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ನಂತರ ಮಗದೊಮ್ಮೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಬಣ್ಣದ ಬದುಕು ಆರಂಭಿಸಿದ್ದ ಅವರೀಗ ಟಾಲಿವುಡ್, ಸ್ಯಾಂಡಲ್ವುಡ್ನಲ್ಲಿಯೂ ಮಿಂಚುತ್ತಿದ್ದು, ಚೇತನ್ ಕುಮಾರ್ ಸಾರಥ್ಯದಲ್ಲಿ ತಯಾರಾಗುತ್ತಿರುವ ಬರ್ಮ ಸಿನಿಮಾದಲ್ಲಿ ಸ್ಪೆಷಲ್ ರೋಲ್ನಲ್ಲಿ ಶಾವರ್ ಅಲಿ ನಟಿಸುತ್ತಿದ್ದಾರೆ.