ಮುಂಬೈ (ಮಹಾರಾಷ್ಟ್ರ):ಗುರುವಾರ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಹಿಂದುರುಗುವ ವೇಳೆ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ನಟನ ಆಪ್ತ ವಲಯಗಳಿಂದ ಬಂದಿರುವ ಮಾಹಿತಿ ಪ್ರಕಾರ, 47 ವರ್ಷದ ಶ್ರೇಯಸ್ ತಲ್ಪಾಡೆ ಬಾಲಿವುಡ್ 'ವೆಲ್ಕಮ್ ಟು ದ ಜಂಗಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಿನ್ನೆಯ ಚಿತ್ರೀಕರಣ ಮುಗಿದ ನಂತರ ನಟನಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಸ್ಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೆಲ್ಕಮ್ ಟು ದ ಜಂಗಲ್ ಚಿತ್ರವು 2007ಎ 'ವೆಲ್ಕಮ್' ಮೂವೀ 1 ರ ಮುಂದುವರೆದ 3 ನೇ ಭಾಗವಾಗಿದೆ. ಎರಡನೇ ಭಾಗ 'ವೆಲ್ಕಮ್ ಬ್ಯಾಕ್' 2015 ರಲ್ಲಿ ತೆರೆ ಕಂಡಿತು. ವೆಲ್ಕಮ್ ಟು ದಿ ಜಂಗಲ್ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನದಂದು ಅಂದರೆ, ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಅನಾವರಣಗೊಂಡಿತ್ತು. ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಆಗಿರುವ 'ವೆಲ್ಕಮ್ 3' ಬಹುದೊಡ್ಡ ತಾರಾಗಣ ಹೊಂದಿದೆ.