ಜನತಾ ಗ್ಯಾರೇಜ್ ಖ್ಯಾತಿಯ ನಿರ್ದೇಶಕ ಕೊರಟಾಲ ಶಿವ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನಲ್ಲಿ ತೆರೆಕಾಣಲು ಸಿದ್ಧಗೊಳ್ಳುತ್ತಿರುವ ಚಿತ್ರ 'ಎನ್ಟಿಆರ್ 30'. ಚಿತ್ರತಂಡ ಇತ್ತೀಚೆಗಷ್ಟೇ ಸಿನಿಮಾದ ಮೊದಲ ಹಂತದ ಶೆಡ್ಯೂಲ್ ಮುಗಿಸಿ, ಎರಡನೇ ಹಂತದ ಶೆಡ್ಯೂಲ್ ಪ್ರಾರಂಭಿಸಿದೆ. ಇದಕ್ಕಾಗಿಯೇ ಹೈದರಾಬಾದ್ನಲ್ಲಿ ವಿಶೇಷ ಸೆಟ್ ಅನ್ನು ಏರ್ಪಡಿಸಲಾಗಿದೆ. ಶೂಟಿಂಗ್ ಸಲುವಾಗಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಹೈದರಾಬಾದ್ಗೆ ಆಗಮಿಸಿದ್ದಾರೆ. ಸೈಫ್ ಶೂಟಿಂಗ್ ಸ್ಪಾಟ್ನಲ್ಲಿ ಕಾಣಿಸಿಕೊಂಡಿರುವುದು ಸಖತ್ ಸುದ್ದಿ ಕೂಡಾ ಆಗಿದೆ.
'ಎನ್ಟಿಆರ್ 30' ಸಿನಿಮಾದ ನಿರ್ಮಾಣ ಸಂಸ್ಥೆ ಎನ್ಟಿಆರ್ ಆರ್ಟ್ಸ್ ಟ್ವಿಟರ್ ಮೂಲಕ ಈ ವಿಷಯವನ್ನು ತಿಳಿಸಿದೆ. ಸೆಟ್ನಲ್ಲಿ ಕೊರಟಾಲ ಶಿವ ಮತ್ತು ಜೂನಿಯರ್ ಎನ್ಟಿಆರ್ ಜೊತೆಗೆ ಸೈಫ್ ಎಂಜಾಯ್ ಮಾಡುತ್ತಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಇಂದು ಆರಂಭವಾದ ಎರಡನೇ ಶೆಡ್ಯೂಲ್ನಲ್ಲಿ ಸೈಫ್ ಅಲಿ ಖಾನ್ ಜೊತೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್ ಕೂಡ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಂಡ ಸ್ಟಾರ್ಗಳು ಚಿತ್ರದ ಸೆಟ್ಗೆ ಪ್ರವೇಶಿಸಿದ್ದಾರೆ. ಇದರಲ್ಲಿ ವಿಶೇಷ ಏನೆಂದರೆ ಸೈಫ್ ಮತ್ತು ಜಾಹ್ನವಿ ಕಪೂರ್ಗೆ ಇದು ತೆಲುಗಿನಲ್ಲಿ ಮೊದಲ ಚಿತ್ರವಾಗಿದೆ.
ಇದನ್ನೂ ಓದಿ:'ಪ್ರೀತಿಸಲು ನನಗೆ ಸಮಯವಿಲ್ಲ': ಶೆಹನಾಜ್ ಜೊತೆ ಡೇಟಿಂಗ್ ವದಂತಿಗೆ ರಾಘವ್ ಪ್ರತಿಕ್ರಿಯೆ
ಎನ್ಟಿಆರ್ 30 ಚಿತ್ರತಂಡ ಹೀಗಿದೆ...ಜನತಾ ಗ್ಯಾರೇಜ್ ನಂತರ ಕೊರಟಾಲ ಶಿವ ಅವರು ಎನ್ಟಿಆರ್ ಜೊತೆ ಕೈ ಜೋಡಿಸಿರುವ ಸಿನಿಮಾ 'ಎನ್ಟಿಆರ್ 30'. ಈಗಾಗಲೇ ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾವೊಂದು ಹಿಟ್ ಆಗಿರುವ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಇದಲ್ಲದೇ ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ರಂತಹ ಸ್ಟಾರ್ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಕಾರಣ ಸಿನಿ ಪ್ರೇಕ್ಷಕರ ಕುತೂಹಲ ದುಪ್ಪಟ್ಟಾಗಿದೆ. ಹಾಲಿವುಡ್ ಸ್ಟಂಟ್ ಮೇಲ್ವಿಚಾರಕರು ಮತ್ತು ವಿಎಫ್ಎಕ್ಸ್ ತಂಡ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವುದು ಗಮನಾರ್ಹ.
ಅದಲ್ಲದೇ ಜೂನಿಯರ್ ಎನ್ಟಿಆರ್ ಮತ್ತು ಜಾಹ್ನವಿ ಕಪೂರ್ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು ಹೀಗಾಗಿ ಸಿನಿಮಾ ಸೂಪರ್ ಹಿಟ್ ಸಾಲಿಗೆ ಸೇರಲಿದೆ ಎಂಬುದು ಫ್ಯಾನ್ಸ್ ಸೇರಿದಂತೆ ಚಿತ್ರತಂಡದ ವಿಶ್ವಾಸ. ಮತ್ತೊಂದೆಡೆ ಚಿತ್ರವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣ ಮಾಡುವುದಾಗಿ ಚಿತ್ರತಂಡ ತಿಳಿಸಿದೆ ಮತ್ತು ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಗೊಳಿಸಲು ಚಿಂತಿಸಿದೆ.
ಅದ್ಧೂರಿ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. ಆರ್ ರತ್ನಮೇಲು ಕ್ಯಾಮರಾ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀಕರ್ ಪ್ರಸಾದ್ ಈ ಚಿತ್ರದ ಸಂಕಲನಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿನಿಮಾಗೆ ಟೈಟಲ್ ಇನ್ನೂ ಅಂತಿಮವಾಗಿಲ್ಲ. ಸದ್ಯ ಎನ್ಟಿಆರ್ 30 ಎಂದೇ ಕರೆಯಲಾಗುತ್ತಿದೆ.
ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್ ಕ್ರಿಕೆಟಿಗನ ಜತೆ ಡೇಟಿಂಗ್ ವದಂತಿ.. ಅಭಿಮಾನಿಗಳಿಂದ ಕಮೆಂಟ್