ಕರ್ನಾಟಕ

karnataka

ETV Bharat / entertainment

'ಹೆವಿ ವರ್ಕೌಟ್​ ಬೇಡ...': ಸಮಂತಾಗೆ 'ದಿ ಫ್ಯಾಮಿಲಿಮ್ಯಾನ್‌' ಮನೋಜ್​ ಬಾಜಪೇಯಿ ಸಲಹೆ - ಈಟಿವಿ ಭಾರತ ಕನ್ನಡ

ಸಮಂತಾ ಅವರಿಗೆ ಮನೋಜ್​ ಬಾಜಪೇಯಿ ಆರೋಗ್ಯ ಕುರಿತು ಸಲಹೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿಯ ಪರಿಶ್ರಮದ ಬಗ್ಗೆ ಮಾತನಾಡಿದರು.

samantha
ಸಮಂತಾಗೆ ನಟ ಮನೋಜ್​ ಬಾಜಪೇಯಿ ಸಲಹೆ

By

Published : Feb 19, 2023, 10:29 AM IST

ನಟಿ ಸಮಂತಾ ರುತ್ ಪ್ರಭು ಅವರು ಈ ಹಿಂದೆ ಕೊಂಚ ಕಾಲ ಮಾಧ್ಯಮದ ಮುಂದೆ ಕಾಣಿಸಿಕೊಂಡಿರಲಿಲ್ಲ. ದಾಂಪತ್ಯ ಜೀವನದಲ್ಲಿ ಮೂಡಿದ್ದ ಬಿರುಕು, ಜೊತೆಗೆ ಮೈಯೋಸಿಟಿಸ್​ ಕಾಯಿಲೆ ಅವರನ್ನು ದೈಹಿಕ ಹಾಗು ಮಾನಸಿಕವಾಗಿ ಬಹುವಾಗಿ ಕುಗ್ಗಿಸಿತ್ತು. ಈಗಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಅವರು ತಮ್ಮ ಫಿಟ್ನೆಸ್​ ಕಾಪಾಡಲು ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ನಟಿ ವರ್ಕೌಟ್​ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಆದರೆ ಸಂಪೂರ್ಣವಾಗಿ ಗುಣಮುಖರಾಗದೇ ಸಿನಿಮಾಕ್ಕಾಗಿ ದೇಹವನ್ನು ದಂಡಿಸುತ್ತಿರುವ ಸಮಂತಾರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ದಿ ಫ್ಯಾಮಿಲಿ ಮ್ಯಾನ್​ 2 ವೆಬ್‌ ಸೀರೀಸ್‌ ಸಂದರ್ಶನವೊಂದರಲ್ಲಿ ಬಾಲಿವುಡ್​ ನಟ ಮನೋಜ್​ ಬಾಜಪೇಯಿ ಅವರು ಸಮಂತಾ ಬಗ್ಗೆ ಮಾತನಾಡಿದರು. "ಸಮಂತಾ ಕಠಿಣ ಪರಿಶ್ರಮಿ ಎಂದು ನನಗೆ ಗೊತ್ತು. ಅವರ ಜೊತೆ ಕೆಲಸ ಮಾಡಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ" ಎಂದಿದ್ದಾರೆ.

ದಿ ಫ್ಯಾಮಿಲಿ ಮ್ಯಾನ್ 2 ವೆಬ್​ಸಿರೀಸ್‌ ಚಿತ್ರೀಕರಣಕ್ಕಾಗಿ ಸಮಂತಾ ತಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಮನೋಜ್​ ಬಾಜಪೇಯಿ ಅವರು ಸಮಂತಾ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಈಗಷ್ಟೇ ಸಮಂತಾ ಚೇತರಿಸಿಕೊಂಡಿದ್ದಾರೆ. ಹೆವಿ ವರ್ಕೌಟ್​ ಮತ್ತು ವ್ಯಾಯಾಮ ಬಿಟ್ಟು ಸರಳ ವ್ಯಾಯಾಮಗಳನ್ನು ಮಾತ್ರ ಮಾಡುವಂತೆ ಸಲಹೆ ನೀಡಿದ್ದಾರೆ. ಈ ವಿಡಿಯೋ ತುಣುಕು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಸಮಂತಾ ಅಭಿನಯದ 'ಶಾಕುಂತಲಂ' ಸಿನಿಮಾದ ಮೊದಲ ಹಾಡು ಬಿಡುಗಡೆ; ಎದೆ ಬಡಿತ ಹೆಚ್ಚಿಸಿದ ನಟಿ

ಮನೋಜ್​ ಬಾಜಪೇಯಿ ಕಾಳಜಿಗೆ ಮನಸೋತ ಸಮಂತಾ ಸಂದರ್ಶನದ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡಿ, "ನಾನು ಪ್ರಯತ್ನಿಸುತ್ತೇನೆ ಸರ್"​ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಪ್ಪುಗೆ ಮತ್ತು ಹೃದಯದ ಇಮೋಜಿ ಸೇರಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್​ 2 ಸಿನಿಮಾದ ಪಾತ್ರಕ್ಕಾಗಿ ಸಮಂತಾ ಸಾಕಷ್ಟು ಅಪಾಯಗಳನ್ನು ಎದುರಿಸುವಂತಾಗಿತ್ತು. ಸಿನಿಮಾದಲ್ಲಿ ಅವರನ್ನು ಕಂಡ ಅಭಿಮಾನಿಗಳಂತೂ "ನಮ್ಮ ಸುಂದರ ಸಮಂತಾಗೆ ನೀವು ಏನು ಮಾಡಿದ್ದೀರಿ?" ಎಂಬುದಾಗಿ ಕಮೆಂಟ್​ಗಳನ್ನು ಮಾಡಿದ್ದರು. ಫ್ಯಾನ್ಸ್​ ಖುಷಿಗಾಗಿ ಎಂತಹದ್ದೇ ಕಠಿಣ ಪಾತ್ರವನ್ನು ಕೂಡ ಸಮಂತಾ ಛಲದಿಂದ ನಿಭಾಯಿಸುತ್ತಾರೆ.

'ಶಾಕುಂತಲಂ' ಬಿಡುಗಡೆಗೆ ಸಜ್ಜು: ಗುಣಶೇಖರ್​ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಶಾಕುಂತಲಂ' ಬಿಡುಗಡೆಗೆ ಸಜ್ಜಾಗಿದೆ. ಪ್ರಮುಖ ಪಾತ್ರದಲ್ಲಿ ನಟಿ ಸಮಂತಾ ರುತ್​ ಪ್ರಭು ಮಿಂಚಿದ್ದಾರೆ. ಜೊತೆಗೆ ಮೋಹನ್​ ಬಾಬು, ಮಧು, ಗೌತಮಿ, ಅದಿತಿ ಬಾಲನ್​ ಮತ್ತು ಅನನ್ಯ ನಾಗಲ್ಲ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಕಾಳಿದಾಸನ ಅಭಿಜ್ಞಾನ ಶಾಕುಂತಲಂ ಕಥೆಯನ್ನು ಆಧರಿಸಿದೆ. ಸಿನಿಮಾ ಫೆಬ್ರವರಿ 17ರಂದು ಬಿಡುಗಡೆಯಾಗಬೇಕಿದ್ದು, ಕಾರಣಾಂತರಗಳಿಂದ ಏಪ್ರಿಲ್​ 14 ರಂದು ತೆರೆಕಾಣಲಿದೆ. ಚಿತ್ರದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳ 'ಶಾಕುಂತಲಂ' ಕಾತುರತೆಯ ಮಟ್ಟ ಮತ್ತಷ್ಟು ಹೆಚ್ಚಿದೆ.

ಇದನ್ನೂ ಓದಿ:ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸಮಂತಾ ಭೇಟಿ: 600 ಮೆಟ್ಟಿಲುಗಳಿಗೂ ಕರ್ಪೂರ ಹಚ್ಚಿ ಹೆಜ್ಜೆ ಹಾಕಿದ ನಟಿ

ABOUT THE AUTHOR

...view details