ಕರ್ನಾಟಕ

karnataka

ETV Bharat / entertainment

ಹುಟ್ಟುಹಬ್ಬದ ಸಂಭ್ರಮದಲ್ಲಿ DDLJ ನಟಿ ಕಾಜೋಲ್ - ಕಾಜೋಲ್ ದೇವಗನ್ ಹುಟ್ಟುಹಬ್ಬ

ಇಂದು ಬಾಲಿವುಡ್ ನಟಿ ಕಾಜೋಲ್ ಜನ್ಮ ದಿನ. ನಟಿಯ ಹುಟ್ಟುಹಬ್ಬಕ್ಕೆ ಚಿತ್ರರಂಗದ ಅನೇಕರು ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.

Kajol
ಕಾಜೋಲ್

By

Published : Aug 5, 2022, 12:12 PM IST

ಬಾಲಿವುಡ್ ಖ್ಯಾತ ನಟಿ ಕಾಜೋಲ್ ದೇವಗನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 48 ನೇ ವರ್ಷಕ್ಕೆ ಕಾಲಿಟ್ಟಿರುವ 'ದಿಲ್​ವಾಲೆ ದುಹ್ಲನಿಯಾ ಲೇ ಜಾಯೇಂಗೆ' ಚಿತ್ರದ ನಟಿ ಸಾಮಾಜಿಕ ಜಾಲತಣದಲ್ಲಿ ಜನ್ಮ ದಿನ ಆಚರಣೆಯ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ನಟಿ ಕಾಜೋಲ್ ಹುಟ್ಟುಹಬ್ಬ

1992ರಲ್ಲಿ ಬಿಡುಗಡೆಯಾದ ‘ಬೇಕುದಿ’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ವೃತ್ತಿಜೀವನ ಆರಂಭಿಸಿದ ಕಾಜೋಲ್, ತಮ್ಮ ನಟನಾ ಕೌಶಲ್ಯದಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚೆಗೆಷ್ಟೇ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಿದ್ದರು.

ನಟಿ ಕಾಜೋಲ್

ಒಂದು ಕಾಲದಲ್ಲಿ ನಟಿ ಕಾಜೋಲ್​ ಮತ್ತು ಶಾರುಖ್​ ಖಾನ್​ ಅವರದ್ದು ಬಾಲಿವುಡ್​ನಲ್ಲಿ ಸೂಪರ್​ ಹಿಟ್​ ಜೋಡಿಯಾಗಿತ್ತು. ದಿಲ್​ವಾಲೆ ದುಹ್ಲನಿಯಾ ಲೇ ಜಾಯೇಂಗೆ, ಕುಚ್​ ಕುಚ್​ ಹೋತಾ ಹೈ, ಬಾಜಿಗರ್​ ಮುಂತಾದ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಿದ್ದರು.

ನಟಿ ಕಾಜೋಲ್

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಜೊತೆ ಅನೇಕ ಜಾಹೀರಾತುಗಳಲ್ಲಿ ಸಹ ಮಿಂಚಿದ್ದಾರೆ. ಜೊತೆಗೆ ತಮ್ಮ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನಟಿ ಕಾಜೋಲ್

ಇನ್ನು ಬಾಲಿವುಡ್​ ನಟ ಅಜಯ್ ದೇವಗನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾಜೋಲ್‌ ಸತತ 23 ವರ್ಷಗಳನ್ನ ಪೂರೈಸಿದ್ದಾರೆ. 1999ರಲ್ಲಿ ತೆರೆಕಂಡ 'ಪ್ಯಾರ್ ತೋ ಹೋನಾ ಹಿ ಥಾ' ಸಿನಿಮಾದಲ್ಲಿ ಈ ಸ್ಟಾರ್​ ದಂಪತಿ ಮಿಂಚಿದ್ದರು.

ಅಜಯ್ ದೇವಗನ್ ಜೊತೆ ನಟಿ ಕಾಜೋಲ್

ಇದನ್ನೂ ಓದಿ:'ಪ್ಯಾರ್ ತೋ ಹೋನಾ ಹಿ ಥಾ'... ವಿವಾಹ ವಾರ್ಷಿಕೋತ್ಸವಕ್ಕೆ ಕಾಜೋಲ್‌ಗೆ ಅಜಯ್ ದೇವಗನ್ ಸ್ಪೆಷಲ್​ ವಿಶ್​

ABOUT THE AUTHOR

...view details