ಕರ್ನಾಟಕ

karnataka

ETV Bharat / entertainment

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ.. ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ - ಸೋನಾಲಿ ಫೋಗಟ್ ಸಾವಿನ ತನಿಖೆ

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ ಸಂಬಂಧ ಸಿಬಿಐ ತನಿಖೆ ಆಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

BJP leader Sonali Phogat death
ಸೋನಾಲಿ ಫೋಗಟ್ ನಿಧನದ ತನಿಖೆಗೆ ಕುಟುಂಬಸ್ಥರ ಒತ್ತಾಯ

By

Published : Aug 24, 2022, 1:13 PM IST

ಹರಿಯಾಣದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ (43) ಗೋವಾದಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಫೋಗಟ್ ತಮ್ಮ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ಅವರು ಸಾವನ್ನಪ್ಪಿದ್ದಾರೆ.

ಸೋನಾಲಿ ಫೋಗಟ್ ಕುಟುಂಬಸ್ಥರು ಸಾವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಈ ವಿಷಯದಲ್ಲಿ ತಪ್ಪು ಸಂದೇಶ ಹರಿದಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸಾವಿನ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಸೋನಾಲಿ ಫೋಗಟ್ ಅವರನ್ನು ಆಗಸ್ಟ್ 23ರಂದು ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಎಂದು ಹಲವು ವರದಿಗಳು ತಿಳಿಸಿವೆ. ಸೋನಾಲಿ ಅವರ ಸಹೋದರಿ ರೂಪೇಶ್ ಅವರು ಈ ಬಗ್ಗೆ ಮಾತನಾಡಿ, ಸೋನಾಲಿ ಫೋಗಟ್ ನಿಧನ ಆಗುವ ಒಂದು ದಿನದ ಮೊದಲು ತಮ್ಮ ತಾಯಿಯೊಂದಿಗೆ ಮಾತನಾಡಿದ್ದರು, ಆ ವೇಳೆ ತನಗೆ ಊಟದ ನಂತರ ಅನ್​ ಈಸಿ ಎಂದು ಅನಿಸುತ್ತಿದೆ ಎಂದು ಸೋನಾಲಿ ತಾಯಿಯೊಂದಿಗೆ ತಿಳಿಸಿದ್ದರು ಎಂದು ಹೇಳಿದರು.

ಸೋನಾಲಿ ಫೋಗಟ್ ಸಾವಿನ ಹಿಂದಿನ ಸಂಜೆ ನನಗೆ ಅವರಿಂದ ಕರೆ ಬಂದಿತ್ತು. ವಾಟ್ಸ್ಆ್ಯಪ್​ನಲ್ಲಿ ಮಾತನಾಡಲು ಬಯಸಿದ್ದರು. ಪರಿಸ್ಥಿತಿ ಏನೋ ಸರಿ ಇಲ್ಲದಂತಿತ್ತು. ನಂತರ ಸೋನಾಲಿ ತಾಯಿಯೊಂದಿಗೆ ಮಾತನಾಡಿ, ಊಟ ಮಾಡಿದ ನಂತರ ಅಸ್ವಸ್ಥತೆಯ ಬಗ್ಗೆ ದೂರು ನೀಡಿದ್ದರು. ಊಟ ತಿಂದ ನಂತರ ಆಕೆಯ ದೇಹವು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಸೋನಾಲಿ ಅವರ ಸಹೋದರಿ ರೂಪೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ನಿಧನ

ಸೋನಾಲಿ ಅವರ ಹಿರಿಯ ಸಹೋದರಿ ರಾಮನ್ ಮಾತನಾಡಿ, ಸೋನಾಲಿ ಫೋಗಟ್ ದೈಹಿಕವಾಗಿ ಸದೃಢರಾಗಿದ್ದರು. ಅವರಿಗೆ ಹೃದಯಾಘಾತವಾಗಿಲ್ಲ. ಸೂಕ್ತ ಸಿಬಿಐ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಅವರಿಗೆ ಅಂತಹ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ ಎಂದು ಹೇಳಿದರು.

ABOUT THE AUTHOR

...view details