ಬಿಗ್ ಬಾಸ್ ಮಾಜಿ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಉರ್ಫಿ ಜಾವೇದ್ ತಮ್ಮ ವಿಭಿನ್ನ ಸ್ಟೈಲಿಶ್ ಫ್ಯಾಷನ್‌ಗಾಗಿ ಸುದ್ದಿಯಲ್ಲಿದ್ದಾರೆ. ಇದೇ ವಿಚಾರವಾಗಿ ಸಾಕಷ್ಟು ಟೀಕೆ, ಟ್ರೋಲ್ಗೆ ಒಳಗಾಗಿದ್ದಾರೆ. ಇವರ ವೇಷಭೂಷಣ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾರೆ. ಇವರ ಉಡುಪಿನ ಶೈಲಿಯ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ಬಿಜೆಪಿ ನಾಯಕಿ ಚಿತ್ರಾ ವಾಘ್ ಮುಂಬೈ ಪೊಲೀಸರಲ್ಲಿ ಒತ್ತಾಯಿದ್ದರು. ಚಿತ್ರಾ ವಾಘ್ ಒತ್ತಾಯಕ್ಕೆ ನಟಿ ಉರ್ಫಿ ಜಾವೇದ್ ಕೂಡ ಖಡಕ್ ಆಗಿ ಪ್ರತಿಕ್ರಿಯಿಸಿದ್ದರು. ಈ ವಿಚಾರ ಮತ್ತಷ್ಟು ತಾರಕಕ್ಕೇರುವಂತೆ ಕಾಣುತ್ತಿದೆ.
ಉರ್ಫಿ ವಿರುದ್ಧ ರೊಚ್ಚಿಗೆದ್ದ ಚಿತ್ರಾ:'' ಮುಂಬೈನ ಪ್ರಮುಖ ಬೀದಿಗಳಲ್ಲಿ ತಮ್ಮ ದೇಹದ ಅಂಗಾಂಗಗಳನ್ನು ಪ್ರದರ್ಶಿಸಿ ತಿರುಗಾಡುತ್ತಿರುವ ಮಾಡೆಲ್, ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಎಂದು ಮುಂಬೈನ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರು ಕೆಲ ದಿನಗಳ ಹಿಂದೆ ಒತ್ತಾಯಿಸಿದ್ದರು. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ ಸತ್ಯನಾರಾಯಣ ಚೌಧರಿ ಅವರನ್ನು ಭೇಟಿ ಮಾಡಿ ಉರ್ಫಿ ಜಾವೇದ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಪತ್ರ ಸಲ್ಲಿದ್ದರು. ಉರ್ಫಿ ವಿರುದ್ಧ ಚಿತ್ರಾ ವಾಘ್ ರೊಚ್ಚಿಗೆದ್ದಿದ್ದು, ಏನೇ ಆಗಲಿ ಪೊಲೀಸರು ಉರ್ಫಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಉರ್ಫಿ ಜಾವೇದ್ ತಿರುಗೇಟು: ಚಿತ್ರಾ ವಾಘ್ ಅವರು ಉರ್ಫಿ ಜಾವೇದ್ ಅವರ ವಿರುದ್ಧ ಒಂದರ ಹಿಂದೆ ಒಂದರಂತೆ ಆರೋಪ ಮಾಡುತ್ತಿದ್ದಾರೆ. ಮತ್ತೊಂದೆಡೆ, ಉರ್ಫಿ ಜಾವೇದ್ ಕೂಡ ಹಿಂದೆ ಸರಿದಿಲ್ಲ. ಚಿತ್ರಾ ವಾಘ್ ಅವರಿಗೆ ತಮ್ಮದೇ ಶೈಲಿಯಲ್ಲಿ ಸವಾಲು ಹಾಕಿದ್ದಾರೆ. ಚಿತ್ರಾ ವಾಘ್ ತನ್ನ ಸಂಪತ್ತು ಬಹಿರಂಗಪಡಿಸಿದರೆ ಜೈಲಿಗೆ ಹೋಗಲು ಸಿದ್ಧ ಎಂದು ಉರ್ಫಿ ಹೇಳಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಪೋಸ್ಟ್ ಮಾಡಿದ ಅವರು, ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಬಳಿಕ ಉರ್ಫಿ ಅವರು ಚಿತ್ರಾ ವಾಘ್‌ರಿಗೆ ಸಲಹೆಯನ್ನೂ ನೀಡಿದ್ದಾರೆ. "ನಿಮಗಾಗಿ ನನ್ನ ಬಳಿ ಒಂದು ಉತ್ತಮ ಉಪಾಯವಿದೆ. ಮುಂಬೈನಲ್ಲಿ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯ ವಿಷಯಗಳು ಇನ್ನೂ ನಡೆಯುತ್ತಿವೆ. ಅದರ ಬಗ್ಗೆ ಏನಾದರೂ ಮಾಡುವ ಬಗ್ಗೆ ಯೋಚಿಸಿ. ಇದುವರೆಗೂ ಚಾಲನೆಯಲ್ಲಿರುವ ಅಕ್ರಮ ಡ್ಯಾನ್ಸ್ ಬಾರ್‌ಗಳನ್ನು ಮುಚ್ಚಿಸಿ" ಎಂದು ಉರ್ಫಿ ತಮ್ಮ ಟ್ವೀಟ್‌ನಲ್ಲಿ ವಾಘ್ಗೆ ಸವಾಲು ಹಾಕಿದ್ದರು.