ಕರ್ನಾಟಕ

karnataka

ETV Bharat / entertainment

ಸುದೀಪ್-ಅನೂಪ್ ಭಂಡಾರಿ ಕಾಂಬಿನೇಶನ್​ನಲ್ಲಿ ಬರಲಿದೆ 'ಬಿಲ್ಲ ರಂಗ ಭಾಷ' - Sudeep next film

ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್​ನಲ್ಲಿ ಬಿಲ್ಲ ರಂಗ ಭಾಷ ಸಿನಿಮಾ ಬರಲಿದೆ.

Billa Ranga Bhasha
ಬಿಲ್ಲ ರಂಗ ಭಾಷ

By

Published : Jun 25, 2022, 8:08 PM IST

ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಸದ್ಯ ಟ್ರೈಲರ್​ನಿಂದಲೇ ಭಾರತೀಯ ಸಿನಿಮಾ ರಂಗದಲ್ಲಿ ಕ್ರೇಜ್ ಹುಟ್ಟಿಸಿರೋ ಈ ಸಿನಿಮಾ ಜುಲೈ 28ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಅನೌನ್ಸ್​ ಮಾಡಿದ್ದಾರೆ. ಅದುವೇ ಬಿಲ್ಲ ರಂಗ ಭಾಷ.

ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಟೈಮಲ್ಲಿ ಸುದೀಪ್ ಅವರು ಅನೂಪ್ ಭಂಡಾರಿ ಜೊತೆ ಬಿಲ್ಲ ರಂಗ ಭಾಷ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆಂದು ಸ್ಯಾಂಡಲ್​ವುಡ್​ನಲ್ಲಿ ಬೇಜಾನ್ ಟಾಕ್ ಆಗಿತ್ತು. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಕೂಡ ಸರಿಯಾಗಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ಬಿಲ್ಲ ರಂಗ ಭಾಷ ಸಿನಿಮಾ ಟೇಕಾಫ್ ಆಗುತ್ತೆ ಅಂತಾ ಕಿಚ್ಚ ಹೇಳಿದ್ದಾರೆ.

ಇದನ್ನೂ ಓದಿ:ಉಪಾಧ್ಯಕ್ಷ ಸಿನಿಮಾ‌ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್​​ಪ್ರೈಸ್​ ಭೇಟಿ.. ಚಿಕ್ಕಣ್ಣ, ಸಾಧು ಖುಷ್​

ಈ ಹಿಂದೆ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದ ಹಾಗೆ ಬಿಲ್ಲ ರಂಗ ಭಾಷ ಸಿನಿಮಾ ಪಕ್ಕಾ ಮಾಸ್‌ ಎಂಟರ್‌ಟೈನ್ಮೆಂಟ್‌ ಚಿತ್ರ. ಪಾಚೀನ ಕಾಲದ ರಾಜನೊಬ್ಬನ ಕಥೆಯಾಗಿದ್ದು, ಚಿತ್ರದಲ್ಲಿ ಸುದೀಪ್‌ ರಾಜನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅನೂಪ್‌ ಈ ಕಥೆಯನ್ನು 18 ವರ್ಷಗಳ ಹಿಂದೆಯೇ ಸಿದ್ಧಮಾಡಿಕೊಂಡಿದ್ದರಂತೆ. ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌ ಅವರ ಬ್ಯಾನರ್‌ ಸುಪ್ರಿಯಾನ್ವಿ ಪ್ರೊಡಕ್ಷನ್‌ ಈ ಚಿತ್ರವನ್ನು ನಿರ್ಮಾಣ ಮಾಡಲು ಈ ಹಿಂದೆ ಮಾತುಕಥೆ ಆಗಿತ್ತು. ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬಂದ ಮೇಲೆ ಈ ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗೋದು ಪಕ್ಕಾ ಆಗಿದೆ. ಈ ವಿಷಯ ತಿಳಿದ ಕಿಚ್ಚನ ಅಭಿಮಾನಿಗಳು ಕೂಡ ದಿಲ್ ಖುಷ್ ಆಗಿದ್ದಾರೆ.

ABOUT THE AUTHOR

...view details