ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10 ಈಗಾಗಲೇ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಮೊದಲ ವಾರದ ವೀಕೆಂಡ್ ಎಪಿಸೋಡ್ನಲ್ಲಿ (ವಾರದ ಕಥೆ ಕಿಚ್ಚನ ಜೊತೆ) ತುಕಾಲಿ ಸಂತೋಷ್ ಮಾಡುತ್ತಿರುವ ಕಾಮಿಡಿ ಬೇರೆಯವರಿಗೆ ಸಾಕಷ್ಟು ನೋವು ಕೊಡುತ್ತಿದೆ ಎಂಬ ಬಗ್ಗೆ ಚರ್ಚೆಯಾಗಿತ್ತು.
ಕಿಚ್ಚ ಸುದೀಪ್ ಕೂಡ ಅವರಿಗೆ ಆರೋಗ್ಯಕರ ಹಾಸ್ಯ ಮಾಡುವಂತೆ ಕಿವಿಮಾತು ಹೇಳಿದ್ದರು. ಎರಡನೇ ವಾರ ಆರಂಭವಾದಾಗ ತುಕಾಲಿ ಸಂತೋಷ್ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್ ಟಾಸ್ಕ್ನಲ್ಲಿ ಇಶಾನಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗಂತ, ತುಕಾಲಿ ಸಂತೋಷ್ ಅವರ ಕಾಮಿಡಿ ಮುಗಿದೋಯ್ತಾ?. ಖಂಡಿತ ಇಲ್ಲ.
ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ಸ್ನೇಹಿತ್, ವರ್ತೂರು ಸಂತೋಷ್ ಹಾಗೂ ಬುಲೆಟ್ ರಕ್ಷಕ್ ಹರಟೆಯಲ್ಲಿ ಮುಳುಗಿದ್ದರು. ಮಾತಿನ ನಡುವೆ ತುಕಾಲಿ ಸಂತೋಷ್ ಅವರು ವರ್ತೂರ್ ಸಂತೋಷ್ಗೆ, 'ಒಂದೇ ಬೆಡ್ನಲ್ಲಿ ಮಲೀಕಂಡು ಜಾತಕ ಹೇಳೋ ಲೇವಲ್ಲಿಗೆ ತಂದ್ಬಿಟ್ಯಲ್ಲಣ್ಣಾ ನೀನು' ಎಂದು ತಮಾಷೆ ಮಾಡಿದ್ದಾರೆ. ಇದೇ ಮಾತನ್ನು ಹಿಡಿದುಕೊಂಡು ಸ್ನೇಹಿತ್, 'ನಮ್ಮೆಲ್ಲರ ಜಾತಕ ಹೇಳಿ' ಎಂದಿದ್ದಾರೆ. ಹೀಗೆ ಮಾತು ಮುಂದುವರಿದಿದೆ.
ಸಂತೋಷ್:ನಾನು ಅಂಡರ್ 16ನಲ್ಲಿ ಒಳ್ಳೆಯ ಆಸ್ಟ್ರೋಲಜರ್…
ಸ್ನೆಹಿತ್: ಅಂಡರ್ 16 ಆಸ್ಟ್ರೋಲಜರ್ ಕೇಳಿದೀರಾ?
ಸಂತೋಷ್: ನೀವು ನಂಬಲ್ಲ…
ಸ್ನೇಹಿತ್: ಬಿಗ್ ಬಾಸ್ ನೀವೂ ನಂಬಲ್ಲ ಅಲ್ವಾ?