ಈ ವಾರ ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭವಾಗಿರುವ ಹಿರಿಯ ಪ್ರಾಥಮಿಕ ಶಾಲೆ ಜೋರಾಗೇ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ, ಅವರ ತುಂಟತನ ಜೋರಾಗೇ ಇದೆ. ಕಿಲಾಡಿತನದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. ಈ ಎಲ್ಲ ತುಂಟಾಟದ ಕ್ಷಣಗಳು ಕಾಣಿಸಿಕೊಂಡಿದ್ದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಇಂದಿನ ಪ್ರೋಮೋದಲ್ಲಿ. ಹೌದು, 'ಟೀಚರ್ಸ್ ಸುಸ್ತೋ ಸುಸ್ತು!' ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ನಮ್ರತಾ ಡಾನ್ಸ್ ಕ್ಲಾಸ್: ನಿನ್ನೆ ತನಿಷಾ ಟೀಚರ್ ಅವರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್ ಮೇಷ್ಟ್ರ ಜೊತೆಗೆ 'ರೋಮಾಂಚನವೀ ಕನ್ನಡ' ಎಂದು ಹಾಡಿದ್ದರು ಕೂಡ. ಪ್ರತಾಪ್ ಸರ್ ಬಳಿಯಿಂದ ಗಣಿತ ಕಲಿತು ಚುರುಕಾಗಿರುವ ಹುಡುಗರಿಗೆ ಇಂದು ನಮ್ರತಾ ಮ್ಯಾಮ್ ಡಾನ್ಸ್ ಹೇಳಿಕೊಟ್ಟಿದ್ದಾರೆ.
ಪಾಠದಲ್ಲಿಲ್ಲದ ಜೋಶ್ ಡಾನ್ಸ್‌ನಲ್ಲಿ....ವಿನಯ್, ಅವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್ ಬೋರ್ಡ್ ಎದುರು ಸಖತ್ ಡಾನ್ಸ್ ಮಾಡಿದ್ದಾರೆ. ಚಂದವಾಗಿ ಸೀರೆ ಉಟ್ಟುಕೊಂಡ ನಮ್ರತಾ ಮೇಡಂ ಸಖತ್ತಾಗಿ ಸ್ಟೆಪ್ ಹಾಕ್ತಿದ್ರೆ, ಇಂಥ ಅವಕಾಶಕ್ಕಾಗೇ ಕಾದು ಕುಳಿತಿರೋ ವಿದ್ಯಾರ್ಥಿಗಳು ಸುಮ್ಮನೆ ಕೂರುತ್ತಾರೆಯೇ?. ಪಾಠದಲ್ಲಿ ಇಲ್ಲದ ಜೋಶ್ ಡಾನ್ಸ್‌ನಲ್ಲಿ ಹೊರಹೊಮ್ಮಿದೆ.