ಕರ್ನಾಟಕ

karnataka

ETV Bharat / entertainment

ನೀಲ್ ​- ಅಂಕಿತಾ ನಡುವೆ ಮಾತಿನ ಚಕಮಕಿ: ಬಿಗ್​ಬಾಸ್​ನಿಂದ​ ತಾರತಮ್ಯ ಎಂದ ಅನುರಾಗ್​​ - bigg boss 17 salman khan

Bigg Boss 17: ಬಿಗ್​ ಬಾಸ್​ 17 ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

Bigg Boss 17: Neil Bhatt loses cool on Ankita Lokhande after nominations; Anurag Dobhal complains of Salman Khan and makers of being biased
Bigg Boss 17: Neil Bhatt loses cool on Ankita Lokhande after nominations; Anurag Dobhal complains of Salman Khan and makers of being biased

By ETV Bharat Karnataka Team

Published : Nov 27, 2023, 5:10 PM IST

ಹೈದರಾಬಾದ್​:ನಟ ಸಲ್ಮಾನ್​ ಖಾನ್​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಟಿವಿ ಶೋ ಬಿಗ್​​ಬಾಸ್​ 17ನೇ ಸೀಸನ್​ ಮತ್ತಷ್ಟು ಡ್ರಾಮಾ ಮತ್ತು ಮನರಂಜನೆ ಜೊತೆಗೆ ಕಿರುತೆರೆ ಪ್ರೇಕ್ಷಕರ ಮನರಂಜಿಸಲು ಸಿದ್ದವಾಗಿದೆ. ಕಾರ್ಯಕ್ರಮದ ಹೊಸ ಪ್ರೊಮೋಷನಲ್​ ವಿಡಿಯೋದಲ್ಲಿ ಹೊಸ ನಾಮಿನೇಷನ್​​ ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಅಂಕಿತಾ ಲೋಖಂಡೆ ಮತ್ತು ನೀಲ್​ ಭಟ್​​​ ನಡುವಿನ ವಾಗ್ವಾದವೂ ಮನೆಯೊಳಗೆ ಜೋರಾಗಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಬಿಗ್​ ಬಾಸ್​ ಕೆಲವು ಅಭ್ಯರ್ಥಿಗಳ ಪರ ವಹಿಸಿದೆ ಎಂದು ಅನುರಾಗ್​​ ದೊಬಲ್​ ಕೂಡ ದೂರಿರುವುದು ಕಂಡು ಬಂದಿದೆ.

ಹೊಸ ಪ್ರೋಮೋಷನಲ್​ ಫೂಟೇಜ್​ನಲ್ಲಿ, ಅಂಕಿತಾ ನೀಲ್​ ಹೇಡಿ ಎಂದು ಕರೆದಿದ್ದಾರೆ. ಅಲ್ಲದೇ ಹೆದರುಪುಕಲ, ಎಷ್ಟು ಹೆದರುಪುಕಲ ನೀನು ಎಂದು ಜರಿದಿದ್ದಾರೆ. ಈ ಶಬ್ದ ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಇದೇ ವೇಳೆ ಇದನ್ನು ಪ್ರಶ್ನಿಸಲು ನೈಲ್​ ಬಂದಾಗ ನನ್ನಿಂದ ಸ್ವಲ್ಪ ದೂರದಲ್ಲಿರುವ ನಿನ್ನ ಬಾಯಿ ವಾಸನೆ ಬರುತ್ತಿದೆ ಎಂದಿದ್ದಾರೆ.

ಇದಾದ ಬಳಿಕ ಅಂಕಿತಾ ನೀಲ್​ಗೆ ನನ್ನ ಹತ್ತಿರ ಬರದಂತೆ ಎಚ್ಚರಿಸಿದ್ದಾರೆ. ಅಲ್ಲದೇ ಆತನ ಜೊತೆಗೆ ಆತ್ಮೀಯವಾಗುವ ಯಾವುದೇ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ. ನೀನು ಇಂದು ಸಂಪೂರ್ಣವಾಗಿ ಚುಚ್ಚಿಸಿಕೊಳ್ಳುತ್ತಿಯಾ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ನೀಲ್​ ಈ ಮೊದಲು ಮಾಡಿದಂತೆ ಸೂಜಿಯಿಂದ ಚುಚ್ಚು, ಚಾಕುವಿನಿಂದ ತಿವಿ, ಬ್ಲೇಡ್​ನಿಂದ ಕತ್ತರಿಸು ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಕಿತಾ, ನಿನಗೆ ಏನು ಬೇಕು ಯೋಚಿಸು ಎಂದಿದ್ದಾರೆ. ಅಂಕಿತಾ ಮತ್ತು ನೈಲ್​ ನಡುವಿನ ಈ ಮಾತಿನ ಚಕಮಕಿ ಮನೆಯಲ್ಲಿ ಉಳಿದವರ ಬಾಯಿ ಮುಚ್ಚಿಸಿದೆ. ಬಳಿಕ ನೈಲ್​ ಪವಿತ್ರ ರಿಶ್ತಾ ನಟನನ್ನು ಅನುಕರಿಸಿದ್ದಾರೆ.

ಮತ್ತೊಂದು ಪ್ರೊಮೋದಲ್ಲಿ ಅಭ್ಯರ್ಥಿ ಅನುರಾಜ್​ ದೊಬಲ್​ ಕಾರ್ಯಕ್ರಮದ ವೇಳೆ ಅಭ್ಯರ್ಥಿಗಳಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಕೆಲವರಿಗೆ ಬಿಗ್​ಬಾಸ್​ ರಕ್ಷಣೆ ಮಾಡುತ್ತಿದ್ದು, ಅವರ ಪರವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ. ಅನುರಾಗ್​​ ತಮ್ಮ ಫ್ಯಾನ್ಸ್​​​ ಕ್ಲಬ್​​ ಮತ್ತು ಬೆಂಬಲಿಗರಿಂದ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಕೂಡ ದೂರಿದ್ದಾರೆ. ವೀಕೆಂಡ್​​ ಕಾ ವಾರ್​​ನಲ್ಲಿ ಸಲ್ಮಾನ್​ ಖಾನ್​, ಅವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಗ್​ಬಾಸ್​​​, ಇಲ್ಲಿ ಒಬ್ಬರಿಗೆ ಒಂದು - ಒಬ್ಬರಿಗೆ ಒಂದು ಮಾಡುತ್ತಿದೆ. ಈ ಮೂಲಕ ಟ್ರೋಫಿಯನ್ನು ಅಂಕಿತಾ ಅಥವಾ ಇಶಾ ಮಲ್ವಿಯಾ ಕೈಗೆ ಇಡಲು ಹೊರಟಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬಿಗ್ ​ಬಾಸ್​ ಕನ್ನಡ: 7ನೇ ವಾರ ಮನೆಯಿಂದ ನೀತು ವನಜಾಕ್ಷಿ ಔಟ್, ಮೈಕಲ್ ಕ್ಯಾಪ್ಟನ್

ABOUT THE AUTHOR

...view details