ಹೈದರಾಬಾದ್: ವಾರಾಂತ್ಯದಲ್ಲಿ ಬಿಗ್ಬಾಸ್ ಸೀಸನ್ಗಳು ಹಲವು ವಿಶೇಷತೆಗಳನ್ನು ಹೊಂದಿರುತ್ತದೆ. ಈ ವಾರಾಂತ್ಯದ ಬಿಗ್ಬಾಸ್ 16 ಸೀಸನ್ನಲ್ಲಿ ನಿರ್ದೆಶಕಿ ಪರ್ಹಾ ಮತ್ತು ಬಾಲಿವುಡ್ ನಟ ಕಾರ್ತಿಕ್ ಆಗಮಿಸಿದ್ದಾರೆ. ಈ ವೇಳೆ, ಮನೆ ಮಂದಿ ಮನರಂಜಿಸಲು ಅರ್ಚನಾ ಗೌತಮ್ ಮತ್ತು ಬಾಲಿವುಡ್ ನಟ ಕಾರ್ತಿಕ್ ರೋಮ್ಯಾಂಟಿಕ್ ಹಾಡಿಗೆ ಸೀನ್ ಮಾಡಲು ಮುಂದಾಗಿದ್ದಾರೆ. ಅರ್ಚನ - ಕಾರ್ತಿಕನ ಈ ರೋಮ್ಯಾಂಟಿಕ್ ಸೀನ್ ಮಧ್ಯಯೇ ಮನೆ ಮಂದಿ ಗೊಳ್ಳು ಎಂದು ನಕ್ಕಿದ್ದಾರೆ. ಕಾರಣ ಅರ್ಚನಾ ಈ ಹಾಡಿನ ಮಧ್ಯೆ ಕಾರ್ತಿಕ್ನನ್ನು ಅಣ್ಣ ಎಂದು ಸಂಭೋದಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಫಾರ್ಹಾ ಖಾನ್ ಕಾರ್ತಿಕ್ ಮತ್ತು ಅರ್ಚನಾಗೆ ರೋಮ್ಯಾಂಟಿಕ್ ದೃಶ್ಯದಲ್ಲಿ ನಟಿಸುವಂತೆ ಒಂದು ಸೀನ್ ಅನ್ನು ನೀಡುತ್ತಾರೆ. ಅರ್ಚನಾ ಟೀ ಅನ್ನು ಮಾಡಿ ಕಾರ್ತಿಕ್ಗೆ ನೀಡುತ್ತಾಳೆ. ಇದಾದ ಬಳಿಕ ಇಬ್ಬರು ರೋಮ್ಯಾಂಟಿಕ್ ಆಗುತ್ತಾರೆ ಈ ರೀತಿಯ ದೃಶ್ಯವನ್ನು ನೀಡಲಾಗಿದೆ. ಈ ದೃಶ್ಯದಲ್ಲಿ ನಟಿಸಲು ಮುಂದಾದ ಅರ್ಚನ ಟೀ ಮಾಡುವಂತೆ ನಟನೆಗೆ ಮುಂದಾಗುತ್ತಾರೆ. ಈ ವೇಳೆ, ಆಕೆಯ ಸೊಂಟಬಳಸಿ ಕಾರ್ತಿಕ ಕೈ ಹಾಕುತ್ತಾನೆ. ಇನ್ನೇನು ಈ ಸೀನ್ ರೋಮ್ಯಾಂಟಿಕ್ ಆಗಬೇಕು ಎನ್ನುವಾಗ ಅರ್ಚನಾ, ಕಾರ್ತಿಕ್ನನ್ನು ಅಣ್ಣ ಎಂದು ಕರೆದಿರುವುದು ಎಲ್ಲರ ನಗುವಿಗೆ ಕಾರಣವಾಗಿದೆ.
ಪ್ರೋಮೊದಲ್ಲಿ 'ನನ್ನ ಕೈ ಬಿಡು ಅಮ್ಮನ ಮುಂದೆ ಸಿಕ್ಕಿ ಹಾಕಿಕೊಳ್ಳುತ್ತೇವೆ' ಎಂದು ಡೈಲಾಗ್ ಹೊಡೆಯುತ್ತಾರೆ. ಇದಾದ ಬಳಿಕ 'ಯಾವ ಗೇಟ್ನಿಂದ ಪ್ರವೇಶ ಪಡೆದೆ ಅಣ್ಣಾ' ಎಂದು ಬಾಯ್ತಪ್ಪಿ ಹೇಳಿದ್ದಾರೆ. ಇದು ಬಿಗ್ ಬಾಸ್ ಮನೆಯವರ ನಗುವಿಗೆ ಕಾರಣವಾಗಿದೆ. ಅರ್ಚನಾ ಅಣ್ಣಾ ಎನ್ನುತ್ತಿದ್ದಂತೆ ಕಾರ್ತಿಕ್ ಕೂಡ ಜೋರಾಗಿ ನಗಲು ಶುರು ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ನೋಡಿರುವ ಪ್ರೇಕ್ಷಕರು ಇನ್ಸ್ಟಾಗ್ರಾಂನಲ್ಲಿ ತರಹೇವಾರಿ ಕಮೆಂಟ್ ಮಾಡಿ ಆನಂದಿಸಿದ್ದಾರೆ. ಒಬ್ಬರು 'ಪಾಪಾ ಕಾರ್ತಿಕ್' ಎಂದರೆ, ಮತ್ತೊಬ್ಬರು, 'ಭಾವಾನಾತ್ಮಕವಾಗಿ ಹಾನಿಗೊಂಡ ಕಾರ್ತಿಕ್' ಎಂದಿದ್ದಾರೆ