ಕರ್ನಾಟಕ

karnataka

ETV Bharat / entertainment

ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ ಹೊಂಬಾಳೆ ಫಿಲಂಸ್! ಮನರಂಜನಾ ಕ್ಷೇತ್ರದ ಇತಿಹಾಸ

ನಾಡಿನ ಜನತೆ ಹೊಂಬಾಳೆ ಫಿಲಂಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ಬದ್ಧರಾಗಿದ್ದು, ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್​ ಮಾಡಿದ್ದಾರೆ.

By

Published : Jan 3, 2023, 1:57 PM IST

Big plan of the producers of 'KGF'... Films with Rs3,000 crores budget!
ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಿಷಬ್​ ಶೆಟ್ಟಿ

ಸ್ಯಾಂಡಲ್​ವುಡ್​ನಲ್ಲಿ ಬಿಗ್​ ಹಿಟ್​ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲಂಸ್ ಸಂಸ್ಥೆ 'ಕೆಜಿಎಫ್', 'ಕೆಜಿಎಫ್ 2' ಮತ್ತು 'ಕಾಂತಾರ' ಚಿತ್ರದ ಬಳಿಕ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಮನರಂಜನಾ ಕ್ಷೇತ್ರದಲ್ಲಿ ಮುಂದಿರುವ ದಿನಗಳಲ್ಲಿ ಈ ನಿರ್ಮಾಣ ಸಂಸ್ಥೆ ಬರೋಬ್ಬರಿ 3 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. ಕನ್ನಡ ಚಿತ್ರರಂಗದಲ್ಲೇ ಈ ಪ್ರಮಾಣದ ಹಣವನ್ನು ಹಾಕುತ್ತಿರುವ ಮೊದಲ ನಿರ್ಮಾಣ ಸಂಸ್ಥೆ ಆಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂಸ್ ಪರವಾಗಿ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮನರಂಜನಾ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ನಮ್ಮ ಸಂಸ್ಥೆ ಯೋಜನೆ ಹಾಕಿಕೊಂಡಿದೆ. ನಿಮ್ಮ ಬೆಂಬಲ ಮತ್ತು ನಮ್ಮ ಮೇಲಿನ ಪ್ರೀತಿಗೆ ಧನ್ಯವಾದಗಳು. ಕಳೆದ ವರ್ಷ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಾಡಿನ ಸಮಸ್ತ ಜನತೆಗೆ ಕೃತಜ್ಞತೆ. ನಮ್ಮ ಚಿತ್ರಗಳ ಮೇಲೆ ನೀವು ತೋರಿದ ಪ್ರೀತಿಯಿಂದ ಹೊಂಬಾಳೆ ಫಿಲಂಸ್ ಬೆಳೆದು ನಿಂತಿದೆ. ಈ ಸಂಬಂಧ ಹೀಗೆಯೇ ಮುಂದುವರಿಯಬೇಕು ಎಂದು ನಾವು ಬಯಸುತ್ತೇವೆ.

ಓರ್ವ ಸಾಮಾನ್ಯ ಮನುಷ್ಯನಿಗೆ ಸಮಾಧಾನ ಮತ್ತು ಸಂತೋಷ ನೀಡುವಲ್ಲಿ ಸಿನಿಮಾ ಮುಖ್ಯ ಪಾತ್ರ ವಹಿಸುತ್ತದೆ. ಇದಲ್ಲದೇ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಇತಿಹಾಸ ಮತ್ತು ಗುರುತನ್ನು ಜಗತ್ತಿಗೆ ತೋರಿಸಲು ಇದು ಉತ್ತಮ ವೇದಿಕೆಯಾಗಿದೆ. ಭಾರತದಲ್ಲಿರುವ ಯುವ ಶಕ್ತಿ ಮತ್ತೆಲ್ಲಿಯೂ ಕಾಣಸಿಗುವುದಿಲ್ಲ. ಮನರಂಜನಾ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು, ದೇಶದಲ್ಲಿ ವೈವಿದ್ಯಮಯ ಗುಣಮಟ್ಟದ ಚಿತ್ರ ನಿರ್ಮಾಣಕ್ಕೆ ವಿಫುಲ ಅವಕಾಶವಿದೆ. ದೇಶದ ಯುವ ಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಹೆಚ್ಚು ಪ್ರೋತ್ಸಾಹಿಸುವ ಸಲುವಾಗಿ ಮನರಂಜನಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು ನಾವು ಉದ್ದೇಶಿಸಿದ್ದೇವೆ.

ನಾಡಿನ ಜನತೆ ಹೊಂಬಾಳೆ ಫಿಲಂಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ಬದ್ಧರಾಗಿದ್ದು, ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ. ಇದೇ ಉತ್ಸಾಹದಿಂದಲೇ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಚಿತ್ರಗಳಿಗೆ ಹೂಡಿಕೆ ಮಾಡುತ್ತಿದ್ದೇವೆ. ಹೊಸ ವರ್ಷ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸುತ್ತಾ, ನಾಡಿನ ಜನತೆಯ ಪ್ರೀತಿ-ವಿಶ್ವಾಸ, ಬೆಂಬಲ ಪ್ರೋತ್ಸಾಹ ಹೀಗೆ ಇರಲಿ ಎಂದು ವಿಜಯ್ ಕಿರಗಂದೂರು ಹಾರೈಸಿದ್ದಾರೆ.

ಹೊಂಬಾಳೆ ಫಿಲಂಸ್​​​ ನಿರ್ಮಾಣ ಸಂಸ್ಥೆಯು ಕೆಜಿಎಫ್', 'ಕೆಜಿಎಫ್ 2' ಮತ್ತು 'ಕಾಂತಾರ' ಚಿತ್ರದ ಬಳಿಕ ರಾಷ್ಟ್ರವ್ಯಾಪಿ ಕ್ರೇಜ್ ಹುಟ್ಟುಹಾಕಿದ್ದು, ಸದ್ಯ ಹಲವು ಸಿನಿಮಾಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಈ ನಿರ್ಮಾಣ ಸಂಸ್ಥೆಯಿಂದ ಹೊಸ ಬಂದ ಹಲವು ಸಿನಿಮಾಗಳು ದೊಡ್ಡ ಮೊತ್ತವನ್ನು ಗಳಿಕೆ ಮಾಡುವ ಮೂಲಕ ಹೊಸ ಇತಿಹಾಸ ಬರೆದವು. ಯಶ್ ನಟನೆಯ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​ ಪಾರ್ಟ್​ 1 ಮತ್ತು ಕೆಜಿಎಫ್​ ಪಾರ್ಟ್​ 2 ದಾಖಲೆ ಮಟ್ಟದಲ್ಲಿ ಹವಾ ಮಾಡಿತು. ಬಳಿಕ ಕೇವಲ 16 ಕೋಟಿಯಲ್ಲಿ ಬಂದ 'ಕಾಂತಾರ' 400 ಕೋಟಿ ಕಲೆಕ್ಷನ್ ಮಾಡಿತು. ಹೀಗೆ ಕಲೆಕ್ಷನ್‌ ವಿಚಾರದಲ್ಲಿ ಸುನಾಮಿ ಸೃಷ್ಟಿಸಿದ 'ಹೊಂಬಾಳೆ ಫಿಲಂಸ್' ಮುಂದೆಯೂ ಹಲವು ಬಿಗ್​ ಬಜೆಟ್​ ಸಿನಿಮಾಗಳನ್ನು ನೀಡುವ ಶಪತ ಮಾಡಿದೆ. ಹೊಸ ವರ್ಷಕ್ಕೆ ಹೊಸ ವಿಚಾರ ಹಂಚಿಕೊಂಡಿದ್ದಕ್ಕೆ ಸಿನಿ ಪ್ರಿಯರು ಕೂಡ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಹೊಂಬಾಳೆ ಫಿಲಂಸ್‌ನಿಂದ 2023 ರಲ್ಲಿ ತೆರೆಗೆ ಬರಲಿರುವ ಚಿತ್ರಗಳು:2023 ರಲ್ಲಿ ಹೊಂಬಾಳೆ ಫಿಲಂಸ್‌ನಿಂದ ಹಲವು ಪ್ರಾಜೆಕ್ಟ್‌ಗಳು ಹೊರಬೀಳಲಿವೆ. ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಚಲನಚಿತ್ರ 'ಸಲಾರ್' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಲ್ಲದೆ 'ಟೈಸನ್', 'ಬಘೀರಾ', 'ರಿಚರ್ಡ್ ಆಂಟನಿ, ಮತ್ತು 'ಧೂಮಮ್ ಚಿತ್ರಗಳು ಬರಲಿವೆ.

ABOUT THE AUTHOR

...view details