ಕರ್ನಾಟಕ

karnataka

ETV Bharat / entertainment

"ಇಟ್ಸ್​ ಬೇಬಿ ಗರ್ಲ್"​!: ತಂದೆ ತಾಯಿಯಾದ ಖುಷಿಯಲ್ಲಿ ಬಿಗ್​ ಬಾಸ್​ 9ರ ಜೋಡಿ ಕೀತ್ ಸಿಕ್ವೇರಾ- ರೋಚೆಲ್ ರಾವ್ - ಹಿಂದಿಯ ಬಿಗ್​ ಬಾಸ್​ ಜೋಡಿ

ರೋಚೆಲ್​ ರಾವ್​ ಸಿಕ್ವೇರಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

big boss 9 couple Keith sequeira rochelle rao sequeria
ಬಿಗ್​ ಬಾಸ್​ 9 ಜೋಡಿ ಕೀತ್ ಸಿಕ್ವೇರಾ- ರೋಚೆಲ್ ರಾವ್

By ETV Bharat Karnataka Team

Published : Oct 4, 2023, 9:38 AM IST

ಮುಂಬೈ: ಹಿಂದಿಯ ಬಿಗ್​ ಬಾಸ್​ ಜೋಡಿ ಕೀತ್​ ಸಿಕ್ವೇರಾ ಹಾಗೂ ರೋಚೆಲ್​ ರಾವ್​ ಸಿಕ್ವೇರಾ ತಮ್ಮ ಮೊದಲ ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಭಾನುವಾರ ರೋಚೆಲ್​ ರಾವ್​ ಸಿಕ್ವೇರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಂಗಳವಾರ ಜೋಡಿ ಈ ಸಂತಸದ ವಿಷಯವನ್ನು ತಮ್ಮ ಸೋಷಿಯಲ್​ ಮೀಡಿಯಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಶೇಷ ಪೋಸ್ಟ್​ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ.

ಇನ್​ಸ್ಟಾಗ್ರಾಂ ಪೋಸ್ಟ್​ ಹಾಕಿರುವ ರೋಚೆಲ್​, "ದೇವರು ನಮಗೆ ನೀಡಬಹುದಾದ ಅತ್ಯಂತ ದೊಡ್ಡ ಆಶೀರ್ವಾದ ಮಾಡಿದ್ದಾನೆ. ಅಕ್ಟೋಬರ್​ 1ಕ್ಕೆ ನಮ್ಮ ಪುಟ್ಟ ಮಗಳು, ಬೇಬಿ ಸಿಕ್ವೇರಾ ಜನಿಸಿದಳು. ಈ ಅದ್ಭುತ ಪ್ರಯಾಣದ ಉದ್ದಕ್ಕೂ ನೀವು ನೀಡುತ್ತಿರುವ ಅತಿಯಾದ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು. ವಿ ಲವ್​ಯೂ. ನಾನು ಈ ಮಗುವಿಗಾಗಿ ಪ್ರಾರ್ಥಿಸಿದೆ, ನಾನು ಅವನಿಂದ ಕೇಳಿದ್ದನ್ನು ಭಗವಂತ ನನಗೆ ಕೊಟ್ಟಿದ್ದಾನೆ. ನಾವು ಖುಷಿ ಉತ್ತುಂಗದಲ್ಲಿದ್ದೇವೆ. ಬೇಬಿ ಗರ್ಲ್​ ಸಿಕ್ವೇರಾ ಇಲ್ಲಿದ್ದಾಳೆ. 1.10.2023" ಎಂದು ಬರೆದುಕೊಂಡಿದ್ದಾರೆ.

ರೋಚೆಲ್​ ರಾವ್​ ಸಿಕ್ವೇರಾ ಈ ಪೋಸ್ಟ್​ ಹಂಚಿಕೊಂಡ ಬೆನ್ನಲ್ಲೆ ಅಭಿಮಾನಿಗಳು ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕಮೆಂಟ್​ ಬಾಕ್ಸ್​ಗಳಲ್ಲಿ ಶುಭಾಶಯಗಳ ಮಹಾಪೂರವೇ ತುಂಬಿವೆ. ಇನ್​ಸ್ಟಾಗ್ರಾಂ ಬಳಕೆದಾರರು "ಓಹ್​ ವಾಹ್​ ಇದು ಅದ್ಭುತ ವಿಷಯ ಮತ್ತು ಅಭಿನಂದನೆಗಳು, ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದಿದ್ದಾರೆ. ಇನ್ನೊಬ್ಬರು, "ಹೃದಯಪೂರ್ವಕ ಅಭಿನಂದನೆಗಳು" ಎಂದು ಬರೆದಿದ್ದಾರೆ. ಮತ್ತೊಬ್ಬರು "ಓಹ್​ ಮೈ ಗಾಡ್​, ಅಭಿನಂದನೆಗಳು" ಎಂದು ಶುಭ ಹಾರೈಸಿದ್ದಾರೆ.

ಈ ಜೋಡಿ ಆಗಸ್ಟ್​ನಲ್ಲಿ ತಾವು ತಂದೆ ತಾಯಿಯಾಗುತ್ತಿರುವುದರ ಬಗ್ಗೆ ಘೋಷಿಸಿದ್ದರು. ಬೇಬಿ ಬಂಪ್​ ಫೋಟೋ ಶೂಟ್​ ಅನ್ನು ಹೊಂಚಿಕೊಂಡು, ತಂದೆ ತಾಯಿಯಾಗುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದರು. ಫೋಟೋದಲ್ಲಿ ಇಬ್ಬರೂ ಗುಲಾಬಿ ಬಣ್ಣದ ಉಡುಪುಗಳಲ್ಲಿ, ಸಮುದ್ರದ ಕಿನಾರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು.

ಚಿತ್ರದ ಜೊತೆಗೆ "ಎರಡು ಪುಟ್ಟ ಕೈಗಳು, ಎರಡು ಪುಟ್ಟ ಪಾದಗಳು, ಹೆಣ್ಣು ಅಥವಾ ಗಂಡು ಮಗು ಸ್ವಾಗತಿಸಲು, ಇನ್ನು ಕಾಯುವುದು ಸಾಧ್ಯವೇ ಇಲ್ಲ! ಹೌದು ನೀವು ಸರಿಯಾಗಿ ಊಹಿಸಿದ್ದೀರಿ, ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಈ ಅದ್ಭುತ ಕೊಡುಗೆಗಾಗಿ ದೇವರಿಗೆ ಧನ್ಯವಾದಗಳು. ನಿಮ್ಮೆ ಕೊನೆಯಿಲ್ಲದೇ ಪ್ರೀತಿ ಹಾಗೂ ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ದಯವಿಟ್ಟು ಈ ಹೊಸ ಪ್ರಯಾಣದಲ್ಲಿ ನಮಗಾಗಿ ಆಶೀರ್ವದಿಸಿ ಹಾಗೂ ಪ್ರಾರ್ಥಿಸಿ. ಕೀತ್ & ರೋಚೆಲ್ + ಒನ್" ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು.

ಇದನ್ನೂ ಓದಿ:ರಾಜ್​ ಕುಂದ್ರಾ ಜೈಲು ಜೀವನದ ಅನುಭವ ತೆರೆಗೆ; ನಾಯಕನಾಗಿ ಅವರಲ್ಲ, ಮತ್ಯಾರು?

ABOUT THE AUTHOR

...view details