ಕರ್ನಾಟಕ

karnataka

ETV Bharat / entertainment

ಆ್ಯಕ್ಷನ್​ ಪ್ರಿನ್ಸ್​ ಧ್ರುವ​ ಸರ್ಜಾ ಅಭಿಮಾನಿಗಳಿಗೆ ನಾಳೆ ಸಿಗಲಿದೆ ಗುಡ್​ ನ್ಯೂಸ್ - Dhruva Sarja movies

ಆ್ಯಕ್ಷನ್​ ಪ್ರಿನ್ಸ್​ ಧ್ರುವ​ ಸರ್ಜಾ ಅಭಿನಯದ ಮಾರ್ಟಿನ್​​ ಚಿತ್ರತಂಡ ನಾಳೆ ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ.

Dhruva Sarja Martin movie
ಧ್ರುವ​ ಸರ್ಜಾ ಮಾರ್ಟಿನ್ ಸಿನಿಮಾ

By

Published : Feb 14, 2023, 5:53 PM IST

ಈ ಸಾಲಿನಲ್ಲಿ ಕಬ್ಜ ಸಿನಿಮಾ ನಂತರ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಆಗಲಿರುವ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ 'ಮಾರ್ಟಿನ್'. ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿ ಹಲವು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ಆ್ಯಕ್ಷನ್​ ಪ್ರಿನ್ಸ್​ ಧ್ರುವ​ ಸರ್ಜಾ 'ಮಾರ್ಟಿನ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ ಎಂಬ ವಿಚಾರಕ್ಕೆ ಮಾತ್ರವಲ್ಲ, ಧ್ರುವ ಸರ್ಜಾ ಮತ್ತು ನಿರ್ದೇಶಕ ಎ ಪಿ ಅರ್ಜುನ್ ಕಾಂಬಿನೇಷನ್​ನಲ್ಲಿ ಚಿತ್ರ ರೆಡಿಯಾಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಒಂದು ದಶಕದ ಹಿಂದೆ ಈ ಜೋಡಿ ಮಾಡಿದ್ದ ಮೋಡಿಯನ್ನು ಅಭಿಮಾನಿಗಳು ಮರೆತಿಲ್ಲ. 2012ರಲ್ಲಿ ಬಂದ 'ಅದ್ಧೂರಿ' ಸಿನಿಮಾ ಬಳಿಕ ಧ್ರುವ ಸರ್ಜಾ ಮತ್ತು ಎ ಪಿ ಅರ್ಜುನ್ ಕಾಂಬಿನೇಷನ್​ನಲ್ಲಿ 'ಮಾರ್ಟಿನ್' ಚಿತ್ರ ಸಿದ್ಧಗೊಳ್ಳುತ್ತಿದೆ.

'ಮಾರ್ಟಿನ್' ಭಾರತದ ಅತ್ಯದ್ಭುತ ಹಾಗು ಅಸಾಮಾನ್ಯ ಸಾಹಸಗಾಥೆಯನ್ನು ಹೊಂದಿರುವ ಸಿನಿಮಾ ಎನ್ನುವ ಮಾತನ್ನು ಚಿತ್ರತಂಡ ಮೊದಲಿಂದಲೂ ಹೇಳುತ್ತಾ ಬಂದಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆ್ಯಕ್ಷನ್​ ಪ್ರಿನ್ಸ್​ ಧ್ರುವ​ ಸರ್ಜಾ ನಟನೆ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

ಮಾರ್ಟಿನ್​​ ಚಿತ್ರತಂಡದಿಂದ ಮಹತ್ವದ ಘೋಷಣೆ:ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಮಾರ್ಟಿನ್​​ ಚಿತ್ರತಂಡ ನಾಳೆ (ಫೆಬ್ರವರಿ 15) ಮಹತ್ವದ ಘೋಷಣೆ ಮಾಡಲು ಮುಂದಾಗಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ. ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಕೂಡಾ ಇದೆ. ಆದ್ರೆ ಖಚಿತ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಧ್ರುವ ಸರ್ಜಾ ಅಭಿಮಾನಿಗಳನ್ನು, ಸಿನಿ ಪ್ರಿಯರನ್ನು ಕುತೂಹಲದಲ್ಲಿ ತೇಲಿಸಿದೆ ಮಾರ್ಟಿನ್​​ ಚಿತ್ರತಂಡ.

ಇದನ್ನೂ ಓದಿ:ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸಮಂತಾ ಭೇಟಿ: 600 ಮೆಟ್ಟಿಲುಗಳಿಗೂ ಕರ್ಪೂರ ಹಚ್ಚಿ ಹೆಜ್ಜೆ ಹಾಕಿದ ನಟಿ

ರವಿ ಬಸ್ರೂರ್ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಈ ಚಿತ್ರದ ಮತ್ತೊಂದು ವಿಶೇಷತೆ. ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ರವಿ ಬಸ್ರೂರ್. ಬಚ್ಚನ್, ಲವ್ ಇನ್ ಮಂಡ್ಯ ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಕೇವಲ ಒಂದು ಸಾಹಸ ಸನ್ನಿವೇಶಕ್ಕೆ ಉದಯ್ ಮೆಹ್ತಾ ಅವರು ಲಕ್ಷಾಂತರ ಹಣ ಹಾಕಿದ್ದಾರೆಂದ್ರೆ ಈ ಚಿತ್ರದ ಮೇಕಿಂಗ್​ ಬಗ್ಗೆ, ಸಿನಿಮಾ ಮೇಲಿರುವ ಉದಯ್​ ಮಹ್ತಾ ಅವರ ಪ್ರೀತಿ ಬಗ್ಗೆ ನೀವೇ ಲೆಕ್ಕ ಹಾಕಿ.

ಇದನ್ನೂ ಓದಿ:ಆಸ್ಕರ್ ನಾಮನಿರ್ದೇಶಿತರಿಗೆ ಅಮೆರಿಕದಲ್ಲಿ ಲಂಚ್​ ಪಾರ್ಟಿ: 'ನಾಟು ನಾಟು' ಹಾಡಿನ ಸಂಯೋಜಕರೂ ಭಾಗಿ

ಇನ್ನೂ ಮಾರ್ಟಿನ್ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ಧ್ರುವ ಸರ್ಜಾ ಜೊತೆ ನಟಿಸಿದ್ದಾರೆ. ಅನ್ವೇಷಿ ಜೈನ್, ಸುಕೃತಾ ವಾಗ್ಲೇ, ನಿಕ್ತಿನ್ ಧೀರ್ ಕೂಡಾ ಇದ್ದಾರೆ. ಸದ್ಯಕ್ಕೆ ಮಾರ್ಟಿನ್ ಚಿತ್ರದ ನಾಳೆಯ ಘೋಷಣೆ ಬಗ್ಗೆ ಕೇಳಿ ಅನೇಕರು ಥ್ರಿಲ್ ಆಗಿದ್ಧಾರೆ. ಧ್ರುವ ಸರ್ಜಾ ಅಭಿಮಾನಿಗಳು ಫೆಬ್ರವರಿ 15ಕ್ಕೆ ಕಾದು ಕುಳಿತ್ತಿದ್ದಾರೆ. ಚಿತ್ರದ ಮೇಲೆ ಸಾಕಷ್ಟು ಭರವಸೆ, ನಿರೀಕ್ಷೆ ಇದೆ.

ABOUT THE AUTHOR

...view details