ಆರ್ಆರ್ಆರ್ ಹಿಟ್ ಸಿನಿಮಾದ ನಂತರ ಜೂನಿಯರ್ ಎನ್‌ಟಿಆರ್ ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಜೊತೆಗೆ ಅವರೊಂದಿಗೆ ಸಿನಿಮಾ ಮಾಡಲು ಹಲವು ನಿರ್ಮಾಪಕರು, ನಿರ್ದೇಶಕರು ಕಾಯುತ್ತಿದ್ದಾರೆ. ಹೀಗಿರುವಾಗ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ಭೂಷಣ್ ಕುಮಾರ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಯಾಗಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುರುವಾರ ಹೈದರಾಬಾದ್ನಲ್ಲಿ ನಡೆದಿದ್ದ ಜೂನಿಯರ್ ಎನ್‌ಟಿಆರ್ ಮುಂಬರುವ ಸಿನಿಮಾದ ಮುಹೂರ್ತ ಪೂಜೆಯಲ್ಲಿ ಭೂಷಣ್ ಭಾಗವಹಿಸಿದ್ದು, ಹಲವು ಊಹಾಪೋಹಗಳ ಸೃಷ್ಟಿಗೆ ಕಾರಣವಾಗಿದೆ.
ಟಿ ಸೀರೀಸ್ ಮುಖ್ಯಸ್ಥ ಹೊಂಚೋ ಭೂಷಣ್ ಕುಮಾರ್ ಈಗಾಗಲೇ ಪ್ರಭಾಸ್ ಜೊತೆಗೆ ಚಿತ್ರವನ್ನು ಮಾಡುತ್ತಿರುವುದಾಗಿ ಘೋಷಿಸಿದಲ್ಲದೇ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೂ ಸಿನಿಮಾ ಮಾಡಲಿದ್ದಾರೆ. ಇದೀಗ ಜೂನಿಯರ್ ಎನ್‌ಟಿಆರ್ ಜೊತೆಗೂ ಚಿತ್ರಕ್ಕಾಗಿ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಎನ್‌ಟಿಆರ್ 30 ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ರಾಜಮೌಳಿ, ಮಣಿರತ್ನಂ, ಪ್ರಶಾಂತ್ ನೀಲ್ ಭಾಗಿಯಾಗಿದ್ದರು. ಇದೇ ವೇಳೆ ಭೂಷಣ್ ಕುಮಾರ್ ಕೂಡ ತಾರಕ್ ಜೊತೆ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ:ವರ್ಷ ಪೂರೈಸಿದ 'RRR'.. ಈಗಲೂ ಇದೆ ನಾಟು ನಾಟು ಕ್ರೇಜ್
ಇನ್ನು ಜನತಾ ಗ್ಯಾರೇಜ್ ಖ್ಯಾತಿಯ ನಿರ್ದೇಶಕ ಕೊರಟಾಲ ಶಿವ ನಿರ್ದೇಶನದಲ್ಲಿ ಜೂನಿಯರ್ ಎನ್‌ಟಿಆರ್ ಅವರ 30 ನೇ ಸಿನಿಮಾ ತಯಾರಾಗುತ್ತಿದೆ. ಆದರೆ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯ ಇದನ್ನು ಎನ್‌ಟಿಆರ್ 30 ಎಂದೇ ಕರೆಯಲಾಗುತ್ತಿದೆ. ಈ ಸಿನಿಮಾಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಕೂಡ ದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿದ್ದು, ಚಿತ್ರ ಹಿಟ್ ಸಾಲಿಗೆ ಸೇರಲಿದೆ ಎಂಬುದು ಅಭಿಮಾನಿಗಳ ವಿಶ್ವಾಸ. ಇನ್ನು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ: ಡೇಟಿಂಗ್ ವದಂತಿ ಬಗ್ಗೆ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ
ಟ್ವಿಟರ್ ಟ್ರೆಂಡಿಂಗ್ನಲ್ಲಿ ಜೂ.ಎನ್‌ಟಿಆರ್ ಫಸ್ಟ್: ಜೂ.ಎನ್‌ಟಿಆರ್ ಅವರು ಆಸ್ಕರ್ 2023 ರ ಚರ್ಚೆ ವಿಷಯದಲ್ಲಿ (ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಫ್ಲಾಟ್ಫಾರ್ಮ್ಗಳು) ಅಗ್ರಸ್ಥಾನದಲ್ಲಿದ್ದು, ಹಾಲಿವುಡ್ ಸೆಲೆಬ್ರಿಟಿಗಳು ಅವರ ಹಿಂದೆ ಇದ್ದಾರೆ. ನಟ ರಾಮ್ಚರಣ್ ಎರಡನೇ ಸ್ಥಾನದಲ್ಲಿದ್ದಾರೆ. ನೆಟ್‌ಬೇಸ್ ಕ್ವಿಡ್ ಸಂಸ್ಥೆ, ಸಾಮಾಜಿಕ ಮಾಧ್ಯಮ ಮತ್ತು ಮುಖ್ಯ ಸುದ್ದಿ ಮಾಧ್ಯಮಗಳಾದ್ಯಂತ ಆಸ್ಕರ್ 2023 ರಿಂದ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಗಳನ್ನು ಆಧರಿಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಟ್ವಿಟ್ಟರ್ ಟ್ರೆಂಡಿಂಗ್ ವಿಚಾರಕ್ಕೆ ಬಂದಾಗ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ಚರಣ್ ಖಾಯಂ ಆಗಿರುತ್ತಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕೆ ಚಾಲನೆ: ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದ ಚಿರಂಜೀವಿ