ಬೆಂಗಳೂರು: ಬಾಲಿವುಡ್ ನಟಿ ಭೂಮಿ ಪಡ್ನೇಕರ್ ತನ್ನ ರೂಮರ್ ಬಾಯ್ಫ್ರೆಂಡ್ ಜೊತೆ ಡಿನ್ನರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಲ್ಡರ್ ಮತ್ತು ವಾಣಿಜ್ಯೋದ್ಯಮಿಯಾಗಿರುವ ಯಶ್ ಕತಾರಿಯಾ ಜೊತೆ ಗುರುವಾರ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಯ ಸಹೋದರಿ ಸಮೀಕ್ಷಾ ಪಡ್ನೆಕರ್ ಮತ್ತು ಆಕೆಯ ಸ್ನೇಹಿತರ ಜೊತೆಗೆ ಅವರು ಊಟಕ್ಕೆ ಹೋಗಿದ್ದಾರೆ. ಈ ವಿಡಿಯೋವನ್ನು ಪ್ಯಾಪಾರಾಜಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭೂಮಿ ಮತ್ತು ಸಮೀಕ್ಷಾ ಪ್ಯಾಪಾರಾಜಿಗಳ ಕ್ಯಾಮೆರಾಗೆ ಫೋಸ್ ನೀಡಿದ್ದರೆ, ಯಶ್ ಮಾತ್ರ ಕ್ಯಾಮೆರಾದಿಂದ ದೂರ ಸರಿದಿದ್ದಾರೆ.
ಇನ್ನು ಈ ವೇಳೆ ಭೂಮಿ ಮತ್ತು ಯಶ್ ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಭೂಮಿ ಮಿಡಲ್-ಲೆನ್ತ್ ಸ್ಲಿಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಜಾಕೆಟ್ ಧರಿಸಿದ್ದಾರೆ. ಸಮೀಕ್ಷಾ ಲಟೆಕ್ಸ್ ಶರ್ಟ್ ತೊಟ್ಟು ಅದಕ್ಕೆ ಹೊಂದಿಕೆಯಾಗುವಂತೆ ಪ್ಯಾಂಟ್ ಧರಿಸಿದ್ದಾರೆ. ಯಶ್ ಕೂಡ ಕಪ್ಪು ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ನಲ್ಲಿ ಕಂಡು ಬಂದಿದ್ದಾರೆ.
ಈ ಮೊದಲು ಯಶ್ ಮತ್ತು ಭೂಮಿ ಮುಂಬೈನ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಪಾರ್ಕಿಂಗ್ ಸ್ಥಳದಲ್ಲಿ ಪ್ರತ್ಯೇಕವಾಗಿ ನಡೆದು ಹೋಗುತ್ತಿದ್ದರು. ಇವರಿಬ್ಬರು ಮೊದಲ ಬಾರಿಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅದ್ವಾನಿ ಅವರ ಮದುವೆ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯಶ್ ಕತಾರಿಯಾ, ಭೂಮಿಗೆ ಮುತ್ತಿಕ್ಕುತ್ತಿರುವ ವಿಡಿಯೋಗಳು ಬಹಳ ಸುದ್ದಿಯಾಗಿದ್ದವು. ಅನೇಕ ಗಾಳಿ ಸುದ್ದಿಗಳ ನಡುವೆಯೂ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತಪಡಿಸಿಲ್ಲ.