ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾ ನಿನ್ನೆ (ಗುರುವಾರ) ಬಿಡುಗಡೆಯಾಗಿದೆ. ಈ ಚಿತ್ರ ತಮಿಳಿನ 'ಕೈದಿ' ಸಿನಿಮಾದ ಹಿಂದಿ ರಿಮೇಕ್ ಆಗಿದೆ. 'ಭೋಲಾ' ಮೊದಲ ದಿನ ನಿರೀಕ್ಷಿತ ಕಲೆಕ್ಷನ್ ಮಾಡದಿದ್ದರೂ, ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ಬಾಕ್ಸ್ ಆಫೀಸ್ ಇಂಡಿಯಾ ಪ್ರಕಾರ ಚಿತ್ರವು 10 ಕೋಟಿ ರೂಪಾಯಿ ಗಳಿಸಿದೆ. ಮತ್ತೊಂದೆಡೆ ಇಂಡಸ್ಟ್ರೀ ಟ್ರ್ಯಾಕರ್ ಸಾಕ್ನಿಲ್ಕ್ ಪ್ರಕಾರ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ದೃಶ್ಯಂ 2 ನಂತಹ ಅದ್ಭುತ ಸಿನಿಮಾವನ್ನು ನೀಡಿರುವ ಅಜಯ್ ದೇವಗನ್ಗೆ 'ಭೋಲಾ' ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ನೀಡಿಲ್ಲ. ತಮಿಳಿನ 'ಕೈದಿ' ಚಿತ್ರವನ್ನೇ ಕೊಂಚ ಬದಲಾಯಿಸಿ ಹಿಂದಿಯಲ್ಲಿ 'ಭೋಲಾ' ಎಂಬುದಾಗಿ ಸಿನಿಮಾ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಅಲ್ಲದೇ ಇಂದಿನಿಂದ ಐಪಿಲ್ 2023 ಪ್ರಾರಂಭವಾಗಲಿದ್ದು, ಥಿಯೇಟರ್ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ವೀಕೆಂಡ್ನಲ್ಲಿ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡುವ ಅವಕಾಶ ಕೂಡ ಜಾಸ್ತಿ ಇದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಆತನ ಮಗಳ ಕಥೆಯನ್ನು ಹೇಳುತ್ತದೆ.
ಚಿತ್ರದಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್, ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಂಜಯ್ ಮಿಶ್ರಾ, ದೀಪಕ್ ದೊಬ್ರಿಯಾಲ್ ರಾಯ್ ಅವರು ಕೂಡ ನಟಿಸಿದ್ದಾರೆ. ಇನ್ನು ಭೋಲಾ ಸಿನಿಮಾವನ್ನು ಅಜಯ್ ದೇವಗನ್ ಸ್ವತಃ ನಿರ್ದೇಶಿಸಿದ್ದಾರೆ. 2008 ರಲ್ಲಿ 'ಯು, ಮಿ ಔರ್ ಹಮ್', 2016 ರಲ್ಲಿ 'ಶಿವಾಯ್' 2022 ರಲ್ಲಿ 'ರಣ್ವಾವ್ 34' ಮತ್ತು 'ಭೋಲಾ' ಅಜಯ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ. ಸಿನಿಮಾವನ್ನು 200 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ.