ಕರ್ನಾಟಕ

karnataka

ETV Bharat / entertainment

ದುನಿಯಾ ವಿಜಯ್ ಹುಟ್ಟು ಹಬ್ಬಕ್ಕೆ ಭೀಮ ಟೀಸರ್ ಅನಾವರಣ - duniya vijay latest news

ದುನಿಯಾ ವಿಜಯ್ ಅವರ ಮುಂದಿನ ಚಿತ್ರ ಭೀಮ ಟೀಸರ್ ರಿಲೀಸ್ ಆಗಿದೆ.

Bheema movie teaser
ಭೀಮ ಟೀಸರ್ ಅನಾವರಣ

By

Published : Jan 20, 2023, 7:50 PM IST

ಕನ್ನಡ ಚಿತ್ರರಂಗದಲ್ಲಿ ಬ್ಲ್ಯಾಕ್ ಕೋಬ್ರಾ, ಸಲಗ ಹೆಸರುಗಳಿಂದ ಗುರುತಿಸಿಕೊಂಡಿರುವ ನಟ ದುನಿಯಾ ವಿಜಯ್. ಸದ್ಯ ಭೀಮ ಸಿನಿಮಾ ಗುಂಗಿನಲ್ಲಿರೋ ದುನಿಯಾ ವಿಜಯ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟಿರೋ ವಿಜಯ್ ಈ ವರ್ಷ ಅಭಿಮಾನಿಗಳ ಜೊತೆ ಹೊಸಕೆರೆ ಮನೆಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೂರದ ಊರು ಹಾಗೂ ಹಳ್ಳಿಗಳಿಂದ ಬಂದಿರುವ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಈ ವರ್ಷ ವಿಜಯ್ ಸರಳವಾಗಿ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ‌.

ದುನಿಯಾ ವಿಜಯ್ ಹುಟ್ಟುಹಬ್ಬ: ನಿನ್ನೆ ಆನೇಕಲ್ ತಾಲೂಕಿನ ಕುಂಬಾರನಹಳ್ಳಿಯಲ್ಲಿ (ವಿಜಯ್ ಹುಟ್ಟೂರು) ತಮ್ಮ ತಂದೆ ತಾಯಿ ಸಮಾಧಿ ಬಳಿ ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿರೋದು ವಿಶೇಷ. ಈ ಬಗ್ಗೆ ಮಾತನಾಡಿರುವ ಅವರು, ನನ್ನ ಹೆತ್ತವರು ನನ್ನ ಮನಸ್ಸಿನ ತುಂಬಾ ಇದ್ದಾರೆ. ನಾನು ಕುಟುಂಬ ಮತ್ತು ಸ್ನೇಹಿತರ ಜೊತೆ ದಿನ ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ದುನಿಯಾ ವಿಜಯ್ ಸಿನಿಜರ್ನಿ:ಇನ್ನು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಒಂದು ದಶಕ ಪೂರೈಸಿರುವ ದುನಿಯಾ ವಿಜಯ್ ಸಿನಿಜರ್ನಿ ಹೂವಿನ ಹಾಸಿಗೆ ಆಗಿರಲಿಲ್ಲ. ವಿಜಯ್ ಸಿನಿಮಾ ಎಂಟ್ರಿ ಸಾಕಷ್ಟು ಕಷ್ಟದಿಂದ ಕೂಡಿತ್ತು. ಈ ಸಲಗ ಏಕಾ ಏಕಿ ಸಿಮಿಮಾ ನಟನಾಗಲಿಲ್ಲ. ಫೈಟರ್ ಆಗಿ ಹಾಗೂ ಜೋಗಿ, ರಿಷಿ, ಡೆಡ್ಲಿ ಸೋಮ, ರಾಕ್ಷಸ, ಕಲ್ಲರಳಿ ಹೂವಾಗಿ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದ ವಿಜಯ್ 2007ರಲ್ಲಿ ತೆರೆಕಂಡ 'ದುನಿಯಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ತೆರೆಗೆ ಎಂಟ್ರಿ‌ ಕೊಡ್ತಾರೆ. ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥೆ ಆಧರಿಸಿದ‌ ದುನಿಯಾ ಸಿನಿಮಾ ಸೂಪರ್ ಹಿಟ್ ಆಗಿ ವಿಜಯ್ ಅವರಿಗೆ ದುನಿಯಾ ವಿಜಯ್ ಎಂಬ ಹೆಸರು ತಂದು ಕೊಡುವ ಜೊತೆ ಜೊತೆಗೆ ಬಹು ಬೇಡಿಕೆ ಸಹ ತಂದು ಕೊಡುತ್ತೆ‌.

ದುನಿಯಾ ವಿಜಯ್ ಸಿನಿಮಾಗಳು: ದುನಿಯಾ ಸಿನಿಮಾ ದೊಡ್ಡ ಹಿಟ್ ಕಂಡ ನಂತರ ವಿಜಯ್ ಲಕ್ ಕೂಡ ಬದಲಾಗಿ ಚಂಡ, ಜಂಗ್ಲಿ, ಜರಾಸಂಧ, ಜಾನಿ ಮೇರ ನಾಮ್ ಪ್ರೀತಿ ಮೇರ ಕಾಮ್, ಸ್ಲಂ ಬಾಲ, ದನ ಕಾಯೋನು, ಕರಿ ಚಿರತೆ, ಯುಗ, ಆರ್​​ಎಕ್ಸ್ ಸೂರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ವಿಜಯ್ ಕನ್ನಡ ಸಿನಿಮಾ‌ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ವೀರಸಿಂಹ ರೆಡ್ಡಿ ಯಶಸ್ವಿ:ಅಭಿನಯದ ಜೊತೆಗೆ ಸಲಗ ಚಿತ್ರದಿಂದ ನಿರ್ದೇಶಕನಾಗಿರೋ ದುನಿಯಾ ವಿಜಯ್, ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯನ್ನು ಹೊಂದಿದ್ದಾರೆ. ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರದಲ್ಲಿ ದುನಿಯಾ ವಿಜಯ್ ಖಳ ನಟನಾಗಿ ಅಬ್ಬರಿಸಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ವೀರ ಸಿಂಹ ರೆಡ್ಡಿ ಚಿತ್ರ ತಂಡಕ್ಕೆ ಧನ್ಯವಾದ ಅರ್ಪಿಸಿದ ದುನಿಯಾ ವಿಜಯ್

ಈ‌‌ ಚಿತ್ರದ ಸಕ್ಸಸ್​ ಖುಷಿಯಲ್ಲಿರೋ‌ ದುನಿಯಾ ವಿಜಯ್ ಹುಟ್ಟು ಹಬ್ಬಕ್ಕೆ ಭೀಮ ಟೀಸರ್ ಅನಾವರಣ ಮಾಡುವ ಮೂಲಕ ಬರ್ತ್ ಡೇ ಗಿಫ್ಟ್ ಅನ್ನು ಚಿತ್ರತಂಡ ಕೊಟ್ಟಿದೆ. ವಿಜಯ್‌ ಸಲಗ ಚಿತ್ರದ ನಂತರ ಅಭಿನಯಿಸಿ ನಿರ್ದೇಶನ ಮಾಡುತ್ತಿರೋ‌ ಭೀಮ ಚಿತ್ರದ ಶೇಕಡ 50ರಷ್ಟು ಚಿತ್ರೀಕರಣ ಮುಗಿಸಿದ್ದಾರೆ‌. ವಿಜಯ್ ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಮುಂದಿನ ದಿನಗಳಲ್ಲಿ ನಾನು ನನ್ನ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ. ಭೈರಾಗಿ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭೀಮ ಅಪರಾಧ ಪ್ರಪಂಚವನ್ನು ಆಧರಿಸಿದ್ದು, ಬಹಳಷ್ಟು ಹೊಸಬರು ನಟಿಸಿದ್ದಾರೆ. ಟೀಸರ್​ನಿಂದ ಸದ್ದು ಮಾಡುತ್ತಿರೋ ಭೀಮ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅನ್ನೋದು ದುನಿಯಾ ವಿಜಯ್ ಅವರ ವಿಶ್ವಾಸದ ಮಾತು.

ಇದನ್ನೂ ಓದಿ:ಸಿನಿಮಾ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ಕಾಂತಾರ ಚಿತ್ರತಂಡ

ABOUT THE AUTHOR

...view details