ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ವಿಭಿನ್ನ ಪಾತ್ರ, ಉತ್ತಮ ನಟನೆ, ವಿಶಿಷ್ಠ ಮ್ಯಾನರಿಸಂ ಮೂಲಕ ತಮ್ಮದೇ ಆದ ವಿಭಿನ್ನ ಸ್ಟಾರ್ ಡಮ್ ಹೊಂದಿದ್ದಾರೆ. ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ವಿಜಿ ಬಹುಭಾಷಾ ನಟ ಕೂಡ ಹೌದು. ದೊಡ್ಡ ಅಭಿಮಾನಿ ಬಳಗ ಹೊಂದಿರುವ ತಾರೆಯ ಮುಂದಿನ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.
ಮಾಸ್ ಟೈಟಲ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಭೀಮ'. ಇದು ದುನಿಯಾ ವಿಜಯ್ ಅವರ ಮುಂದಿನ ಚಿತ್ರ. ಸಲಗ ಚಿತ್ರದ ಸಕ್ಸಸ್ ಬಳಿಕ ವಿಜಯ್ ಅಭಿನಯದ ಜೊತೆಗೆ ನಿರ್ದೇಶನ ಮಾಡುತ್ತಿರೋ ಸಿನಿಮಾವಿದು. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಭೀಮ ಸಾಕಷ್ಟು ವಿಚಾರಗಳಿಗೆ ಗಮನ ಸೆಳೆಯುತ್ತಿದೆ.
ಬಿಡುಗಡೆಗೆ ತಯಾರಿ: ಭೀಮ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸಿನಿಮಾದಲ್ಲಿರುವ ಕಲಾವಿದರ ಇಂಟ್ರೂಡಕ್ಷನ್ ಫೋಸ್ಟರ್ ಜೊತೆಗೆ ಹಾಡುಗಳ ರೆಕಾರ್ಡಿಂಗ್ನಿಂದ ಸೌಂಡ್ ಮಾಡುತ್ತಿರುವ ಭೀಮ ಚಿತ್ರದ ಬಿಡುಗಡೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಇದೀಗ ಚಿತ್ರದ ಪ್ರೊಮೋಷನ್ ಸಲುವಾಗಿ ಚಿತ್ರತಂಡ ಒಂದೊಂದೇ ಹಾಡನ್ನು ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.
ಮೊದಲ ಹಾಡು ಯಾವಾಗ ರಿಲೀಸ್?:ಭೀಮ ಚಿತ್ರದ ಮೊದಲ ಹಾಡನ್ನು ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಜೊತೆಗೆ ವಿಜಯ್ ಸಲಗಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇದೀಗ ಮತ್ತೆ ಭೀಮ ಮೂಲಕ ಸಂಚಲನ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗ್ತಿರೋ ಬ್ಯಾಡ್ ಬಾಯ್ಸ್ ಹಾಡಿನ ಮೇಲೆ ಸಿಕ್ಕಾಪಟ್ಟೆ ಕುತೂಹಲ ನಿರೀಕ್ಷೆ ಇದೆ.
ದೀಪಾವಳಿ ಸಂದರ್ಭ ಸಿನಿಮಾ ರಿಲೀಸ್?!ದುನಿಯಾ ವಿಜಯ್ ನಿರ್ದೇಶಿಸಿ, ಬಣ್ಣ ಹಚ್ಚಿರೋ ಭೀಮ ಸಿನಿಮಾ ಕೆಲಸಗಳು ಕೊನೆಯ ಹಂತ ತಲುಪಿದೆ. ಚಿತ್ರತಂಡ ಸಿನಿಮಾ ರಿಲೀಸ್ಗೆ ಸಿದ್ಧತೆ ನಡೆಸುತ್ತಿದೆ. ಭೀಮ ನೈಜ ಘಟನೆ ಆಧಾರಿತ ಕಥೆಯಾಗಿದ್ದು, ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ, ಎಡಿಟಿಂಗ್ ರೂಮ್ನಲ್ಲಿ ನಟ ಹಾಗೂ ನಿರ್ದೇಶಕ ವಿಜಯ್ ಬ್ಯುಸಿಯಾಗಿದ್ದಾರೆ. ತಮ್ಮ ಈ ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ನವೆಂಬರ್ ತಿಂಗಳ ದೀಪಾವಳಿ ಸಂದರ್ಭ ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಚಿತ್ರ ತಂಡದವರು ಬಂದಿದ್ದಾರೆ.
ಚಿತ್ರತಂಡ ಹೀಗಿದೆ.. ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ. ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರೋ ಭೀಮ ಎಲ್ಲ ಆ್ಯಂಗಲ್ನಿಂದಲೂ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆ ಹುಟ್ಟಿಸಿದೆ. ಅಲ್ಲದೇ ಇದೇ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಚಿತ್ರ ಆಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳಗೊಂಡಿದೆ.
ಇದನ್ನೂ ಓದಿ:ಪದ್ಮಾವತಿ ಬಳಿಕ ಭೀಮ; ದುನಿಯಾ ವಿಜಯ್ ಸಿನಿಮಾ ಹಾಡಿಗೆ ಕವಿರಾಜ್ ಸಾಹಿತ್ಯ