ಕರ್ನಾಟಕ

karnataka

ETV Bharat / entertainment

'ಧಾರಾವಿ ಬ್ಯಾಂಕ್':  ಸುನೀಲ್ ಶೆಟ್ಟಿ ಜೊತೆ ತೆರೆ ಹಂಚಿಕೊಂಡ ಕನ್ನಡತಿ ಭಾವನಾ ರಾವ್ - sunil shetty

ಹಿಂದಿಯಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ಧಾರಾವಿ ಬ್ಯಾಂಕ್' ವೆಬ್ ಸೀರಿಸ್​ನಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ಭಾವನಾ ರಾವ್ ನಟಿಸಿದ್ದಾರೆ.

bhavana rao sunil shetty in dharavi bank
ಸುನೀಲ್ ಶೆಟ್ಟಿ ಜೊತೆ ತೆರೆ ಹಂಚಿಕೊಂಡ ಕನ್ನಡತಿ ಭಾವನಾ ರಾವ್

By

Published : Nov 10, 2022, 8:03 PM IST

ಗಾಳಿಪಟ ಸಿನಿಮಾದಲ್ಲಿ ಅರಳು ಹುರಿದಂತೆ ಮಾತನಾಡಿ, ಚೆಂದದ ಹಾಡಿಗೆ ಅಷ್ಟೇ ಸೊಗಸಾಗಿ ಹೆಜ್ಜೆ ಹಾಕಿ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ ಅಪ್ಪಟ ಕನ್ನಡತಿ ಭಾವನಾ ರಾವ್. ಗಾಳಿಪಟ ನಂತರ ಚಂದನವನದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಸಹಜ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯೋ ಭಾವನಾ ರಾವ್ ಹಿಂದಿಯ ಬಹು ನಿರೀಕ್ಷಿತ ವೆಬ್ ಸೀರಿಸ್​​ನಲ್ಲಿ ಬಿಟೌನ್ ದಿಗ್ಗಜರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ.

ಹಿಂದಿಯಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ಧಾರಾವಿ ಬ್ಯಾಂಕ್' ವೆಬ್ ಸೀರಿಸ್​ನಲ್ಲಿ ಸುನೀಲ್ ಶೆಟ್ಟಿ ಜೊತೆ ಭಾವನಾ ರಾವ್ ನಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾವನಾ ರಾವ್ ಹಿಂದಿಯಲ್ಲಿ ಇದು ನನ್ನ ಮೊದಲ ವೆಬ್ ಸೀರಿಸ್. ಇದರಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ನಟಿಸಿದ್ದು, ಲಾಯರ್ ಪಾತ್ರವನ್ನು ನಿರ್ವಹಿಸಿದ್ದೇನೆ. ಒಟ್ಟು ಹತ್ತು ಸಂಚಿಕೆಗಳಿದ್ದು, ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ನವೆಂಬರ್ 19ರಂದು ಈ ವೆಬ್ ಸೀರೀಸ್ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಭಾವನಾ ರಾವ್ ನಟನೆಯ ಹೊಂದಿಸಿ ಬರೆಯಿರಿ, ಗ್ರೇ ಗೇಮ್ಸ್ ಬಿಡುಗಡೆಗೆ ರೆಡಿಯಾಗಿದ್ದು, ಇವುಗಳ ಜೊತೆ ಇನ್ನೂ ಮುರ್ನಾಲ್ಕು ಸಿನಿಮಾಗಳು ಅವರ ಕೈಯಲ್ಲಿವೆ.

ಕನ್ನಡತಿ ಭಾವನಾ ರಾವ್

ಇದನ್ನೂ ಓದಿ:ಅಪ್ಪು ಬಗ್ಗೆ ಅಮಿತಾಭ್​​ ಗುಣಗಾನ.. ಬಚ್ಚನ್​ಗೆ ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​​

ಇಂದೋರಿ ಇಶ್ಕ್, ಹಾಫ್ ಟಿಕೆಟ್ ಸಿನಿಮಾ ಖ್ಯಾತಿಯ ಸಮಿತ್ ಕಕ್ಕಡ್ 'ಧಾರಾವಿ ಬ್ಯಾಂಕ್' ವೆಬ್ ಸೀರೀಸ್ ಅನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಲೀಡ್ ರೋಲ್​ಗಳಲ್ಲಿ ಸುನೀಲ್ ಶೆಟ್ಟಿ ಹಾಗೂ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ನವೆಂಬರ್ 19ರಂದು ಎಂಎಕ್ಷ್​​ ಪ್ಲೇಯರ್​ನಲ್ಲಿ ವೆಬ್ ಸೀರೀಸ್ ಬಿಡುಗಡೆಯಾಗಲಿದೆ.

ABOUT THE AUTHOR

...view details