ಹಳೆಯ ಸಿನಿಮಾದ ಕೆಲವು ಟೈಟಲ್ಗಳನ್ನು ಸದ್ಯ ಹೊಸ ಸಿನಿಮಾಗಳಿಗೂ ಇಡುವುದು ಟ್ರೆಂಡಿಂಗ್ ಆಗಿ ಬಿಟ್ಟಿದೆ. ಈಗಾಗಲೇ ಸೂಪರ್ಹಿಟ್ ಸಿನಿಮಾಗಳ ಶೀರ್ಷಿಕೆಗಳು ಮರು ಬಳಕೆಯಾಗಿವೆ. ಇದೀಗ ಜಗ್ಗೇಶ್ ಅಭಿನಯದ 'ಭೈರವ' ಚಿತ್ರದ ಟೈಟಲ್ ಅನ್ನು ಮತ್ತೊಂದು ಸಿನಿಮಾ ಬಳಸಿಕೊಂಡಿದೆ. 'ಕಮರೊಟ್ಟು ಚೆಕ್ ಪೋಸ್ಟ್' ಸಿನಿಮಾದ ಸನತ್ ಹಾಗೂ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಶೈಲಾಶ್ರೀ ಮುಲ್ಕಿ ಅಭಿನಯಿಸುತ್ತಿರುವ ಚಿತ್ರಕ್ಕೆ 'ಭೈರವ' ಎಂದು ಶೀರ್ಷಿಕೆ ಇಡಲಾಗಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರುವ ಭೈರವ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.
ಸಾಯಿ ಸರ್ವೇಶ್ ಬರೆದಿರುವ ಸಾಹಿತ್ಯಕ್ಕೆ ಚೇತನ್ ಕೃಷ್ಣ ಸಂಗೀತ ನೀಡಿರುವ 'ಹೇ ಮಂದಾರ' ಹಾಡಿಗೆ ಅಜಯ್ ವಾರಿಯರ್ ಧ್ವನಿಯಾಗಿದ್ದಾರೆ. ಉತ್ತರ ಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಹಾಡಿಗೆ ಬಿ. ಧನಂಜಯ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಚರಣ್ ಸುವರ್ಣ ಅವರು ಬರೆದಿರುವ ಕಥೆಗೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ರಾಮ್ ತೇಜ ವಹಿಸಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್, ಒಂದು ಮೊಟ್ಟೆಯ ಕಥೆ ಖ್ಯಾತಿಯ ಶೈಲಾಶ್ರೀ ಮುಲ್ಕಿ ಹಾಗೂ ಬನ್ ಟೀ ಚಿತ್ರದಲ್ಲಿ ಗಮನ ಸೆಳೆದಿದ್ದ ಉಮೇಶ್ ಸಕ್ಕರೆನಾಡು ಹಾಗು ಇನ್ನೂ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಮೆಚ್ಚಿದ ಸ್ಯಾಂಡಲ್ವುಡ್ ಸ್ಟಾರ್ಸ್