ಟಾಲಿವುಡ್ ಪ್ರಸಿದ್ಧ ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ' ಇಂದು ತೆರೆಗಪ್ಪಳಿಸಿದೆ. ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳಿರುವ 'ಭಗವಂತ ಕೇಸರಿ' ಗುರುವಾರ (ಅಕ್ಟೋಬರ್ 19) ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಖ್ಯಾತನಾಮರ ಮೂರು ಸಿನಿಮಾಗಳು ಬಿಡುಗಡೆ:ಬಾಲಯ್ಯ ಅಭಿನಯದ 'ಭಗವಂತ ಕೇಸರಿ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇಂದು ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅಭಿನಯದ 'ಘೋಸ್ಟ್' ಹಾಗೂ ದಳಪತಿ ವಿಜಯ್ ಮುಖ್ಯಭೂಮಿಕೆಯ 'ಲಿಯೋ' ಸಿನಿಮಾ ಕೂಡ ತೆರೆಕಂಡಿದೆ. ಸಖತ್ ಸದ್ದು ಮಾಡುತ್ತಿರುವ ಈ ಸಿನಿಮಾಗಳ ಜೊತೆಗೆ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ 'ಭಗವಂತ ಕೇಸರಿ' ಸಹ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಂದೇ ದಿನ ದಕ್ಷಿಣ ಚಿತ್ರರಂಗದ ಖ್ಯಾತನಾಮರ ಮೂರು ಸಿನಿಮಾಗಳು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರೋದು ವಿಶೇಷ.
ಮಿಶ್ರ ಪ್ರತಿಕ್ರಿಯೆ: ಚಿತ್ರಮಂದಿರಗಳಿಗೆ ಇಂದು ಲಗ್ಗೆ ಇಟ್ಟಿರುವ 'ಭಗವಂತ ಕೇಸರಿ' ಸಿನಿಮಾಗೆ ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳಿದ್ದು, ಬಣ್ಣದ ಲೋಕದ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜೊತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸಹ ಇತರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಬಹುಬೇಡಿಕೆ ತಾರೆಯರು ಕಾಣಿಸಿಕೊಂಡಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಿನಿಮಾದಲ್ಲೊಂದು ಸಂದೇಶ: ನಂದಮೂರಿ ಬಾಲಕೃಷ್ಣ ಸೇರಿದಂತೆ ಚಿತ್ರದಲ್ಲಿನ ಪ್ರಮುಖ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತಲುಪಿದ್ದಾರೆ. ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಬಾಲಯ್ಯ ಅಭಿನಯದ ಸಿನಿಮಾ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ.