ಕರ್ನಾಟಕ

karnataka

ETV Bharat / entertainment

ಬಾಲಯ್ಯ ನಟನೆಯ 'ಭಗವಂತ ಕೇಸರಿ'ಗೆ ಭರ್ಜರಿ ಗೆಲುವು; ಮೊದಲ ದಿನದ ಕಲೆಕ್ಷನ್​ ಇಷ್ಟಂತೆ! - ಈಟಿವಿ ಭಾರತ ಕನ್ನಡ

ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ ಕೇಸರಿ' ಸಿನಿಮಾದ ಮೊದಲ ದಿನದ ಕಲೆಕ್ಷನ್​ ಹೀಗಿದೆ..

Bhagavanth kesari movie first day collections
ಭಗವಂತ ಕೇಸರಿ

By ETV Bharat Karnataka Team

Published : Oct 20, 2023, 5:54 PM IST

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ 'ಭಗವಂತ ಕೇಸರಿ' ಸಿನಿಮಾ ಗುರುವಾರ (ಅ.19) ತೆರೆ ಕಂಡಿದೆ. ಅನಿಲ್ ರವಿಪುಡಿ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾವು ಮೊದಲ ಪ್ರದರ್ಶನದಿಂದಲೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಉತ್ತಮ ಕಲೆಕ್ಷನ್​ ಕೂಡ ಮಾಡಿದೆ.

ಮೊದಲ ದಿನದ ಕಲೆಕ್ಷನ್​?: ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್​, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇದೀಗ ರಿಲೀಸ್​ ಆದ ಮೊದಲ ದಿನವೇ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಚಿತ್ರವು ವಿಶ್ವದಾದ್ಯಂತ 32.33 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಈ ಸಿನಿಮಾದ ಪ್ರಿ ರಿಲೀಸ್​ ಬ್ಯುಸಿನೆಸ್​ ಸುಮಾರು 65 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ಎಲ್ಲಾ ಲೆಕ್ಕಾಚಾರದ ಪ್ರಕಾರ 'ಭಗವಂತ ಕೇಸರಿ' ಸಿನಿಮಾ ಬಾಕ್ಸ್​ ಆಫೀಸ್‌ನಲ್ಲಿ 130 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

ಚಿತ್ರದಲ್ಲಿ ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಈ ಸಿನಿಮಾ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್​!

ಮುಖ್ಯವಾಗಿ ಬಾಲಯ್ಯ ಮತ್ತು ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಫ್ ಸ್ಕ್ರೀನ್​ನಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಇದೊಂದು ಹೃದಯಸ್ಪರ್ಶಿ ಚಿತ್ರ ಎಂದು ಸಿನಿಮಾ ವೀಕ್ಷಿಸಿದವರು ಎಕ್ಸ್​ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ:ನಿನ್ನೆ (ಅ.19) ಒಟ್ಟು ಮೂರು ಸಿನಿಮಾಗಳು ತೆರೆ ಕಂಡಿವೆ. ನಟ ಶಿವರಾಜ್​ಕುಮಾರ್​​ ಅಭಿನಯದ 'ಘೋಸ್ಟ್', ದಳಪತಿ ವಿಜಯ್​ ಮುಖ್ಯಭೂಮಿಕೆಯ 'ಲಿಯೋ' ಹಾಗೂ ಬಾಲಯ್ಯ ಅವರ 'ಭಗವಂತ ಕೇಸರಿ' ಚಿತ್ರಗಳು ಬಿಡುಗಡೆಯಾಗಿವೆ. ಇಂದು ಟಾಲಿವುಡ್​ ನಟ ರವಿತೇಜ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಮತ್ತು ಬಾಲಿವುಡ್ ನಟ ಟೈಗರ್​ ಶ್ರಾಫ್​ ಮುಖ್ಯಭೂಮಿಕೆಯ 'ಗಣಪತ್​' ಕೂಡ ತೆರೆ ಕಂಡಿವೆ. ಈ ಎಲ್ಲಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಭಾರಿ ಪೈಪೋಟಿ ನಡೆಸುತ್ತಿವೆ. ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:'ಟೈಗರ್​​ ನಾಗೇಶ್ವರ ರಾವ್​' ರಿಲೀಸ್​: ಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​

ABOUT THE AUTHOR

...view details