ಶಿವಮೊಗ್ಗ:ಎ.ಆರ್. ಶಾನ್ ನಿರ್ದೇಶನದ ಬೆಂಕಿ ಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಅನೀಶ್ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಅಣ್ಣ-ತಂಗಿಯ ಸಂಬಂಧವನ್ನು ಹೇಳುವ ಹಳ್ಳಿಯ ಸೊಗಡು ಹೊಂದಿರುವ, ಕುಟುಂಬ ಕಲ್ಪನೆ ಚಿತ್ರ ಇದಾಗಿದ್ದು, ಜುಲೈ 15 ರಂದು ಬಿಡುಗಡೆಯಾಗಲಿದೆ. ಶಿವಮೊಗ್ಗದ ಜನ ಈ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಈ ಚಿತ್ರದಲ್ಲಿ ನಾಯಕಿಯಾಗಿ ಸಂಪದ ಅಭಿನಯಿಸಿದ್ದು, ಶ್ರುತಿ ಪಾಟೀಲ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಅಚ್ಯುತಕುಮಾರ್, ಉಗ್ರಂ ಮಂಜು, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಅಭಿನಯಿಸಿದ್ದು, ಕೆ.ವಿ. ರವಿಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ.