ಸದ್ಯ ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಚಿತ್ರ 'ಬೆಂಗಳೂರು ಬಾಯ್ಸ್'. 90ರ ದಶಕದ ನಾಲ್ಕು ಐಕಾನಿಕ್ ಕ್ಯಾರೆಕ್ಟರ್‌ಗಳಾದ 'ಓಂ' ಚಿತ್ರದ ಶಿವಣ್ಣ, 'ಎ' ಚಿತ್ರದ ಉಪೇಂದ್ರ, 'ರಣಧೀರ' ಸಿನಿಮಾದ ರವಿಚಂದ್ರನ್, 'ಅಂತ' ಸಿನಿಮಾದ ಅಂಬರೀಶ್ ಅವತಾರದಲ್ಲಿ ಈ ಚಿತ್ರದ ನಾಲ್ಕು ಜನ ನಾಯಕರಾದ ಸಚಿನ್, ಅಭಿದಾಸ್, ಚಂದನ್ ಆಚಾರ್, ರೋಹಿತ್ ಫಸ್ಟ್ ಲುಕ್ ಅನಾವರಣ ಮಾಡಿ ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದಾರೆ.
ಇದೀಗ ಬೆಂಗಳೂರು ಬಾಯ್ಸ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿ ಪ್ರೇಮಿಗಳ ಮನಸ್ಸು ಕದಿಯುವ ಎಲ್ಲ ಲಕ್ಷಣಗಳು ಕಾಣ್ತಾ ಇದೆ. "ಮೊದಲು ಮನೆಯವರು ನಮ್ಮ ಮಕ್ಕಳು ಹಂಗೇ ಹಾಕ್ತಾರೆ, ಹಿಂಗೇ ಹಾಕ್ತಾರೆ ಅಂದರು ಕೊನೆಗೆ ಅನ್ನೋದು ಕಳ್ಳ ನನ್ ಮಕ್ಳೆ" ಎಂಬ ಪಂಚಿಂಗ್ ಡೈಲಾಗ್ನಿಂದ ಶುರುವಾಗುವ ಬೆಂಗಳೂರು ಬಾಯ್ಸ್ ಚಿತ್ರದ ಟ್ರೇಲರ್ ಮೋಜು, ಮಸ್ತಿ, ಎಮೋಷನಲ್ ಹಾಗೂ ಸೆಂಟಿಮೆಂಟ್ನಿಂದ ಕೂಡಿದೆ. ಕಾಲೇಜಿನಲ್ಲಿ ಕೊನೆಯ ಬೆಂಚಿನ ಹುಡುಗರು ವೇಸ್ಟ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅದೇ ಹುಡುಗರು ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹದ್ದೇ ಕಥೆಯನ್ನು ಹೊಂದಿರುವ ಸಿನಿಮಾವೇ ಬೆಂಗಳೂರು ಬಾಯ್ಸ್.
ಈ ಚಿತ್ರದಲ್ಲಿ ನಾಯಕರಾಗಿ ಸಚಿನ್, ಅಭಿದಾಸ್, ಚಂದನ್ ಆಚಾರ್, ರೋಹಿತ್ ಬಾನು ಪ್ರಕಾಶ್ ಪಕ್ಕಾ ಬೆಂಗಳೂರು ಬಾಯ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ನಾಲ್ಕು ಜನ ಹುಡುಗರಿಗೆ ವೈನಿಧಿ ಜಗದೀಶ್, ಸೋನಿ, ಜಯಶ್ರೀ ಆರಾಧ್ಯ, ಪ್ರಗ್ಯಾ ನಯನ ಎಂಬ ನಾಲ್ಕು ಸುಂದರಿ ಬೆಡಗಿಯರು ಜೊತೆಯಾಗಿದ್ದಾರೆ. ಈ ಮಧ್ಯೆ ನಟ ಚಿಕ್ಕಣ ಪಾತ್ರ ವಿಭಿನ್ನವಾಗಿದ್ದು, ಐಟಿಬಿಟಿ ಉದ್ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.