ಕರ್ನಾಟಕ

karnataka

ETV Bharat / entertainment

ಚುನಾವಣೆಗೂ ಮುನ್ನ ಬಿ.ಸಿ ಪಾಟೀಲ್‌ ಗೆಲ್ತಾರೆಂದು ಭವಿಷ್ಯ ನುಡಿದ ನಟಿ ಪ್ರೇಮಾ

ಹಿರೇಕೆರೂರಿಗೆ ಆಗಮಿಸಿದ ನಟಿ ಪ್ರೇಮಾ ಚುನಾವಣೆಯಲ್ಲಿ ಬಿ.ಸಿ ಪಾಟೀಲ್‌ ಗೆಲ್ತಾರೆಂದು ಭವಿಷ್ಯ ನುಡಿದಿದ್ದಾರೆ.

prema in haveri
ಹಿರೇಕೆರೂರಿನಲ್ಲಿ ನಟಿ ಪ್ರೇಮಾ

By

Published : Apr 6, 2023, 3:41 PM IST

Updated : Apr 6, 2023, 4:38 PM IST

ಹಿರೇಕೆರೂರಿನಲ್ಲಿ ನಟಿ ಪ್ರೇಮಾ

ಹಾವೇರಿ: ಮತದಾನಕ್ಕೂ ಮುನ್ನ ಕೌರವ ಸಿನಿಮಾದ ನಟ ಬಿ.ಸಿ ಪಾಟೀಲ್‌ ಗೆಲ್ತಾರೆಂದು ನಟಿ ಪ್ರೇಮಾ ಭವಿಷ್ಯ ನುಡಿದಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ನಟಿ ಪ್ರೇಮಾ ಇಂದು ನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ ಪಾಟೀಲ್‌ ಯಶಸ್ಸು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಿ.ಸಿ ಪಾಟೀಲ್ ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ಅವರು ಖಂಡಿತವಾಗಿ ಗೆಲ್ಲುತ್ತಾರೆ ಎಂದು ಪ್ರೇಮಾ ತಿಳಿಸಿದರು. ಬಿ.ಸಿ ಪಾಟೀಲರು ನನಗೆ ಕರೆ ಮಾಡಿ ಕಾರ್ಯಕ್ರಮಕ್ಕೆ‌ ಬರುವಂತೆ ತಿಳಿಸಿದ್ದರು, ಹಾಗಾಗಿ ಬಂದಿದ್ದೇನೆ. ಪ್ರಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮ ತಂದೆ ನಿಧನರಾದಾಗ ಬಿ.ಸಿ ಪಾಟೀಲ್​ ಅವರು ಬಂದಿದ್ದರು. ಅವರ ಬ್ಯಾನರ್ ಅಡಿ ಚಿತ್ರ ಮಾಡಿದ್ದೇನೆ. ಹೀಗಾಗಿ ಅವರ ಮೇಲಿನ ಗೌರವದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಪ್ರೇಮಾ ಇದೇ ವೇಳೆ ತಿಳಿಸಿದರು. ಅಲ್ಲದೇ ಇಲ್ಲಿ ನನಗೆ ಬಹಳಷ್ಟು ಮಹಿಳೆಯರು ಅಭಿಮಾನಿಗಳಿದ್ದಾರೆ. ಖಂಡಿತ ಅವರಿಗೆ ಮತ ಬೀಳುತ್ತವೆ ಎಂಬ ವಿಶ್ವಾಸವನ್ನು ನಟಿ ಪ್ರೇಮಾ ವ್ಯಕ್ತಪಡಿಸಿದರು.

ಇದನ್ನು ಓದಿ:ಬಿ.ಸಿ.ಪಾಟೀಲ್ - ಯು ಬಿ ಬಣಕಾರ್​ಗೆ ಪ್ರತಿಷ್ಠೆಯ ಕಣ ಹಿರೇಕೆರೂರು

ಇದನ್ನು ಓದಿ:ಟಿಕೆಟ್ ಘೋಷಣೆಗೂ ಮುನ್ನವೇ ಬಂಡಾಯ: ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾದ ಕುಮಟಾ ಕ್ಷೇತ್ರ

ನಟ ಸುದೀಪ್ ಅವರು ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲ ಆ ಬಗ್ಗೆ ನನಗೇನೂ ಗೊತ್ತಿಲ್ಲ, ರಾಜಕೀಯದ ಬಗ್ಗೆ ಗೊತ್ತಿಲ್ಲ. ಪಾಟೀಲರು ಕರೆದಿದ್ದರು, ಹಾಗಾಗಿ ಬಂದಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್​

ನಟಿ ಪ್ರೇಮಾ ಮತ್ತು ಬಿ.ಸಿ ಪಾಟೀಲ್​​ ಕೌರವ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಸಿನಿಮಾ ಹಿಟ್ ಆಗಿ, ಈ ಜೋಡಿ ಫೇಮಸ್ ಕೂಡಾ ಆಗಿತ್ತು. ಈಗಲೂ ಕೌರವ ಕಪಲ್ ಎಂದೇ ಈ ಜೋಡಿ ಫೇಮಸ್​. ಆ ಸಿನಿಮಾದಿಂದಲೇ ಈ ಜೋಡಿಯನ್ನು ಅವರ ಅಭಿಮಾನಿಗಳು ಗುರುತಿಸುತ್ತಾರೆ. ಇಬ್ಬರೂ ಉತ್ತಮ ಸ್ನೇಹಿತರು. ಇದೀಗ ಬಿ.ಸಿ ಪಾಟೀಲ್‌ ಆಹ್ವಾನದ ಮೇರೆಗೆ ನಟಿ ಜಿಲ್ಲೆಗೆ ಆಗಮಿಸಿದ್ದು, ಪ್ರಚಾರಕ್ಕೆ ಇಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:''ಸುದೀಪ್ ಹೇಳಿಕೆಯಿಂದ ಆಘಾತವಾಗಿದೆ'': ನಟ ಪ್ರಕಾಶ್ ರಾಜ್

ಇದನ್ನು ಓದಿ:ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ; ಜೆಡಿಎಸ್‌ನಿಂದ ಕಾದು ನೋಡುವ ತಂತ್ರ

ಇದನ್ನು ಓದಿ: ಕುಮಾರಸ್ವಾಮಿ ಯಾರೊಂದಿಗೂ ಮೈತ್ರಿ ಬಯಸುತ್ತಿಲ್ಲ: ಚುನಾವಣೋತ್ತರ ಮೈತ್ರಿ ಬಗ್ಗೆ ದೇವೇಗೌಡರ ಮಾತು

ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕ್ರಮ: ಅರುಣ್ ಸಿಂಗ್

Last Updated : Apr 6, 2023, 4:38 PM IST

ABOUT THE AUTHOR

...view details