ಕರ್ನಾಟಕ

karnataka

ETV Bharat / entertainment

Bawaal trailer: ವರುಣ್ ಧವನ್- ಜಾಹ್ನವಿ ಕಪೂರ್ ನಟನೆಯ 'ಬವಾಲ್' ಟ್ರೇಲರ್​ ಔಟ್​ - ನಿರ್ದೇಶಕ ನಿತೀಶ್ ತಿವಾರಿ

ಬಾಲಿವುಡ್ ನಟರಾದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ನಟನೆಯ 'ಬವಾಲ್' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

Bawaal trailer
'ಬಾವಲ್' ಟ್ರೇಲರ್​ ಔಟ್​

By

Published : Jul 9, 2023, 7:40 PM IST

ಬಾಲಿವುಡ್ ನಟರಾದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ 'ಬವಾಲ್' ಚಿತ್ರ ಈ ತಿಂಗಳು ಓಟಿಟಿ ಪ್ಲಾಟ್‌ಫಾರ್ಮ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಇಂದು ನಿರ್ಮಾಪಕರು ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. 3 ನಿಮಿಷಗಳ ಟ್ರೇಲರ್​ನಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ನಡುವಿನ ಪ್ರಣಯವನ್ನು ತೋರಿಸುತ್ತದೆ.

ಚಿತ್ರದಲ್ಲಿ 'ಅಜಯ್' ಪಾತ್ರದಲ್ಲಿ ವರುಣ್ ಧವನ್ ಮತ್ತು 'ನಿಶಾ' ಪಾತ್ರದಲ್ಲಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಾಹ್ನವಿ ಮತ್ತು ವರುಣ್​ ತೆರೆ ಹಂಚಿಕೊಂಡಿದ್ದಾರೆ. ಪ್ರೈಮ್ ವಿಡಿಯೋ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ 'ಪ್ರೀತಿಯಿಂದ ಬವಾಲ್​ಗೆ ಪ್ರಯಾಣ' ಎಂಬ ಶೀರ್ಷಿಕೆಯನ್ನು ನೀಡಿದೆ.

ಟ್ರೇಲರ್ ವರುಣ್ ಧವನ್‌ನೊಂದಿಗೆ ಪ್ರಾರಂಭವಾಗುತ್ತದೆ. ಅಜಯ್​ ಪಾತ್ರದಲ್ಲಿ ವರುಣ್ ಧವನ್, ಬೈಕ್‌ನೊಂದಿಗೆ ಲಕ್ನೋದ ಬೀದಿಗಳಲ್ಲಿ ಸುತ್ತುತ್ತಿರುವುದನ್ನು ಕಾಣಬಹುದು. ಕೆಲವೊಂದು ಪಂಚಿಂಗ್​ ಡೈಲಾಗ್​ಗಳನ್ನು ಅವರು ಹೇಳುತ್ತಿರುವುದನ್ನು ಕೇಳಬಹುದು. ಜೊತೆಗೆ ಎರಡನೇ ಮಹಾಯುದ್ಧದ ಪಾಠಗಳನ್ನು ತರಗತಿಯಲ್ಲಿ ಮಕ್ಕಳಿಗೆ ಕಲಿಸುತ್ತಿರುವುದು ಕಂಡುಬರುತ್ತದೆ. ಹೀಗಾಗಿ ವರುಣ್​ ಧವನ್​ ಶಾಲಾ ಶಿಕ್ಷಕನ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ:'ಘೋಸ್ಟ್​' ಒಡೆಯನಿಗೆ ಜನ್ಮದಿನದ ಸಂಭ್ರಮ: ಕೌತುಕ ಹೆಚ್ಚಿಸಿದ 'BIG DADDY'‌ ಪೋಸ್ಟರ್​

ಅಲ್ಲದೇ ಅವರು ಒಬ್ಬ ಅತ್ಯುತ್ತಮ ಶಿಕ್ಷಕನಾಗಿ ವಿದ್ಯಾರ್ಥಿಗಳಿಂದ ಆರಾಧಿಸಲ್ಪಡುತ್ತಾರೆ ಮತ್ತು ಇಡೀ ಪಟ್ಟಣದ ಜನರು ಅವರನ್ನು ಮೆಚ್ಚಿಕೊಳ್ಳುತ್ತಾರೆ. ಜಾಹ್ನವಿ ಕಪೂರ್​ ನಿಶಾ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಆಕರ್ಷಕ ಮತ್ತು ಸರಳ ಹುಡುಗಿಯಾಗಿ ನಟಿಸಿದ್ದಾರೆ. ಇವರಿಬ್ಬರ ನಡುವಿನ ಪ್ರೀತಿಯ ಕಥೆಯಿದು. ಆದರೆ ಪ್ರೀತಿ ಎಂದಿಗೂ ಸುಲಭದಲ್ಲಿ ಸಿಗುವುದಿಲ್ಲ. ಅದಕ್ಕೆ ಕೆಲವೊಂದು ಹೋರಾಟಗಳನ್ನು ಮಾಡಲೇಬೇಕು. ಅದೇ ಈ ಚಿತ್ರದ ಕಥಾಹಂದರ.

ಬಿಡುಗಡೆಯಾಗಿರುವ ಟ್ರೇಲರ್​ 3 ನಿಮಿಷ 03 ಸೆಕೆಂಡುಗಳಿವೆ. ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ನಡುವಿನ ಅದ್ಭುತ ಕೆಮಿಸ್ಟ್ರಿ ತೋರಿಸಲಾಗಿದೆ. ಮದುವೆಯ ನಂತರ, ಅಜಯ್ ಮತ್ತು ನಿಶಾ ಯುರೋಪ್ ಪ್ರವಾಸಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ಎರಡನೇ ಮಹಾಯುದ್ಧದ ದೃಶ್ಯವನ್ನು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ತೋರಿಸಲಾಗಿದೆ.

ನಿರ್ದೇಶಕ ನಿತೀಶ್ ತಿವಾರಿ ಅವರ ಅತ್ಯಂತ ದುಬಾರಿ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, 'ಬವಾಲ್' ಅನ್ನು ಪ್ಯಾರಿಸ್, ಬರ್ಲಿನ್, ಪೋಲೆಂಡ್, ಆಮ್ಸ್ಟರ್‌ಡ್ಯಾಮ್, ಕ್ರಾಕೋವ್, ವಾರ್ಸಾ ಜೊತೆಗೆ ಲಕ್ನೋ ಮತ್ತು ಭಾರತದ ಇತರ ಎರಡು ನಗರಗಳಲ್ಲಿ ಚಿತ್ರೀಕರಿಸಲಾಗಿದೆ. ಜರ್ಮನಿಯ ಸಾಹಸ ನಿರ್ದೇಶಕರು ಮತ್ತು ಸ್ಟಂಟ್‌ಮೆನ್‌ಗಳು ಸೇರಿದಂತೆ ಚಿತ್ರತಂಡವು 700 ಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ ಎನ್ನಲಾಗಿದೆ.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಜೋಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ದಾರೆ. ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೇ ಜುಲೈ 23 ರಂದು ಚಿತ್ರ ಓಟಿಟಿ ಪ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಲಿದೆ.

ಇದನ್ನೂ ಓದಿ:ಶ್ರೇಷ್ಠ ಸಾಹಿತಿ ರವೀಂದ್ರನಾಥ್​ ಠಾಗೋರ್​ ಪಾತ್ರದಲ್ಲಿ ಅನುಪಮ್​ ಖೇರ್​: ಹಿರಿಯ ನಟನ 538ನೇ ಸಿನಿಮಾ!

ABOUT THE AUTHOR

...view details