ಬಾಲಿವುಡ್ ಪ್ರತಿಭೆಗಳಾದ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ 'ಬವಾಲ್'. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿರುವ ಬವಾಲ್ ಚಿತ್ರದ ತಯಾರಕರು ಇಂದು ದಿಲ್ ಸೆ ದಿಲ್ ತಕ್ ಹಾಡನ್ನು ಅನಾವರಣಗೊಳಿಸಿದ್ದಾರೆ. ಇದು ಈ ಚಿತ್ರದ ಎರಡನೇ ಹಾಡು. ಪ್ಯಾರಿಸ್‌ನಲ್ಲಿ ಜೋಡಿ ನಡುವೆ ಪ್ರೇಮ ಚಿಗುರೊಡೆಯುತ್ತಿರುವ ದೃಶ್ಯಗಳು ಈ ದಿಲ್ ಸೆ ದಿಲ್ ತಕ್ ಹಾಡಿನಲ್ಲಿದೆ.
ಇನ್ಸ್ಟಾಗ್ರಾಮ್ನಲ್ಲಿಂದು ನಟಿ ಜಾನ್ವಿ ಕಪೂರ್, ಹಾಡಿನ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. ದಿಲ್ ಸೆ ದಿಲ್ ತಕ್ ಹಾಡು ಅನಾವರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ. ಆಕಾಶ್ ದೀಪ್ ಸೇನ್‌ಗುಪ್ತಾ ಅವರು ಸಂಯೋಜಿಸಿರುವ ಹಾಡನ್ನು, ಲಕ್ಷಯ್ ಕಪೂರ್ ಮತ್ತು ಸುವರ್ಣ ತಿವಾರಿ ಹಾಡಿದ್ದಾರೆ. ಕೌಸರ್ ಮುನೀರ್ ಸಾಹಿತ್ಯವಿರುವ ಈ ಹಾಡಿಗೆ, ವರುಣ್ ಮತ್ತು ಜಾನ್ವಿ ನಟಿಸಿದ್ದಾರೆ.
ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿರುವ ಬವಾಲ್ ಜುಲೈ 21 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ವಿಶ್ವ ಸಮರ 2 ರ ಹಿನ್ನೆಲೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ. ಚಿತ್ರತಂಡ ದಿಲ್ ಸೆ ದಿಲ್ ತಕ್ ಹಾಡಿಗೂ ಮೊದಲು 'ತುಮ್ಹೆ ಕಿತ್ನಾ ಪ್ಯಾರ್ ಕರ್ತೆ' ಸಾಂಗ್ ಅನ್ನು ರಿಲೀಸ್ ಮಾಡಿದ್ದರು. ಈ ಹಾಡನ್ನು ಸಂಗೀತ ಮಾಂತ್ರಿಕ ಅರಿಜಿತ್ ಸಿಂಗ್ ಹಾಡಿದ್ದರೆ, ಮಿಥುನ್ ಅವರ ಸಂಯೋಜನೆ ಈ ಹಾಡಿಗಿತ್ತು.
ಇದನ್ನೂ ಓದಿ:ಚಿರಂಜೀವಿ ಮೊಮ್ಮಗಳಿಗೆ ಸ್ಪೆಷಲ್ ರೂಂ... ಫಾರೆಸ್ಟ್ ಥೀಮ್ನೊಂದಿಗೆ ರೆಡಿಯಾಯ್ತು ರಾಮ್ ಚರಣ್ ಪುತ್ರಿಯ ಕೊಠಡಿ!
ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದ ನಟ ವರುಣ್ ಧವನ್, ''ಈ ಚಿತ್ರ ನನ್ನ ಸಿನಿ ಜೀವನದ ಪ್ರಮುಖ ಹೆಗ್ಗುರುತಾಗಲಿದೆ. 'ಬವಾಲ್' ನನಗೆ ಅತ್ಯಂತ ಸವಾಲಿನ ಪ್ರಯಾಣ. ಆದರೆ, ಇದು ಅತ್ಯಂತ ರೋಮಾಂಚನಕಾರಿ ಜರ್ನಿಯಲ್ಲಿ ಒಂದಾಗಿದೆ ಎಂದು ತಿಳಿಸಿದ್ದರು. ತಮ್ಮ ಜನಪ್ರಿಯತೆಯ ಹೊರತಾಗಿಯೂ ಕೆಲ ನಿರ್ಣಾಯಕ ಪಾತ್ರಗಳಿಗೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಈ ಸಿನಿಮಾ ಸದಾ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಪ್ರಪಂಚದಾದ್ಯಂತದ ಪ್ರೇಕ್ಷಕರು ಅಜ್ಜು ಮತ್ತು ನಿಶಾ (ಸಿನಿಮಾ ಪಾತ್ರಗಳು) ಜೋಡಿಯ ಪ್ರಣಯ ಕಥೆಯನ್ನು ವೀಕ್ಷಿಸುವುದನ್ನು ನೋಡಲು ನನ್ನಿಂದ ಹೆಚ್ಚು ನಾನು ಕಾಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದರು.
ಇದನ್ನೂ ಓದಿ:ಕಪ್ಪು ಸೀರೆಯಲ್ಲಿ ಕಂಗೊಳಿಸಿದ ಕಾಂತಾರ ನಟಿ.. ಅಭಿಮಾನಿಗಳ ಮನಸೂರೆಗೊಂಡ ಶಿವನ ಜೋಡಿ ಲೀಲಾ ಲುಕ್
ಚಿತ್ರವು ಒಂದು ವಿಶಿಷ್ಟ ಪ್ರೇಮಕಥೆಯಾಗಿದ್ದು, ಇದರಲ್ಲಿ ಜಾನ್ವಿ ಕಪೂರ್ ಕನಸುಗಳುಳ್ಳ ಸರಳ ಹುಡುಗಿಯಾಗಿ ನಟಿಸಿದ್ದಾರೆ. "ನಟರಾದ ನಾವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಆದರೆ ನಟರಾಗಿ, ಪ್ರತಿಭೆ ಅನಾವರಣಗೊಳಿಸಲು ಹೆಚ್ಚು ಅವಕಾಶಗಳನ್ನು ನೀಡುವ ಪಾತ್ರಗಳು ನಮಗೆ ಅಪರೂಪಕ್ಕೆ ಸಿಗುತ್ತದೆ. ಈ ವಿಶಿಷ್ಟ ರೊಮ್ಯಾಂಟಿಕ್ ಸ್ಟೋರಿಯಲ್ಲಿ ನಿಶಾ ಆಗಿ ಕಾಣಿಸಿಕೊಂಡಿದ್ದೇನೆ'' ಎಂದು ತಿಳಿಸಿದರು.