ಕರ್ನಾಟಕ

karnataka

ETV Bharat / entertainment

ಐಫೆಲ್ ಟವರ್‌ನಲ್ಲಿ ಪ್ರೀಮಿಯರ್‌ ಆಗಲಿರುವ ಭಾರತದ ಮೊದಲ ಸಿನಿಮಾ 'ಬವಾಲ್' - ಬವಾಲ್ ಪ್ರೀಮಿಯರ್‌

ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಬವಾಲ್ (Bawaal) ಸಿನಿಮಾದ ಮೊದಲ ಪ್ರದರ್ಶನ ನಡೆಯಲಿದೆ. ಐಫೆಲ್ ಟವರ್‌ನಲ್ಲಿ ಪ್ರೀಮಿಯರ್‌ ಆಗಲಿರುವ ಭಾರತ ಮೊದಲ ಸಿನಿಮಾ ಇದಾಗಲಿದೆ.

Bawaal movie to premiere at Eiffel Tower
ಐಫೆಲ್ ಟವರ್‌ನಲ್ಲಿ ಪ್ರೀಮಿಯರ್‌ ಆಗಲಿದೆ ಬವಾಲ್

By

Published : Jun 22, 2023, 4:57 PM IST

Updated : Jun 22, 2023, 5:22 PM IST

ನಿತೇಶ್ ತಿವಾರಿ ನಿರ್ದೇಶನದ, ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಬವಾಲ್ (Bawaal) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿರುವ ಚಿತ್ರವಿದು. ಕಳೆದ ಎರಡು ವರ್ಷಗಳಿಂದ ಈ ಬವಾಲ್​ ಸಿನಿಮಾ ಸುದ್ದಿಯಲ್ಲಿದ್ದು, ಜುಲೈನಲ್ಲಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆ ಆಗಲಿದೆ. ವರದಿಗಳ ಪ್ರಕಾರ, ಜುಲೈ ಮಧ್ಯದಲ್ಲಿ ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ನಲ್ಲಿ ಪ್ರೀಮಿಯರ್‌ ಆಗಲಿದೆ.

ಈ ಬೆಳವಣಿಗೆಗೆ ಹತ್ತಿರದ ಮೂಲವೊಂದು ಮಾಹಿತಿ ಹಂಚಿಕೊಂಡಿದ್ದು, "ಬವಾಲ್ ಸಿನಿಮಾ ಐಫೆಲ್ ಟವರ್‌ನಲ್ಲಿ ಪ್ರಥಮ ಪ್ರದರ್ಶನ (ಪ್ರೀಮಿಯರ್‌) ಆಗಲಿರುವ ಮೊಟ್ಟ ಮೊದಲ ಭಾರತೀಯ ಚಲನಚಿತ್ರ. ಪ್ರಥಮ ಪ್ರದರ್ಶನ ಕಾರ್ಯಕ್ರಮ ಐಫೆಲ್‌ನಲ್ಲಿ ನಡೆಯಲಿದೆ. ವರುಣ್ ಧವನ್​​, ಜಾನ್ವಿ ಕಪೂರ್​, ಸಾಜಿದ್ ಮತ್ತು ನಿತೇಶ್ ಅವರಲ್ಲದೇ ಸಿನಿಪ್ರಿಯರು ಮತ್ತು ಫ್ರೆಂಚ್ ಪ್ರತಿನಿಧಿಗಳು ಸಹ ಪ್ರೀಮಿಯರ್‌ಗೆ ಹಾಜರಾಗಲಿದ್ದಾರೆ.

ಬವಾಲ್ ಸಿನಿಮಾವನ್ನು ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರ ತಯಾರಕರು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಹಿಂದಿ ಸಿನಿಮಾ ನೋಡುವ ಪ್ರೇಕ್ಷಕರನ್ನು ಮೀರಿ ಎಲ್ಲೆಡೆ ತಲುವುವ ಆಲೋಚನೆ ಇದೆ. ಮೂಲಗಳ ಪ್ರಕಾರ, ಪ್ಯಾರಿಸ್‌ನಲ್ಲಿ ಸಿನಿಮಾದ ಕೆಲ ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಸಿನಿಮಾ ಕಥೆಯಲ್ಲಿ ಪ್ಯಾರಿಸ್​​ ನಗರವು ಒಂದು ಪ್ರಮುಖ ಪಾತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ವರ್ಲ್ಡ್​ ವಾರ್​ 2 ಉಲ್ಲೇಖಗಳ ಜೊತೆಗೆ ಹೆಚ್ಚಿನ ಭಾಗ ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾ ಪ್ರೀತಿಯ ನಗರ ಎಂದೇ ಜನಪ್ರಿಯವಾಗಿರುವ ಪ್ಯಾರಿಸ್​​ನಲ್ಲಿ ಪ್ರೀಮಿಯರ್​ ಆಗಲಿರುವುದು ಗಮನಾರ್ಹ ವಿಷಯ.

ಇದನ್ನೂ ಓದಿ:Mysuru Film city: ಚಿಗುರೊಡೆದ 'ಮೈಸೂರು ಫಿಲ್ಮ್​ ಸಿಟಿ' ಕನಸು: ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದೇನು?

'ಬವಾಲ್' ಸಾಜಿದ್ ನಾಡಿಯಾಡ್ವಾಲಾ ಮತ್ತು ನಿತೇಶ್ ತಿವಾರಿ ಅವರ ಎರಡನೇ ಪ್ರೊಜೆಕ್ಟ್​​. ಇದಕ್ಕೂ ಮೊದಲ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ಚಿಚೋರ್​​ (Chhichhore) ಅಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ನಿರ್ಮಾಪಕ, ನಿರ್ದೇಶಕ ಕಾಂಬೋದ ಬವಾಲ್​ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಸುಮಾರು 200 ದೇಶಗಳಲ್ಲಿ ಜುಲೈನಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ. ಬವಾಲ್​​ ಟ್ರೇಲರ್ ಒಂದೆರಡು ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಂತರ ಹಾಡುಗಳು ಅನಾವರಣಗೊಳ್ಳಲಿದೆ.

ಇದನ್ನೂ ಓದಿ:Haddi: ನವಾಜುದ್ದೀನ್ ಸಿದ್ದಿಕಿಯ ಸಿನಿಮಾದಲ್ಲಿ ನಟಿಸುತ್ತಿರುವ 300 ತೃತೀಯಲಿಂಗಿಗಳು

'ದೇವರ' ಜಾನ್ವಿ ಕಪೂರ್ ಅವರ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ. ಆರ್​ಆರ್​ಆರ್​ ಸ್ಟಾರ್ ಜೂನಿಯರ್ ಎನ್‌ಟಿಆರ್ ಜೊತೆ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಬಾಲಿವುಡ್​ಗೆ ಸೀಮಿತವಾಗಿದ್ದ ಜಾನ್ವಿ ಟಾಲಿವುಡ್‌ಗೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಮಾತ್ರವಲ್ಲದೇ ಇತರೆ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಮಿಸ್ಟರ್ ಆ್ಯಂಡ್​ ಮಿಸೆಸ್ ಮಾಹಿ, ಉಲ್ಜಾ ಸಿನಿಮಾದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಹೊಸ ಚಿತ್ರಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆನ್ನುವ ಮಾಹಿತಿ ಇದೆ.

Last Updated : Jun 22, 2023, 5:22 PM IST

ABOUT THE AUTHOR

...view details