ಕರ್ನಾಟಕ

karnataka

ETV Bharat / entertainment

Bang: ಶಾನ್ವಿ ಶ್ರೀವಾಸ್ತವ್​ ಗ್ಯಾಂಗ್​ಸ್ಟರ್​ ಅವತಾರ, ಫ್ಯಾನ್ಸ್​ ಫಿದಾ - ಗಾಯಕ ರಘು ದೀಕ್ಷಿತ್

Bang movie trailer: ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Bang Cinema Team
ಬ್ಯಾಂಗ್​ ಸಿನಿಮಾ ತಂಡ

By

Published : Jul 31, 2023, 10:32 AM IST

Updated : Jul 31, 2023, 11:36 AM IST

ಚಂದ್ರಲೇಖಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ದಕ್ಷಿಣ ಭಾರತದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಶಾನ್ವಿ ಶ್ರೀವಾಸ್ತವ್. 'ಅವನೇ ಶ್ರೀಮನ್‌ ನಾರಾಯಣ' ಚಿತ್ರದ ಬಳಿಕ ಶಾನ್ವಿ ಶ್ರೀವಾಸ್ತವ್ ಈಗ ಗ್ಯಾಂಗ್‌ಸ್ಟರ್ ಅವತಾರ ತಾಳಿದ್ದಾರೆ‌. ಕನ್​ಫ್ಯೂಸ್ ಆಗ್ಬೇಡಿ, ಇದು ಶಾನ್ವಿ ಶ್ರೀವಾಸ್ತವ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಬ್ಯಾಂಗ್. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಬ್ಯಾಂಗ್ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿರಿಯ ನಟ ದತ್ತಣ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರಾಪರ್ ALL Ok ಸಂದರ್ಭದಲ್ಲಿ ಸಾಥ್ ನೀಡಿದರು.

ಶಾನ್ವಿ ಶ್ರೀವಾಸ್ತವ್​ ಹಾಗೂ ರಘು ದೀಕ್ಷತ್​

ಮೊದಲು ಮಾತು ಶುರು ಮಾಡಿದ ಶಾನ್ವಿ ಶ್ರೀವಾಸ್ತವ್, "ನನ್ನದು ಬ್ಯಾಂಗ್ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರ. ಈತನಕ ಯಾವ ಚಿತ್ರದಲ್ಲೂ ಮಾಡಿರದ ಪಾತ್ರವಿದು.‌ ನಿರ್ದೇಶಕ ಗಣೇಶ್ ಒಳ್ಳೆಯ ಕಥೆ ಮಾಡಿದ್ದಾರೆ. ನನ್ನ ಜೊತೆ ನಟಿಸಿರುವ ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ" ಎಂದರು.

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್​ ಮಾತನಾಡಿ, "ನಿರ್ದೇಶಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ರಿತ್ವಿಕ್ ನನ್ನನ್ನು ಭೇಟಿಯಾಗಲು ಬಂದಾಗ ನಾನು ಹಾಡು ಹಾಡಲು ಕೇಳಿರುವುದಕ್ಕೆ ಬಂದಿದ್ದಾರೆ ಅಂದುಕೊಂಡೆ. ಆದರೆ ಅವರು ನೀವು ಈ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಹೇಳಿದಾಗ ಆಶ್ಚರ್ಯವಾಯಿತು. ನಾನು ಮೊದಲು ಒಪ್ಪಲಿಲ್ಲ‌, ಆದರೆ ಅವರು ಬಿಡಲಿಲ್ಲ. ಕೊನೆಗೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಶಾನ್ವಿ ಅವರ ತಂದೆಯ ಪಾತ್ರ ನನ್ನದು. ಚಿತ್ರ ಬಿಡುಗಡೆ ಕಾತುರದಿಂದ ಕಾಯುತ್ತಿದ್ದೇನೆ" ಎಂದು ಹೇಳಿದರು.

ಬ್ಯಾಂಗ್ ಡಾರ್ಕ್ ಕಾಮಿಡಿ ಆ್ಯಕ್ಷನ್ ಜಾನರ್​ನ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಣೇಶ್ ಪರಶುರಾಮ್, ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ಟ್ರೇಲರ್​ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಸುದೀಪ್ ಅವರಿಗೆ ವಿಶೇಷ ಧನ್ಯವಾದ ಎಂದರು.

ಬ್ಯಾಂಗ್​ ಸಿನಿಮಾ ತಂಡ

ಸಂಗೀತ ನಿರ್ದೇಶಕ ಹಾಗೂ ನಟ ರಿತ್ವಿಕ್ ಮುರಳೀಧರ್ ಸಂಗೀತವಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ನಿರ್ಮಾಪಕಿ ಪೂಜಾ ವಸಂತ ಕುಮಾರ್ ನಿರ್ಮಾಣ ಮಾಡಿದ್ದಾರೆ. ಬ್ಯಾಂಗ್ ಚಿತ್ರ ಆಗಸ್ಟ್ 18ರಂದು ಬಿಡುಗಡೆಯಾಗುತ್ತಿದೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Toby: ರಾಜ್​ ಬಿ ಶೆಟ್ಟಿ 'ಟೋಬಿ' ಚಿತ್ರದ ಟ್ರೇಲರ್​ಗೆ ಮುಹೂರ್ತ ಫಿಕ್ಸ್​..

Last Updated : Jul 31, 2023, 11:36 AM IST

ABOUT THE AUTHOR

...view details