ಕರ್ನಾಟಕ

karnataka

ETV Bharat / entertainment

ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ: ಚಿತ್ರತಂಡಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್​ - banaras movie release date

ನವೆಂಬರ್ 4ರಂದು ದೇಶಾದ್ಯಂತ ತೆರೆಕಾಣಲಿರುವ ಬನಾರಸ್​ ಚಿತ್ರದ ತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಒಂದು ಸುತ್ತಿನ ಬೆಂಗಳೂರು ಮತ್ತು ಮೈಸೂರು ಯಾತ್ರೆ ಮುಗಿಸಿಕೊಂಡಿರುವ ಈ ತಂಡ, ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಮರಳಿದೆ.

Banaras movie yatre from bangalore to mysore
ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ

By

Published : Oct 31, 2022, 1:23 PM IST

ಶಾಸಕ ಜಮೀರ್​ ಅಹ್ಮದ್ ಖಾನ್​ ಪುತ್ರ ಝೈದ್ ಖಾನ್ ನಾಯಕನಾಗಿ ನಟಿಸಿರುವ 'ಬನಾರಸ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಚಿತ್ರ ತಂಡ, ಬೆಂಗಳೂರು ಟು ಮೈಸೂರಿನವರೆಗೂ ಯಾತ್ರೆ ನಡೆಸಿದೆ. ಬೆಂಗಳೂರಿನ ಟೌನ್ ಹಾಲ್‌ನಿಂದ ಈ ಯಾತ್ರೆ ಆರಂಭಗೊಂಡಿದ್ದು, ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ.

ಟೌನ್ ಹಾಲ್‌ನಿಂದ ನೇರವಾಗಿ ಮೈಸೂರ್ ರಸ್ತೆಯತ್ತ ಸಾಗಿಬಂದ ಚಿತ್ರ ತಂಡ, ಗಾಳಿ ಆಂಜನೇಯ ದೇವಸ್ಥಾನ ತಲುಪಪಿತು. ವಂದಿಸಿದ ತರುವಾಯ ರಾಜರಾಜೇಶ್ವರಿನಗರ, ಕೆಂಗೇರಿ ಹಾದಿಯಲ್ಲಿ ಮುಂದುವರೆಯಿತು. ಅಂಚೆಪುರ, ಕಂಬಿಪಾಳ್ಯ ಮಾರ್ಗವಾಗಿ ಸಾಗಿದ ಈ ಬೃಹತ್ ಬನಾರಸ್ ಯಾತ್ರೆ ಬಿಡದಿಯ ಶಶಿ ತಟ್ಟೆ ಇಡ್ಲಿ ಹೋಟೆಲ್​ನ ಬಳಿ ಜಮಾವಣೆಗೊಂಡಿತ್ತು.

ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ

ಅಲ್ಲಿಯೇ ನಟ ಝೈದ್ ಖಾನ್ ಹಾಗೂ ಚಿತ್ರತಂಡ ಎಲ್ಲರೊಂದಿಗೂ ತಿಂಡಿ ಮುಗಿಸಿಕೊಂಡು ರಾಮನಗರ ಜಿಲ್ಲೆಯತ್ತ ಪಯಣ ಬೆಳೆಸಿತು. ಅಲ್ಲಿಯೂ ಅಪಾರ ಪ್ರಮಾಣದಲ್ಲಿ ಪ್ರೇಕ್ಷಕರು, ಅಭಿಮಾನಿಗಳ ಸಮ್ಮುಖದಲ್ಲಿ ಬನಾರಸ್ ಚಿತ್ರದ ಪ್ರಚಾರದ ನಿಮಿತ್ತವಾಗಿ ರೋಡ್ ಶೋ ನಡೆಸಲಾಯಿತು.

ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ

ಆ ಬಳಿಕ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಝೈದ್ ಖಾನ್​ ದರ್ಶನ ಪಡೆದುಕೊಂಡರು. ನಂತರ ಬನಾರಸ್ ಯಾತ್ರೆ ಚೆನ್ನಪಟ್ಟಣಕ್ಕೆ ತೆರಳಿತು. ಅಲ್ಲಿ ಅದ್ಧೂರಿಯಾಗಿ ರೋಡ್ ಶೋ ನೆರವೇರಿಸಿತು. ಝೈದ್ ಅಲ್ಲಿಯೂ ದೇವಸ್ಥಾನ ಮತ್ತು ದರ್ಗಾಗಳಿಗೆ ಭೇಟಿ ನೀಡಿದರು. ಅಲ್ಲೇ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸ ಕಚೇರಿಯೊಂದರ ಆರಂಭ ಸಮಾರಂಭದಲ್ಲಿಯೂ ಭಾಗಿಯಾಗಿದ್ದರು. ಚನ್ನಪಟ್ಟಣದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿಕೊಂಡು ಮತ್ತೆ ಬನಾರಸ್ ಯಾತ್ರೆಗೆ ಚಾಲನೆ ಸಿಕ್ಕಿತ್ತು.

ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ

ಮದ್ದೂರಿನಿಂದ ಹಾದುಹೋಗಿ ಮಂಡ್ಯಕ್ಕೆ ತೆರಳಿದ ಚಿತ್ರತಂಡ ಅಲ್ಲಿಯೂ ಝೈದ್ ಸಾರಥ್ಯದಲ್ಲಿ ರೋಡ್ ಶೋ ನಡೆಸಿತು. ಅಲ್ಲಿನ ದೇವಸ್ಥಾನ ದರ್ಗಾಗಳಿಗೂ ಭೇಟಿಯಿತ್ತ ಝೈದ್ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿಂದ ಸೀದಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ, ತಾಯಿಯ ಆಶೀರ್ವಾದ ಪಡೆದುಕೊಂಡ ಬಳಿಕ ಮೈಸೂರು ನಗರದಲ್ಲಿ ಅದ್ಧೂರಿಯಾಗಿ ರೋಡ್ ಶೋ ಮಾಡಲಾಗಿದೆ. ಒಂದು ಸುತ್ತಿನ ಬೆಂಗಳೂರು - ಮೈಸೂರು ಯಾತ್ರೆ ಮುಗಿಸಿಕೊಂಡಿರುವ ಝೈದ್ ತಮ್ಮ ತಂಡ, ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ. ಝೈದ್ ಖಾನ್​ಗೆ ನಟಿ ಸೋನಾಲ್ ಮಾಂಟೋರ್ ಕೂಡ ಈ ಯಾತ್ರೆಯಲ್ಲಿ ಭಾಗವಾಗಿದ್ದರು.

ಝೈದ್ ಖಾನ್ ನೇತೃತ್ವದಲ್ಲಿ ಬೃಹತ್ ಬನಾರಸ್ ಯಾತ್ರೆ

ಇದನ್ನೂ ಓದಿ:ಅಮೀರ್ ಖಾನ್ ತಾಯಿ ಜೀನತ್ ಹುಸೇನ್​​​​ಗೆ ಹೃದಯಾಘಾತ..ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ABOUT THE AUTHOR

...view details