ಕರ್ನಾಟಕ

karnataka

ETV Bharat / entertainment

ವಾರಾಣಸಿಯಲ್ಲಿ ಗಂಗಾರತಿ ಮಾಡಿದ 'ಬನಾರಸ್' ಚಿತ್ರದ ನಟ ಝೈದ್ ಖಾನ್ - ಗಂಗಾರತಿ

ಬೇರೆ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಝೈದ್ ಖಾನ್ ಹಾಗೂ ಸೋನಲ್ ಜೊತೆಗೂಡಿ ವಾರಾಣಸಿಗೆ ತೆರಳಿದ್ದಾರೆ. ಸ್ವತಃ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆಗೆ ನಮಿಸಿದ್ದಾರೆ.

Banaras Movie team In Varanasi
ವಾರಾಣಸಿಯಲ್ಲಿ ಗಂಗಾರತಿ ಮಾಡಿದ 'ಬನಾರಸ್' ಚಿತ್ರದ ನಟ ಝೈದ್ ಖಾನ್

By

Published : Oct 17, 2022, 10:50 AM IST

'ಬನಾರಸ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಿನಿಮಾ. ಸದ್ಯ ಹಾಡು ಮತ್ತು ಟ್ರೈಲರ್​ನಿಂದಲೇ ಸೌಂಡ್ ಮಾಡುತ್ತಿರುವ ಈ ಚಿತ್ರ ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಚಿತ್ರ. ಆ ಕಥೆಗೂ ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಗೂ ಅವಿನಾಭಾವ ನಂಟಿದೆ.

ಬಹುಶಃ ಬರಿಗಣ್ಣಿಗೆ ಕಾಣದ, ಮನಸಿಗಷ್ಟೇ ತಾಕುವ ಆ ಸೆಳೆತದಿಂದಲೋ ಏನೋ ನಾಯಕ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೆರೊ ಅವರನ್ನು ಮತ್ತೆ ಮಾಯಗಂಗೆ ತನ್ನತ್ತ ಸೆಳೆದುಕೊಂಡಿದ್ದಾಳೆ. ಇದೀಗ ಬೇರೆ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಝೈದ್ ಖಾನ್, ಸೋನಲ್ ಜೊತೆಗೂಡಿ ವಾರಾಣಸಿಗೆ ತೆರಳಿದ್ದಾರೆ. ಸ್ವತಃ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆಗೆ ನಮಿಸಿದ್ದಾರೆ.

ವಾರಾಣಸಿಯಲ್ಲಿ ಗಂಗಾರತಿ ಮಾಡಿದ 'ಬನಾರಸ್' ಚಿತ್ರದ ನಟ ಝೈದ್ ಖಾನ್

ಇದನ್ನೂ ಓದಿ:ಮುಂಬೈನಲ್ಲಿ ಬನಾರಸ್ ಜೋಡಿ: ಭರ್ಜರಿ ಪ್ರಚಾರದಲ್ಲಿ ಚಿತ್ರ ತಂಡ

ಕೆಲ ದಿನಗಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿಲ್ಲದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಈ ಹಾದಿಯಲ್ಲಿ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆಲ್ಲ ಝೈದ್ ಜಾತಿ ಮತಗಳ ಹಂಗಿಲ್ಲದೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿದ್ದಾರೆ.

ವಾರಣಾಸಿಯಲ್ಲಿ ಬನಾರಸ್ ಚಿತ್ರತಂಡ

ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ವಾರಾಣಸಿ ಅಂಗಳ ತಲುಪಿದೆ. ಇಲ್ಲಿಯೇ ಒಂದಷ್ಟು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಝೈದ್ ಖಾನ್ ಮತ್ತು ಸೋನಲ್ ಗಂಗಾರತಿಯಲ್ಲಿ ಪಾಲ್ಗೊಂಡರು. ವಿಧಿವಿಧಾನಗಳಿಗೆ ತಕ್ಕುದಾಗಿ ಅದರಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಬಳಿಕ ವಾರಾಣಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿಯೂ ಬನಾರಸ್ ಜೋಡಿ ಭಾಗಿಯಾಗಿದೆ. ಆ ಕಾರ್ಯಕ್ರಮವನ್ನು ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿದ್ದಾರೆ. ಬಳಿಕ ಬಲು ಪ್ರೀತಿಯಿಂದ ಸಂಜಯ್ ಮಿಶ್ರಾ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ.

ಸೋನಲ್ ಹಾಗೂ ಝೈದ್ ಖಾನ್

ಇದನ್ನೂ ಓದಿ:ಎಲ್ಲಾ ಟ್ರೋಲು ಸಿಕ್ಕಾಪಟ್ಟೆ ಕೊಲೆಸ್ಟ್ರಾಲು.. ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ ಸಾಂಗ್​ ರಿಲೀಸ್

ಇದು ನಿಜಕ್ಕೂ ನಾಯಕ ನಟ ಝೈದ್ ಖಾನ್ ಪಾಲಿಗೆ ಸ್ಮರಣೀಯ ಅನುಭವ. ಏಕೆಂದರೆ, ಪ್ರಚಾರದ ಹಾದಿಯಲ್ಲಿ ಎಲ್ಲ ಒಳಿತುಗಳೂ ತಾನೇ ತಾನಾಗಿ ಅವರನ್ನು ಅರಸಿಕೊಂಡು ಬರುತ್ತಿವೆ. ಟೀಕೆ ಟಿಪ್ಪಣಿಗಳಿಗೂ ತಲೆ ಕೆಡಿಸಿಕೊಳ್ಳದೆ, ನಾನಿರೋದೇ ಹೀಗೆ ಎಂಬ ಮನಃಸ್ಥಿತಿಯಿಂದ ಮುಂದುವರೆಯುತ್ತಿರುವ ಝೈದ್ ಎಲ್ಲರಿಗೂ ಹಿಡಿಸಿದ್ದಾರೆ.

ಇದನ್ನೂ ಓದಿ:ಶಾಸಕ ಜಮೀರ್ ಸುಪುತ್ರ ಝೈದ್ ಖಾನ್​ರ ಬನಾರಸ್ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

ABOUT THE AUTHOR

...view details