ಕರ್ನಾಟಕ

karnataka

ETV Bharat / entertainment

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿಕಾ ವಧು ಖ್ಯಾತಿಯ ನಟಿ ನೇಹಾ ಮರ್ದಾ - ಈಟಿವಿ ಭಾರತ ಕನ್ನಡ

'ಬಾಲಿಕಾ ವಧು' ಖ್ಯಾತಿಯ ನೇಹಾ ಮರ್ದಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Neha Marda
ನೇಹಾ ಮರ್ದಾ

By

Published : Apr 8, 2023, 2:27 PM IST

ಹಿಂದಿ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಗೆಹ್ನಾ ಪಾತ್ರಧಾರಿ ನೇಹಾ ಮರ್ದಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನೇಹಾ ಮತ್ತು ಅವರ ಪತಿ ಆಯುಷ್ಮಾನ್​ ಅಗರ್ವಾಲ್ ಜೋಡಿ ಏಪ್ರಿಲ್​ 7 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಈ ಶುಭ ಸುದ್ದಿಯನ್ನು ಅವರ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಹೆಣ್ಣು ಮಗು ಆಶೀರ್ವಾದಿಸಲ್ಪಟ್ಟಿದೆ. ಅಭಿನಂದನೆಗಳು ನೇಹಾ ಮರ್ದಾ ಮತ್ತು ಆಯುಷ್ಮಾನ್​ ಅಗರ್ವಾಲ್​' ಎಂದು ಬರೆದುಕೊಂಡಿದ್ದಾರೆ. ಪುಟ್ಟ ಮಗುವನ್ನು ತನ್ನ ತೋಳಲ್ಲಿ ಹಿಡಿದಿರುವ ನೇಹಾ ಅವರ ಫೋಟೋವನ್ನು ಕೂಡ ಫ್ಯಾನ್ಸ್​ ಶೇರ್​ ಮಾಡಿಕೊಂಡಿದ್ದಾರೆ. ಮಗುವನ್ನು ಸ್ವಾಗತಿಸುವ ಕೆಲವು ಗಂಟೆಗಳ ಮೊದಲು ನೇಹಾ ಅವರು ಆಸ್ಪತ್ರೆಯಿಂದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು ಮತ್ತು ಅವರ ಗರ್ಭಧಾರಣೆಯ ತೊಡಕುಗಳನ್ನು ಹೇಳಿಕೊಂಡಿದ್ದರು.

ಕೊನೆಯ ಮೂರು ತಿಂಗಳ ಮುಂಚೆ ನೇಹಾ ಗರ್ಭಾವಸ್ಥೆಯಲ್ಲಿ ಕೆಲವು ತೊಡಕುಗಳು ಸಂಭವಿಸಿದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. "ಗರ್ಭಾವಸ್ಥೆ ಪ್ರಯಾಣದ ಕೊನೆಯ ಹಂತದಲ್ಲಿ ಶೀಘ್ರವಾಗಿ ಚೇತರಿಸಿಕೊಳ್ಳಲು ಕಾಯುತ್ತಿದ್ದೇನೆ. ಆ ಒಂದು ಶಕ್ತಿಯ ಮೇಲೆ ಪೂರ್ಣವಾಗಿ ನಂಬಿಕೆ ಇರಿಸಿದ್ದೇನೆ. ಶ್ರೀ ಶಿವೈ ನಮಸ್ತ್ಯುವ್ಯಂ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ಸ್ಟೈಲಿಶ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಟೀಸರ್​ ಜೊತೆ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​.. ಹೊಸ ಅವತಾರದಲ್ಲಿ ಅಲ್ಲು ಅರ್ಜುನ್​

2022ರ ನವೆಂಬರ್​ ತಿಂಗಳಿನಲ್ಲಿ ನೇಹಾ ತನ್ನ ಗರ್ಭಧಾರಣೆಯನ್ನು ಪ್ರಕಟಿಸಿದ ಪೋಸ್ಟ್​ನೊಂದಿಗೆ, "ನಮಗಿದು ತುಂಬಾ ಬ್ಯೂಟಿಫುಲ್​. ಈ ಕ್ಷಣವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ನಿನಗಾಗಿ ನಾವೆಂದೂ ಹತಾಶರಾಗಿರಲಿಲ್ಲ. ಆದರೆ, ಇಂದು ನಮಗೆ ನಿನ್ನ ಅಗತ್ಯವಿದೆ ಎಂದು ಭಾವಿಸುತ್ತೇನೆ. ನೀವು ಅವಶ್ಯಕತೆ ಮತ್ತು ಆದ್ಯತೆ. ನೀವು ಜೀವನ ಮತ್ತು ಪ್ರೀತಿ. ನಮ್ಮನ್ನು ಪೂರ್ಣಗೊಳಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಕೆಂಪು ಹೃದಯದ ಎಮೋಜಿನೊಂದಿಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು.

ಬಳಿಕ ಪ್ರೆಗ್ನೆನ್ಸಿ ಸಂಬಂಧಿತ ಅನೇಕ ರೀಲ್ಸ್​ಗಳನ್ನು ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಪತಿ ಜೊತೆ ಬೇಬಿ ಬಂಪ್​ ಫೋಟೋಶೂಟ್ ಕೂಡ​ ಮಾಡಿಸಿದ್ದರು. ಈ ಚಿತ್ರಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ನೇಹಾ ಶೇರ್​ ಮಾಡಿಕೊಂಡಿದ್ದರು. 11 ವರ್ಷದ ನಂತರ ಮಗು ಪಡೆಯುವುದಕ್ಕಾಗಿ ದಂಪತಿ ಫುಲ್​ ಖುಷಿಯಾಗಿದ್ದರು.

ಇದನ್ನೂ ಓದಿ:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಖುಷ್ಬೂ; ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ನಟಿ

ಆಯುಷ್ಮಾನ್​ ಅಗರ್ವಾಲ್​ ಜೊತೆ ವಿವಾಹ: ನೇಹಾ ಮರ್ದಾ ಅವರು 2012 ರಲ್ಲಿ ಪಾಟ್ನಾ ಮೂಲದ ಉದ್ಯಮಿ ಆಯುಷ್ಮಾನ್​ ಅಗರ್ವಾಲ್​ ಅವರನ್ನು ವಿವಾಹವಾದರು. ಇವರು ಬಾಲಿಕಾ ವಧು, ಮಹಾದೇವ್​, ಡೋಲಿ ಅರ್ಮಾನೋನ್​ ಕಿ, ಏಕ್​ ಥಿ ರಾಜ್​ ಕುಮಾರಿ ಮತ್ತು ಲಾಲ್​ ಇಷ್ಕ್​ನಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇವರು ಕೊನೆಯದಾಗಿ ಕ್ಯೂನ್​ ರಿಷ್ಟನ್​ ಮೈನ್​ ಕಟ್ಟಿ ಬಟ್ಟಿಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಬುಲೆಟ್​ ಪ್ರೂಫ್​​ SUV ಕಾರು ಖರೀದಿಸಿದ ಸಲ್ಮಾನ್​ ಖಾನ್​!

ABOUT THE AUTHOR

...view details