'ಭಜರಂಗಿ 2' ಸಿನಿಮಾ ಕುರಿತು ನಾಗವಾರದ ತಮ್ಮ ನಿವಾಸದಲ್ಲಿ ನಟ ಶಿವರಾಜ್ ಕುಮಾರ್ ಅನುಭವ ಹಂಚಿಕೊಂಡರು. ಚಿತ್ರದ ಹಾಡುಗಳು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಭಾವನೆಗಳ ಸುತ್ತ ನಡೆಯುವ ಕಥೆ ಇದು. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸದ್ಯ ವೈರಲ್ ಆಗಿರುವ ಹುಲಿ ವೇಷದ ಮುಖ ಹಾಗು ಡಿಫ್ರೆಂಟ್ ಹೇರ್ ಸ್ಟೈಲ್ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ ಎಂದರು.
ಟಗರು ಬಳಿಕ ನಾನು ಮತ್ತು ಧನಂಜಯ್ ಕಾಂಬಿನೇಶನ್ನ ಸಿನಿಮಾ ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿಯೇ ಇಷ್ಟ ಆಗುತ್ತೆ. ನಾಯಕಿ ಪಾತ್ರ ಮಾಡಿರೋ ಅಂಜಲಿ, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪಾತ್ರಗಳಲ್ಲಿ ಅವ್ರದ್ದೇ ಆದ ಒಂದು ಭಾವನೆಗಳ ಕಥೆ ಇದೆ. ಚಿತ್ರದ ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...ಎಂಬ ಹಾಡಿಗೆ ಎರಡು ದಿನ ಪ್ರಾಕ್ಟೀಸ್ ಮಾಡಿ ಸಿಂಗಲ್ ಶಾಟ್ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ಹುಲಿ ವೇಶಕ್ಕೆ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೆ ಕಾರಣ ಡೈರೆಕ್ಟರ್ ಎಂದು ಹೊಗಳಿದರು.