ಕರ್ನಾಟಕ

karnataka

ETV Bharat / entertainment

'ಬ್ಯಾಕ್ ಟು ಲೈಫ್ ಬ್ಯಾಕ್ ಟು ರಿಯಾಲಿಟಿ' : ಈಜುಕೊಳದಲ್ಲಿ ನಿಂತು ಕಟ್ಟುಮಸ್ತಾದ ದೇಹ ಪ್ರದರ್ಶಿಸಿದ ಸಲ್ಲು - ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ

ನಟ ಸಲ್ಮಾನ್ ಖಾನ್ ಅವರು ಈಜುಕೊಳದಲ್ಲಿ ನಿಂತು ಶರ್ಟ್‌ಲೆಸ್ ಪೋಸ್​ ನೀಡುತ್ತಿರುವ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​

By

Published : May 3, 2023, 6:19 PM IST

ಹೈದರಾಬಾದ್ : ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಫಿಟ್‌ನೆಸ್‌ಗಾಗಿ ಜಿಮ್​ನಲ್ಲಿ ದಿನನಿತ್ಯವೂ ಶ್ರಮಿಸುತ್ತಿರುತ್ತಾರೆ. ಆಗಿಂದಾಗ್ಗೆ ಜಿಮ್​ನಲ್ಲಿನ ತಮ್ಮ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸುದ್ದಿಯಾಗುತ್ತಿರುತ್ತಾರೆ. ಬುಧವಾರ, ಸಲ್ಮಾನ್ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ತನ್ನ ಬಲಿಷ್ಠವಾದ ದೇಹವನ್ನು ಪ್ರದರ್ಶಿಸುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿರುವ ಸಲ್ಮಾನ್, 'ಬ್ಯಾಕ್ ಟು ಲೈಫ್ ಬ್ಯಾಕ್ ಟು ರಿಯಾಲಿಟಿ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಖಾನ್​ ಕ್ಯಾಮೆರಾಗೆ ಬೆನ್ನು ತಿರುಗಿಸುವಾಗ ತನ್ನ ಪ್ರಭಾವಶಾಲಿ ದೇಹವನ್ನು ತೋರಿಸುವುದನ್ನು ಕಾಣಬಹುದು. ಅವರು ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ, ಅವರ ಅಭಿಮಾನಿಗಳು ಕಾಮೆಂಟ್ ವಿಭಾಗಕ್ಕೆ ಬಂದು ಸೂಪರ್‌ಸ್ಟಾರ್ ಅನ್ನು ಹಾಡಿ ಹೊಗಳಿದ್ದಾರೆ.

ಅಭಿಮಾನಿಯೊಬ್ಬರು 'ನಿಮ್ಮ ಮೆಚ್ಚಿನ ಮುಖಕ್ಕಿಂತ ಅವರ ಹಿಂಭಾಗದ ಭಂಗಿಯು ಹೆಚ್ಚು ಪ್ರಸಿದ್ಧವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಹಾಲಿವುಡ್‌ನಲ್ಲಿ ಅರ್ನಾಲ್ಡ್, ಡ್ವೇನ್, ಸ್ಟಾಲೋನ್ ಇದ್ದಾರೆ.. ನಮ್ಮಲ್ಲಿ @ಸಲ್ಮಾನ್​ ಖಾನ್​ ಬೆಂಕಿಯ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ಇತರ ಅಭಿಮಾನಿಗಳು ಅವರ ಪೋಸ್ಟ್‌ನಲ್ಲಿ ಹೃದಯ, ಕಣ್ಣುಗಳು, ಬೆಂಕಿ ಮತ್ತು ರೆಡ್​​ ಹಾರ್ಟ್​ನ ಎಮೋಜಿಗಳನ್ನು ಬಿಟ್ಟಿದ್ದಾರೆ.

ಕಿಸಿ ಕಾ ಭಾಯ್ ಕಿಸಿ ಕಿ ಜಾನ್​ ಸಿನಿಮಾದಲ್ಲಿ ಸಲ್ಮಾನ್​: ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ಪಠಾಣ್​ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, ಸಲ್ಮಾನ್ ಖಾನ್​ ಅವರ ಬಹು ನಿರೀಕ್ಷಿತ ಆ್ಯಕ್ಷನ್ ಚಲನಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್​ನಲ್ಲಿ ಕಾಣಿಸಿಕೊಂಡರು. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ ಈ ಚಲನಚಿತ್ರವು ಏಪ್ರಿಲ್ 21 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ ಜಗಪತಿ ಬಾಬು, ಜಸ್ಸಿ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಶೆಹನಾಜ್ ಗಿಲ್, ವಿಜೇಂದರ್ ಸಿಂಗ್ ಮತ್ತು ಪಾಲಕ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸಲ್ಮಾನ್ ಮುಂದೆ ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ನಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಚಿತ್ರವು ದೀಪಾವಳಿಯ ಆಸುಪಾಸಿನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಹಾಲಿವುಡ್​ ಸಿನಿಮಾ ಪರ ಬಾಲಿವುಡ್​​ ಸಲ್ಮಾನ್​ ಖಾನ್​ ಪ್ರಚಾರ:ಕೆಲ ತಿಂಗಳ ಹಿಂದೆ ನಷ್ಟದ ಹೊಡೆತಕ್ಕೆ ಸಿಲುಕಿದ್ದ ಬಾಲಿವುಡ್​ ಮತ್ತೆ ಎದ್ದು ನಿಂತಿದೆ. ಒಳ್ಳೊಳ್ಳೆ ಚಿತ್ರಗಳು ನಿರ್ಮಾಣ ಆಗುತ್ತಿವೆ. ಹಿಂದಿ ಚಿತ್ರರಂಗದ ದಿಗ್ಗಜರಾದ ಶಾರುಖ್​ ಖಾನ್​​ ಮತ್ತು ಸಲ್ಮಾನ್​ ಖಾನ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಲ್ಮಾನ್​ ಖಾನ್​​ ಸಿನಿಮಾ ಹೇಳುವಷ್ಟರ ಮಟ್ಟಿಗೆ ದೊಡ್ಡ ಹಿಟ್ ಆಗದಿದ್ದರೂ, ಬಾಕ್ಸ್​ ಆಫೀಸ್​ನಲ್ಲಿ ಸೋತಿಲ್ಲ. ಈ ಸಮಯದಲ್ಲಿ ಸಲ್ಲು 'ಗಾರ್ಡಿಯನ್ಸ್​​ ಆಫ್​​ ಗ್ಯಾಲಾಕ್ಸಿ 3' ಎಂಬ ಹಾಲಿವುಡ್​ ಸಿನಿಮಾ ಪರ ಪ್ರಚಾರ ಶುರು ಮಾಡಿದ್ದಾರೆ.

ಇದನ್ನೂ ಓದಿ:I am Salman: ಹಾಲಿವುಡ್​ ಸಿನಿಮಾ ಪರ ಬಾಲಿವುಡ್​​ ಸಲ್ಲು ಪ್ರಚಾರ

ABOUT THE AUTHOR

...view details