ತ್ರಿಕೋನ ಪ್ರೇಮಕಥೆಯಾದ 'ಬೇಬಿ' ತೆಲುಗು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನೇ ಗಳಿಸಿತು. ಸಾಯಿ ರಾಜೇಶ್ ನಿರ್ದೇಶನದ ಈ ಚಿತ್ರ ಯುವಜನತೆಯನ್ನು ಅಪಾರವಾಗಿ ಆಕರ್ಷಿಸಿತು. ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದರು. ಜುಲೈ 14 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ 80 ಕೋಟಿ ರೂ. ಗಳಿಸಿತ್ತು.
ಓಟಿಟಿಯಲ್ಲಿ ಯಾವಾಗ?: ಈ ಸಿನಿಮಾ ಓಟಿಟಿಗೆ ಬರಲು ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದರು. ಅವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. 'ಬೇಬಿ' ಸಿನಿಮಾವು ಆಗಸ್ಟ್ 25 ರಿಂದ ಜನಪ್ರಿಯ ತೆಲುಗು OTT ಪ್ಲಾಟ್ಪಾರ್ಮ್ 'ಆಹಾ'ದಲ್ಲಿ ಸ್ಟ್ರೀಮಿಂಗ್ ಆಗಲಿದೆ. ನೀವು 'ಆಹಾ'ದ ಚಂದಾದಾರರಾಗಿದ್ದಲ್ಲಿ 12 ಗಂಟೆ ಮೊದಲೇ ಸಿನಿಮಾವನ್ನು ವೀಕ್ಷಿಸಬಹುದು. ಅಂದರೆ ಆಗಸ್ಟ್ 24 ರಂದು ಸಂಜೆ 6 ಗಂಟೆಯಿಂದ ಸಬ್ಸ್ಕ್ರೈಬರ್ಸ್ಗೆ ಸಿನಿಮಾ ಸಿಗಲಿದೆ.
4 ಗಂಟೆ ಸಿನಿಮಾ: ಇತ್ತೀಚೆಗಷ್ಟೇ ಈ ಸಿನಿಮಾದ ಅಪ್ಡೇಟ್ ಮಾಹಿತಿಯೊಂದು ಹೊರಬಿದ್ದಿದೆ. ಸುಮಾರು 3 ಗಂಟೆ ಅವಧಿಯ ಈ ಚಿತ್ರವು OTT ಪ್ಲಾಟ್ಪಾರ್ಮ್ನಲ್ಲಿ ಬಿಡುಗಡೆಯಾಗುವಾಗ 4 ಗಂಟೆ ಕಾಲ ಇರಲಿದೆಯಂತೆ. ಈ ಚಿತ್ರಕ್ಕೆ ಇನ್ನೊಂದು ಹಾಡನ್ನು ಸೇರಿಸುವುದರೊಂದಿಗೆ, ಕೆಲವು ದೃಶ್ಯಗಳನ್ನು ಕೂಡ ಸೇರಿಸಲಾಗುತ್ತದೆ ಎಂದು ವರದಿಯಾಗಿದೆ. ಇನ್ನು ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ನಡುವೆ ಹೆಚ್ಚಿನ ದೃಶ್ಯಗಳು ಇರಲಿದೆಯಂತೆ. ಜೊತೆಗೆ ನಾಯಕ ಆನಂದ್ ದೇವರಕೊಂಡ ಅವರಿಗೆ ಸಂಬಂಧಿಸಿದ ಕೆಲವು ಭಾವನಾತ್ಮಕ ದೃಶ್ಯಗಳು ಇರಲಿದೆಯಂತೆ. ಇದೆಲ್ಲಾ ನಿಜವೆಂದಾದರೆ ಸಿನಿಮಾವು ಓಟಿಟಿಯಲ್ಲಿ 4 ಗಂಟೆಗಳ ಕಾಲ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ.