ಕರ್ನಾಟಕ

karnataka

ETV Bharat / entertainment

ಭಾರತೀಯರು ಸಿನಿಮಾ ಮೂಲಕ ಜಗತ್ತಿನ ಮುಂದೆ ತಮ್ಮ ಕಥೆ ಹೇಳುವ ತವಕದಲ್ಲಿದ್ದಾರೆ: ರಿಸ್ಕ್ ತೆಗೆದುಕೊಳ್ಳಿ ಎಂದ ರಾಜಮೌಳಿ - Mel Gibson

ತೆಲುಗು ಚಿತ್ರೋದ್ಯಮವು ಆಂಧ್ರಪ್ರದೇಶ, ತೆಲಂಗಾಣ ಅಷ್ಟೇ ಅಲ್ಲದೇ ಭಾರತವನ್ನು ಮೀರಿ ಬೆಳೆದಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ತನ್ನ ವಿಸ್ತಾರವನ್ನು ಚಾಚುತ್ತಿದೆ ಎಂದು ನಿರ್ದೇಶಕ ಎಸ್ಎಸ್ ರಾಜಮೌಳಿ ಹೇಳಿದರು.

'Baahubali' director S.S. Rajamouli says Mel Gibson is his major influence
ಬಾಹುಬಲಿ ಚಿತ್ರೀಕರಣದ ಸಂದರ್ಭ

By

Published : Sep 15, 2022, 8:03 PM IST

ಕೆನಡಾ:ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಾದ ಬಾಹುಬಲಿ ಮತ್ತು ಆರ್‌ಆರ್‌ಆರ್‌ ಎಂಬ ಚಿತ್ರಗಳನ್ನು ನೀಡಿದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. ಕೆನಡಾದಲ್ಲಿ ನಡೆಯುತ್ತಿರುವ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (TIFF) ಸಂವಾದದ ಸಂದರ್ಭದಲ್ಲಿ ಮಾತನಾಡಿದ ರಾಜಮೌಳಿ, ತಮ್ಮ ಮುಂಬರುವ ಸಿನಿಮಾವು Globetrotting Action Adventure ಕಥೆಯನ್ನು ಒಳಗೊಂಡಿದ್ದು, ಭರ್ಜರಿ ಸಾಹಸಮಯ ಜರ್ನಿಯಾಗಿ ಇರುತ್ತದೆ ಎಂದು ಬಹಿರಂಗಪಡಿಸಿದರು. ಇದರ ಹೊರತಾಗಿ ಹೆಚ್ಚು ಗುಟ್ಟು ಬಿಟ್ಟುಕೊಡದ ಅವರು, ಕಾದು ನೋಡಿ ಅಂದೆಷ್ಟೇ ಮಾತು ಮುಂದುವರೆಸಿದರು.

ಬಾಹುಬಲಿ ಚಿತ್ರೀಕರಣದ ಸಂದರ್ಭ

ಸೂಕ್ಷ್ಮಾತಿಸೂಕ್ಷ್ಮ ಸನ್ನಿವೇಶಗಳನ್ನು ಆಗರ್ಭ ಸಾಹಸಮಯ ದೃಶ್ಯಗನ್ನಾಗಿ ತೋರಿಸುವುದರಲ್ಲಿ ನಿಸ್ಸೀಮರು. ಅಲ್ಲದೇ ಸಿನಿ ರಸಿಕರ ಮನ ಸೆಳೆಯುವ ಭಾವನಾತ್ಮಕ ದೃಶ್ಯಗಳಿಗೆ ತುಂಬಾ ಹೆಸರು ವಾಸಿಯಾದವರು. ಇದರ ಜೊತೆಗೆ ಪರದೆ ಮೇಲೆ ತಂತ್ರಗಾರಿಗೆ ರೂಪಿಸುವುದರಲ್ಲಿ ಎಲ್ಲ ನಿರ್ದೇಶಕರಿಂದ ಭಿನ್ನರು. ಮುಂಬರುವ ಚಿತ್ರದಲ್ಲಿ ಇದೇ ಮಾರ್ಗವನ್ನು ಅನುಸರಿಸುವ ಆಸೆ ವ್ಯಕ್ತಪಡಿಸಿರುವ ಅವರು, ನನ್ನ ಮುಂದಿನ ಚಿತ್ರ ನಿಮ್ಮ ಮೇಲೆ ಪರಿಣಾಮ ಬೀರದೇ ಇರದು ಎಂದಿದ್ದಾರೆ.

ಬಾಹುಬಲಿ ಚಿತ್ರೀಕರಣದ ಸಂದರ್ಭ

ಹಾಲಿವುಡ್‌ನ ಅಪ್ರತಿಮ ಚಲನಚಿತ್ರ ನಿರ್ಮಾಪಕ ಮೆಲ್ ಗಿಬ್ಸನ್ ಅವರಿಂದ ಪ್ರಭಾವಿತನಾಗಿರುವ ನಾನು, ಚಿಕ್ಕದಾಗಿದ್ದ ನಮ್ಮ ಸಿನಿಮಾ ಗಡಿಯನ್ನು ಮೊದಲು ವಿಸ್ತರಿಸಲು ಪ್ರಯತ್ನ ಮಾಡಿದೆ. ಗಿಬ್ಸನ್ ಕೂಡ ತಮ್ಮ ಪರಿಮಿತಿ ಮೀರಿ ನುಗ್ಗಿ ಹಲವು ಚಿತ್ರಗಳವನ್ನು ತೋರಿಸಿದವರು. ಅದರಂತೆ ನಾನು ಸಹ ನುಗ್ಗಿದೆ. ದಾರಿ ಮಧ್ಯೆ ಸಾಕಷ್ಟು ಕಲಿತುಕೊಂಡೆ. ಬಳಿಕ ಅವರು ಅನುಸರಿಸಿದ ಮಾರ್ಗವನ್ನೇ ತುಳಿದೆ. ಬಾಹುಬಲಿ ಹೇಗೆ ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಯಿತು ಅನ್ನೋದಕ್ಕೆ ಇದೊಂದು ಕಾರಣ. ರಿಸ್ಕ್ ತೆಗೆದುಕೊಂಡು ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ ಎಂದು ರಾಜಮೌಳಿ ತಮ್ಮ ಸಿನಿಮಾ ಸಾಹಸವನ್ನು ಹೇಳಿದರು.

ಬಾಹುಬಲಿ ಚಿತ್ರೀಕರಣದ ಸಂದರ್ಭ

ನನ್ನ ಮುಂದಿನ ಚಿತ್ರ ನಿಮ್ಮ ಮೇಲೆ ಪರಿಣಾಮ ಬೀರದೇ ಇರದು ಎಂದಿರುವ ಅವರು, ಗ್ಲೋಬ್- ಟ್ರಾಟರ್ ಸಾಹಸ ಚಲನಚಿತ್ರ ಆಗಲಿದೆ. ತಮ್ಮ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತದೆ. ಕಾದು ನೋಡಿ ಅಂದೆಷ್ಟೇ ಹೇಳಿದರು. ನಮ್ಮ ದೃಶ್ಯ ತಂತ್ರವು ಕಥೆಗಳ ಭಾವನಾತ್ಮಕ ಪ್ರಭಾವವನ್ನು ಇನ್ನೂ ಪರಿಣಾಮಕಾರಿ ಆಗಿ ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದೇನೆ. ವಿಶೇಷವಾಗಿ ಕಥಾವಸ್ತುಗಳಲ್ಲಿನ ನಿರ್ಣಾಯಕ ಕ್ಷಣಗಳಲ್ಲಿ ಎಂದರು.

ಭಾರತಕ್ಕೆ ಶ್ರೇಷ್ಠ ಇತಿಹಾಸವಿದೆ. ಅಲ್ಲದೇ ಭಾರತೀಯರು ಸಿನಿಮಾಗಳ ಮೂಲಕ ಕಥೆ ಹೇಳುವ ಒಲವು ಹೊಂದಿದ್ದಾರೆ. ನಮ್ಮ ಚಿತ್ರ ಮಾರುಕಟ್ಟೆಯೂ ಬೆಳೆಯುತ್ತಿದೆ. ನಮ್ಮ ದೊಡ್ಡ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾ ಭಾರತವನ್ನು ನೋಡುತ್ತಾ ಬೆಳೆದವ. ವಾಸ್ತವವಾಗಿ ತೆಲುಗು ಚಲನಚಿತ್ರೋದ್ಯಮವು ರಾಮಾಯಣ ಮತ್ತು ಮಹಾಭಾರತದ ಮೇಲೆಯೇ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಾ ಬಂದಿದೆ. ಬಾಲ್ಯದಿಂದಲೂ ನಾನು ಅದನ್ನು ಇಷ್ಟಪಟ್ಟವನು. ಕಾರಣ ಅವುಗಳು ಎಲ್ಲವನ್ನು ಒಳಗೊಂಡಿವೆ ಎಂದು ಹೇಳುವ ಮೂಲಕ ತಾವು ಒಂದು ಇಂತಹ ಸಿನಿಮಾ ಮಾಡುವ ತಮ್ಮ ಸಿನಿ ಪಯಣದ ಮಹಾ ಆಸೆ ಹೊರ ಹಾಕಿದರು.

ಬಾಹುಬಲಿ ಚಿತ್ರೀಕರಣದ ಸಂದರ್ಭ

ಸತತ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿರುವ ರಾಜಮೌಳಿ ಇಂದು ದೇಶದ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು ಹೊರತರುವ ಸಿನಿಮಾಗಳು​ ಮತ್ತು ಹೆಣೆಯುವ ದೃಶ್ಯ ನಿರೂಪಣೆಗಳು ಅತ್ಯದ್ಭುತ. ಹಾಗಾಗಿಯೇ ಅವರನ್ನು ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್ ಎಂದು ಪ್ರಶಂಸಿಸಲಾಗುತ್ತದೆ.

* ಮೆಲ್ ಕೊಲಂಸಿಲ್ಲೆ ಗೆರಾರ್ಡ್ ಗಿಬ್ಸನ್ ಓರ್ವ ಅಮೆರಿಕನ್ ನಟರು. ಅಲ್ಲದೇ ಚಿತ್ರ ನಿರ್ದೇಶಕ ಮತ್ತು ಪ್ರಸಿದ್ಧ ನಿರ್ಮಾಪಕರು ಹೌದು. ಅವರು ತಮ್ಮ ಆ್ಯಕ್ಷನ್ ಹೀರೋ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾದವರು. ಅವರನ್ನು ಸಂವಾದದ ಸಂದರ್ಭದಲ್ಲಿ ರಾಜಮೌಳಿ ನೆನಪಿಸಿಕೊಂಡು ಮಾತನಾಡಿದರು.

ಇದನ್ನೂ ಓದಿ:ಸದ್ಯದಲ್ಲೇ ಏನೋ ವಿಶೇಷ ಬರಲಿದೆ: ಬಾಲಿವುಡ್​​​ನ ಬಾರ್ಬಿ ಡಾಲ್​ ಕತ್ರಿನಾ ಕೈಫ್


ABOUT THE AUTHOR

...view details