ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಸದ್ಯದಲ್ಲೇ ವಿಶೇಷ ಕಾರಣಕ್ಕಾಗಿ ಚಂಡೀಗಢಕ್ಕೆ ಭೇಟಿ ನೀಡಲಿದ್ದಾರೆ. ಹುಟ್ಟಿ ಬೆಳೆದ ಊರಿಗೆ ಆಯುಷ್ಮಾನ್ ತೆರಳಲಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಅಲ್ಮಾ ಮೇಟರ್ ಪಂಜಾಬ್ ವಿಶ್ವವಿದ್ಯಾಲಯವು ಸನ್ಮಾನಿಸಿ ಗೌರವಿಸಲಿದೆ. ಇದು ನಟನಿಗೆ ಅತ್ಯಂತ ವಿಶೇಷ ಕ್ಷಣವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯುಷ್ಮಾನ್, "ಟೈಮ್ ಮ್ಯಾಗಜೀನ್, ಫೋರ್ಬ್ಸ್ ಮತ್ತು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ನನಗೆ ಸಿಕ್ಕಿವೆ. ಈವೆರೆಗೂ ಇಂತಹದ್ದೆಷ್ಟೋ ಮಾನ್ಯತೆ ನನಗೆ ಸಿಕ್ಕಿದೆ. ಆದರೆ ಅಲ್ಮಾ ಮೇಟರ್ ನನ್ನ ಸಾಧನೆಗಳನ್ನು ಗುರುತಿಸಿರುವುದು ಅತ್ಯಂತ ವಿಶೇಷವಾಗಿದೆ. ನಿಜಕ್ಕೂ ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಮುಂದುವರೆದು, "ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಅದೆಷ್ಟೋ ಸಾಧನೆ ಮಾಡಿದವರ ಬಗ್ಗೆ ಆಶ್ಚರ್ಯಪಡುತ್ತಿದೆ. ಆ ಸಂಸ್ಥೆಯಲ್ಲಿ ಅನೇಕರು ರಾಷ್ಟ್ರದ ಐಕಾನ್ಗಳಾಗಿದ್ದಾರೆ. ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ತಂದ ಅನೇಕರು ಇದ್ದಾರೆ. ಅವರನ್ನೆಲ್ಲಾ ನೋಡುವಾಗ ನನಗೆ ಆಶ್ಚರ್ಯವಾಗುತ್ತಿತ್ತು. ಅಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದಿ. ಅದ್ಭುತ ಶಿಕ್ಷಕರಿಂದ ಮಾರ್ಗದರ್ಶನ ಪಡೆದಿರುವುದು ನಿಜಕ್ಕೂ ದೊಡ್ಡ ಗೌರವ" ಎಂದು ತಮ್ಮ ಕಾಲೇಜಿನ ಬಗ್ಗೆ ಗುಣಗಾನ ಮಾಡಿದ್ದಾರೆ.
"ಇಂದು ನಾನು ಯಾರೆಂಬುದುನ್ನು ತಿಳಿಸಲು ಅಡಿಪಾಯ ಹಾಕಿದ ಸಂಸ್ಥೆ ಅದು. ನನ್ನ ಸ್ವಂತ ನಿಯಮದ ಮೇಲೆ ಜಗತ್ತನ್ನು ರೂಪಿಸಲು ಅಲ್ಲಿಂದ ಕಲಿತುಕೊಂಡೆ. ನನಗೆ ಮಾರ್ಗದರ್ಶನ, ಆಕಾರ, ಅಧಿಕಾರ ಎಲ್ಲವನ್ನೂ ನೀಡಿ ಬೆನ್ನೆಲುಬಾಗಿ ನಿಂತಿದೆ. ನಾನು ನನ್ನ ಹಿರಿಯರ ಸಾಧನೆಯನ್ನು ಅನುಕರಿಸಲು ಪ್ರಯತ್ನಿಸುತ್ತೇನೆ ಮತ್ತು ನನ್ನ ತಾಯಿಯನ್ನು ಒಂದು ದಿನ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ಅಂದೇ ರಹಸ್ಯವಾಗಿ ನಿರ್ಧರಿಸಿದ್ದೆ" ಎಂದು ನಟ ನುಡಿದಿದ್ದಾರೆ.