ಕರ್ನಾಟಕ

karnataka

ETV Bharat / entertainment

'ಪಠಾಣ್​ ಬಿಡಿ, ಆ್ಯಕ್ಷನ್​ ಹೀರೋ ಸಿನಿಮಾ ನೋಡಿ' ಎಂದ ಅಭಿಮಾನಿಗೆ ಆಯುಷ್ಮಾನ್ ಖುರಾನ ಹೀಗಂದ್ರು! - ಶಾರುಖ್ ಬಗ್ಗೆ ಆಯುಷ್ಮಾನ್ ಹೇಳಿಕೆ

ಪಠಾಣ್​ ಬಗ್ಗೆ ತಿರಸ್ಕಾರ ಮನೋಭಾವ ತೋರಿದ ತಮ್ಮ ಅಭಿಮಾನಿಗೆ ಆಯುಷ್ಮಾನ್ ಖುರಾನ ಪ್ರತಿಕ್ರಿಯೆ ನೀಡಿದ್ದಾರೆ.

actor Ayushmann Khurrana
ನಟ ಆಯುಷ್ಮಾನ್ ಖುರಾನ

By

Published : Feb 4, 2023, 1:16 PM IST

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಆ್ಯಕ್ಷನ್ ಥ್ರಿಲ್ಲರ್ ಪಠಾಣ್​ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಊಹೆಗೂ ಮೀರಿ ಅಬ್ಬರಿಸುತ್ತಿದೆ. ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿನಿಮಾ ಮತ್ತು ಶಾರುಖ್​​ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನೆಟ್ಟಿಗರೋರ್ವರು ಸಾಮಾಜಿಕ ಮಾಧ್ಯಮದಲ್ಲಿ ಪಠಾಣ್​ ಚಿತ್ರದ ಬಗ್ಗೆ ಟೀಕೆ ವ್ಯಕ್ತಪಡಿಸಿ, ಆಯುಷ್ಮಾನ್ ಖುರಾನ ಅವರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಠಾಣ್ ಅನ್ನು ಕೀಳಾಗಿ ಕಂಡಿರುವ ಮತ್ತು ತಮ್ಮ ಚಲನಚಿತ್ರವನ್ನು ಹೊಗಳಿರುವ ಅಭಿಮಾನಿಯ ಟ್ವೀಟ್ ಅನ್ನು ಆಯುಷ್ಮಾನ್ ಖುರಾನ ಗಮನಿಸಿದ್ದು, ಅದಕ್ಕೆ ಸೌಜನ್ಯದಿಂದಲೇ ಪ್ರತಿಕ್ರಿಯಿಸಿದ್ದಾರೆ.

ಮುಬಿನಾ ಕಪಾಸಿ ಎಂಬ ಹೆಸರಿನ ಟ್ವಿಟರ್ ಬಳಕೆದಾರರು, ಪಠಾಣ್​​ಗೆ ಮೆಚ್ಚುಗೆ ವ್ಯಕ್ತಪಡಿಸದೇ ನಟ ಆಯುಷ್ಮಾನ್ ಖುರಾನ ಅವರ ಸಿನಿಮಾಗಳನ್ನು ನೋಡಿ ಎಂದು ಬರೆದುಕೊಂಡಿದ್ದಾರೆ. 'screw pathaan, ಆ್ಯಕ್ಷನ್​ ಹೀರೋ ಸಿನಿಮಾ ನೋಡಿ' ಎಂದು ಹೇಳಿದ್ದಾರೆ. An Action Hero ಆಯುಷ್ಮಾನ್​ ನಟನೆಯ ಸಿನಿಮಾ. ಅಭಿಮಾನಿಯ ಈ ಟ್ವೀಟ್​ ಅನ್ನು ಆಯುಷ್ಮಾನ್ ಖುರಾನ ಗಮನಿಸಿದ್ದಾರೆ. ಅಭಿಮಾನಿಯ ಮೆಚ್ಚುಗೆಗೆ ನಮ್ರತೆಯಿಂದಲೇ ಉತ್ತರಿಸಿದ್ದಾರೆ. ಇದು ನಟನಿಗೆ ಅಭಿಮಾನಿಗಳ ಹೃದಯವನ್ನು ಗೆಲ್ಲಲು ಸಹಾಯ ಮಾಡಿತು. ಆ್ಯಕ್ಷನ್ ಹೀರೋನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ ಮೊದಲ ಸಾಲನ್ನು (ಪಠಾಣ್​ ಬಗೆಗಿನ ಟೀಕೆ) ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.

ತಮ್ಮ ಅಭಿಮಾನಿಯ ಪೋಸ್ಟ್‌ಗೆ ಆಯುಷ್ಮಾನ್ ಖುರಾನ ನಮ್ರತೆಯಿಂದ ಪ್ರತಿಕ್ರಿಯಿಸಿದ ಕೂಡಲೇ ಅಭಿಮಾನಿಗಳು ನಟನಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ನಿಮ್ಮ ನಮ್ರತೆಗಾಗಿ ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು, "ಏಕ್ ಹಿ ತೋ ದಿಲ್ ಹೈ ಕಿತ್ನಿ ಬಾರ್ ಜೀತೋಗೆ'' (ಒಂದೇ ಹೃದಯ ಇರೋದು, ಎಷ್ಟು ಬಾರಿ ಗೆಲ್ಲುತ್ತೀರಾ) ಆಯುಷ್ಮಾನ್ ಖುರಾನ ಅವರೇ ಎಂದು ಕಾಮೆಂಟ್ ಮಾಡಿದ್ದಾರೆ. "ಉತ್ತಮ ಆಯುಷ್ಮಾನ್ ಖುರಾನ, ನೀವು ಕೂಡ ನಮ್ಮಂತೆಯೇ ಶಾರುಖ್​ ಅವರನ್ನು ಪ್ರೀತಿಸುತ್ತೀರ'' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ನಟ ಆಯುಷ್ಮಾನ್ ಖುರಾನ ಅವರು ಶಾರುಖ್ ಖಾನ್ ಅವರ ಕಟ್ಟಾ ಅಭಿಮಾನಿ ಎಂದು ಈವರೆಗೆ ಹೇಳಿಕೊಂಡಿದ್ದಾರೆ, ಸಮರ್ಥಿಸಿಕೊಂಡಿದ್ದಾರೆ. ಆ್ಯಕ್ಷನ್ ಹೀರೋ ಚಿತ್ರದ ಬಿಡುಗಡೆಗೂ ಮುನ್ನವೇ ಆಯುಷ್ಮಾನ್ ಅವರು ಶಾರುಖ್​ ಅವರ ಮುಂಬೈ ನಿವಾಸ ಮನ್ನತ್‌ಗೆ ಭೇಟಿ ನೀಡಿದ್ದರು. ಇತರೆ ಅಭಿಮಾನಿಗಳಂತೆ, ಆಯುಷ್ಮಾನ್ ಅವರು ಶಾರುಖ್​ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ:ಟೀಕೆಗಳಿಗೆ ತಿರುಗೇಟು ಕೊಟ್ಟ ಪಠಾಣ್​: 9 ದಿನಗಳಲ್ಲಿ 700 ಕೋಟಿ ರೂಪಾಯಿ ಸಂಗ್ರಹ

ಕುತೂಹಲಕಾರಿ ವಿಷಯ ಎಂದರೆ, ಪಠಾಣ್ ಮತ್ತು ಆ್ಯಕ್ಷನ್ ಹೀರೋ ಸಿನಿಮಾ ಸಾಮ್ಯತೆ ಹೊಂದಿದೆ. ಎರಡೂ ಕೂಡ ಆ್ಯಕ್ಷನ್ ಚಿತ್ರಗಳು. ಎಸ್‌ಆರ್‌ಕೆ ಮತ್ತು ಆಯುಷ್ಮಾನ್‌ ಅವರ ಚೊಚ್ಚಲ ಆ್ಯಕ್ಷನ್​ ಚಿತ್ರಗಳಿವು. ಆದರೆ 57ನೇ ವಯಸ್ಸಿನಲ್ಲಿ ಎಸ್‌ಆರ್‌ಕೆ ತಮ್ಮ ರೊಮ್ಯಾಂಟಿಕ್ ಹೀರೋ ಇಮೇಜ್‌ನಿಂದ ಬದಲಾವಣೆ ಕಂಡುಕೊಂಡಿದ್ದಾರೆ. ಇನ್ನು, ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಹೆಸರುವಾಸಿಯಾಗಿರುವ ಆಯುಷ್ಮಾನ್ ಖುರಾನ, ತಮ್ಮ ದಶಕದ ಸುದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆ್ಯಕ್ಷನ್​ ಚಿತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:'ಶಾರುಖ್​ ಖಾನ್ ಓರ್ವ ಮಹಾನ್​ ನಟ, ದಂತಕಥೆ, ರಾಜ, ಸ್ನೇಹಿತ': ಲೇಖಕ ಪೌಲೊ ಕೊಯೆಲೊ

ABOUT THE AUTHOR

...view details