ಕರ್ನಾಟಕ

karnataka

ETV Bharat / entertainment

ಪಠಾಣ್ ವಿವಾದ: ಅಯೋಧ್ಯೆ ಸ್ವಾಮೀಜಿಯಿಂದ ಶಾರುಖ್ ಖಾನ್​ಗೆ ಜೀವ ಬೆದರಿಕೆ - ಪಠಾಣ್ ವಿವಾದ

ಬಾಲಿವುಡ್ ನಟ ಶಾರುಖ್ ಖಾನ್​ಗೆ ಅಯೋಧ್ಯೆಯ ಸ್ವಾಮೀಜಿ ಪರಮಹಂಸ ಆಚಾರ್ಯ ಅವರಿಂದ ಜೀವ ಬೆದರಿಕೆ ಬಂದಿದೆ.

Ayodhya seer on  Shah Rukh Khan
ಶಾರುಖ್​ಗೆ ಅಯೋಧ್ಯೆ ಸ್ವಾಮೀಜಿ ಎಚ್ಚರಿಕೆ

By

Published : Dec 21, 2022, 1:14 PM IST

Updated : Dec 21, 2022, 1:30 PM IST

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಶರಂ ರಂಗ್ ಹಾಡಿನ ವಿವಾದ ತೀವ್ರವಾದಂತೆ ಕಾಣುತ್ತಿದೆ. ಇದೀಗ ಅಯೋಧ್ಯೆಯ ಸ್ವಾಮೀಜಿ ಓರ್ವರು "ಶಾರುಖ್ ಖಾನ್ ಅವರನ್ನು ಜೀವಂತವಾಗಿ ಸುಡುವುದಾಗಿ" ಬೆದರಿಕೆ ಹಾಕಿದ್ದಾರೆ.

ಡಿಸೆಂಬರ್ 19 ರಂದು ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ತಪಸ್ವಿ ಛವಾನಿಯ ಜಗದ್ಗುರು ಪರಮಹಂಸ ಆಚಾರ್ಯ, ಶಾರುಖ್ ಖಾನ್ ಅವರನ್ನು ಯಾರು ಸುಡುತ್ತಾರೋ ಅವರ ರಕ್ಷಣೆಗೆ ನ್ಯಾಯಾಲಯದಲ್ಲಿ ನಾನು ನಿಲ್ಲುತ್ತೇನೆ. ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ನಿಷೇಧಿಸಬೇಕೆಂದು ಕರೆ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶಿಸಿದರೆ, ಆ ಚಿತ್ರಮಂದಿರ ಸುಟ್ಟುಹಾಕಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ನಮ್ಮ ಭಗವಾ ರಂಗ್​​ (ಕೇಸರಿ ಬಣ್ಣ)ಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಅಂತಹ ಚಿತ್ರಗಳನ್ನು ಬಹಿಷ್ಕರಿಸಬೇಕು. ಶಾರುಖ್ ಖಾನ್ ಅವರು ಈವರೆಗೆ ಪ್ರವಾದಿ ವಿರುದ್ಧ ಯಾವುದೇ ವೆಬ್ ಸಿರೀಸ್ ಮಾಡಿಲ್ಲ, ಏಕೆಂದರೆ ಅವರಿಗೆ ಧೈರ್ಯವಿಲ್ಲ. ಈಗ ಹಣ ಸಂಪಾದನೆಗೆ ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಸನಾತನ ಧರ್ಮಕ್ಕೆ ಅಪಚಾರ ಮಾಡಿದರೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು. ಶಾರುಖ್ ಅವರನ್ನು ಕಂಡರೆ ಜೀವಂತ ಸುಟ್ಟು ಹಾಕುತ್ತೇನೆ ಎಂದು ಪರಮಹಂಸ ಆಚಾರ್ಯ ಜೀವ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ಸಾರ್ವಕಾಲಿಕ 50 ಶ್ರೇಷ್ಠ ನಟರಲ್ಲಿ ಶಾರುಖ್​ ಖಾನ್... ಈ ಗೌರವಕ್ಕೆ ಪಾತ್ರರಾದ ಭಾರತದ ಏಕೈಕ ನಟ

"ಇದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. ಅದನ್ನು ಸರಿಪಡಿಸಲು ನಾನು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಹೇಳುತ್ತೇನೆ. ಈ ಹಿಂದೆಯೂ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ 'ತುಕ್ಡೆ ತುಕ್ಡೆ ಗ್ಯಾಂಗ್' ಬೆಂಬಲಕ್ಕೆ ಬಂದರು. ಈಗ ಅವರ ಮನಸ್ಥಿತಿ ಮುನ್ನಲೆಗೆ ಬಂದಿದೆ. ಈ ಹಾಡಿನ 'ಬೇಷರಂ ರಂಗ್' ಎಂಬ ಹೆಸರೂ ಕೂಡ ಆಕ್ಷೇಪಾರ್ಹವಾಗಿದೆ. ಕೇಸರಿ ಮತ್ತು ಹಸಿರು ಬಣ್ಣವನ್ನು ಧರಿಸಿರುವ ರೀತಿ, ಹಾಡಿನ ಬಣ್ಣಗಳು, ಸಾಹಿತ್ಯ ಮತ್ತು ಚಿತ್ರದ ಶೀರ್ಷಿಕೆ ಶಾಂತಿಯುತವಾಗಿಲ್ಲ. ಬದಲಾಗಬೇಕು, ಆಗದಿದ್ದರೆ ಮಧ್ಯಪ್ರದೇಶದಲ್ಲಿ ಅದರ ಪ್ರಸಾರಕ್ಕೆ ಅವಕಾಶ ನೀಡಬೇಕೇ, ಬೇಡವೇ ಎಂದು ನೋಡಬೇಕಾಗುತ್ತದೆ. ಚಿತ್ರದಲ್ಲಿ ಕೆಲ ವಿಷಯಗಳನ್ನು ಸರಿಪಡಿಸಿ ಎಂದು ಕೇಳಿದವರೆಲ್ಲರೂ ಇಲ್ಲಿಯವರೆಗೆ ಸರಿ ಮಾಡಿಕೊಂಡಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ:ಬೇಷರಮ್​ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್​ಗೆ ದನಿಗೂಡಿಸಿದ ಸಾಧು ಸಂತರು

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಪಠಾಣ್'ನಲ್ಲಿ ಶಾರುಖ್​, ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಚಿತ್ರವು ಜನವರಿ 25, 2023ರಂದು ತೆರೆಕಾಣಲು ಸಿದ್ಧವಾಗಿದೆ. ಚಿತ್ರ ತಯಾರಕರು ಕಳೆದ ಸೋಮವಾರ ಮೊದಲ ಹಾಡು 'ಬೇಶರಂ ರಂಗ್' ಅನಾವರಣಗೊಳಿಸಿದ್ದಾರೆ. ಇದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರತ, ಸ್ಪೇನ್, ಯುಎಇ, ಟರ್ಕಿ, ರಷ್ಯಾ, ಸೈಬೀರಿಯಾ, ಇಟಲಿ ಮತ್ತು ಫ್ರಾನ್ಸ್​ನಲ್ಲಿ ಪಠಾಣ್​ ಶೂಟಿಂಗ್​ ನಡೆದಿದೆ. ಆ್ಯಕ್ಷನ್-ಡ್ರಾಮಾ ಮತ್ತು ರೊಮ್ಯಾನ್ಸ್ ತುಂಬಿರುವ 'ಪಠಾಣ್' ಚಿತ್ರ ಜಗತ್ತಿನ ಎಂಟು ದೇಶಗಳನ್ನು ಸುತ್ತಿ ತೆರೆ ಮೇಲೆ ಬರುತ್ತಿದೆ. ಚಿತ್ರದ ಸಾಹಸ ದೃಶ್ಯದ ಪೋಸ್ಟರ್​​ಗಳನ್ನು ಈಗಾಗಲೇ ಶೇರ್ ಮಾಡಲಾಗಿದೆ.

Last Updated : Dec 21, 2022, 1:30 PM IST

ABOUT THE AUTHOR

...view details