ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷನಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದವರು ನಟ ಶರಣ್. ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಇವರು, ಈಗ ಬೇಡಿಕೆಯ ನಾಯಕ ನಟ. ನಿನ್ನೆ (ಸೋಮವಾರ) ಶರಣ್ ಅಭಿನಯದ ಬಹುನಿರೀಕ್ಷಿತ 'ಅವತಾರ ಪುರುಷ' ಸಿನಿಮಾದ ಆಫಿಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ 'ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಟ್ರೈಲರ್ ಅನಾವರಣ ಮಾಡಿದರು.
ಬಳಿಕ ಮಾತನಾಡಿದ ಧ್ರುವ ಸರ್ಜಾ, ಟ್ರೈಲರ್ ನೋಡಿದಾಕ್ಷಣ ಪಾಸಿಟಿವ್ ವೈಬ್ಸ್ ಇದೆ. ನಿರ್ದೇಶಕ ಸಿಂಪಲ್ ಸುನಿ, ಈ ಸಿನಿಮಾ ರಿಲೀಸ್ ಆದ ಬಳಿಕ ಅವತಾರ ಸುನಿ ಅಂತಾ ಕರೆಯುತ್ತಾರೆ. ಈ ಚಿತ್ರದಲ್ಲಿ ಶರಣ್, ಸಾಯಿಕುಮಾರ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಅವರ ಪಾತ್ರಗಳು ಇಂಪ್ರೆಸ್ ಆಗಿದೆ. ನಾನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ ಎಂದರು.
ನಟಿ ಆಶಿಕಾ ರಂಗನಾಥ್ ಮಾತನಾಡಿ, ಕನ್ನಡ ಸಿನಿಮಾಗಳನ್ನ ನಮ್ಮ ಕನ್ನಡಿಗರು ಹೆಚ್ಚಾಗಿ ಪ್ರೀತಿಸಿ ಅಪ್ಪಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದರು. ಹಿರಿಯ ನಟಿ ಭವ್ಯ ಮಾತನಾಡಿ, ಸಂಬಂಧಗಳಿಗೆ ತುಂಬಾ ಮೌಲ್ಯ ಇರುವ ಸಿನಿಮಾ ಇದು. ನಾನು ಮೊದಲ ಬಾರಿ ಸಾಯಿಕುಮಾರ್ ಜತೆ ಸ್ಕ್ರೀನ್ ಹಂಚಿಕೊಂಡಿದ್ದೇನೆ ಎಂದರು.
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಈ ಸಿನಿಮಾದ ಸ್ಕ್ರಿಪ್ಟ್ ಶರಣ್ ಸರ್ಗೆ ಕೊಡಲು ಭಯ ಇತ್ತು. ಸಾಂಗ್ ಮಾಡಬೇಕಾದರೆ, ಮಂಡಿ ನೋವು ಬರಿಸಿಕೊಂಡು ಕೆಲಸ ಮಾಡಿದರು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೋಸ್ಕರ ಸಿನಿಮಾ ಗೆಲ್ಲಬೇಕು. ಬಹುಪರಾಕ್ ಸಿನಿಮಾಗಿಂತ, ಶ್ರೀನಗರ ಕಿಟ್ಟಿ ಪಾತ್ರ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿದೆ ಎಂದರು.