ಕರ್ನಾಟಕ

karnataka

ETV Bharat / entertainment

ಹಾಸ್ಯನಟ ಬಿರಾದಾರ್ ಅಭಿನಯದ '90 ಬಿಡಿ ಮನೀಗ್ ನಡಿ' ಚಿತ್ರದ ಆಡಿಯೋ ಸೋಲ್ಡ್​ ಔಟ್​! - Audio Sold Out Of 90 Bidi Manig Nadi acted by comedian Vaijanathha biradara

ಮೊದಲ ಬಾರಿಗೆ ಹಾಸ್ಯನಟ ಬಿರಾದಾರ್ ನಾಯಕ ನಟನಾಗಿ ಅಭಿನಯಿಸಿರುವ '90 ಬಿಡಿ ಮನೀಗ್ ನಡಿ' ಸಿನಿಮಾದ ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಇದು ಬಿರಾದಾರ್ ಅಭಿನಯದ 500ನೇ ಚಿತ್ರವಾಗಿದ್ದು, ಈ ಸಿನಿಮಾದ ಆಡಿಯೋವನ್ನು A2 ಮ್ಯೂಸಿಕ್ ಕಂಪನಿ ಖರೀದಿಸಿದೆ.

Vaijanathha biradara
ಹಾಸ್ಯ ನಟ ವೈಜನಾಥ ಬಿರಾದಾರ್

By

Published : May 30, 2022, 9:54 PM IST

ಭಿಕ್ಷುಕನ ಪಾತ್ರಗಳಿಂದಲೇ ಸ್ಯಾಂಡಲ್ ವುಡ್​ನಲ್ಲಿ ಬೇಡಿಕೆಯ ಹಾಸ್ಯ ನಟರಾದವರು ಹಿರಿಯ ನಟ ವೈಜನಾಥ ಬಿರಾದಾರ್. ಸದ್ಯ ವೈಜನಾಥ ಬಿರಾದಾರ್ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಸಿನಿಮಾ '90 ಬಿಡಿ ಮನೀಗ್ ನಡಿ'. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರ, ಬಿಡುಗಡೆಗೂ ಮುಂಚೆಯೇ ಇದರ ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಮಾರಾಟ ಆಗಿದೆಯಂತೆ.

ಹಾಸ್ಯ ನಟ ವೈಜನಾಥ ಬಿರಾದಾರ್

ಬಿರಾದಾರ್ ಅಭಿನಯದ 500ನೇ ಚಿತ್ರವಾಗಿದ್ದು, ಈ ಸಿನಿಮಾದ ಆಡಿಯೋವನ್ನು A2 ಮ್ಯೂಸಿಕ್ ಕಂಪನಿ ಖರೀದಿಸಿದೆ. ಈ‌ ಮೂಲಕ ಹಾಸ್ಯನಟ ಬಿರಾದಾರ್ ಅವರನ್ನ ಕಮರ್ಷಿಯಲ್ ನಾಯಕನನ್ನಾಗಿಸುವಂತ ಸಾಹಸ ತೋರಿದ, ಬಾಗಲಕೋಟೆಯ ಅಮ್ಮಾ ಟಾಕೀಸ್ ಸಂಸ್ಥೆಗೆ ಸಹಜವಾಗಿಯೇ ಖುಷಿಯಾಗಿದೆ. ಈ ಸಿನಿಮಾ ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಟೈಟಲ್ ತಗಾದೆ ಎದುರಿಸಿ, '90 ಹೊಡಿ ಮನೀಗ್ ನಡಿ' ಬದಲಿಗೆ, "90 ಬಿಡಿ ಮನೀಗ್ ನಡಿ" ಎಂಬ ಹೆಸರನ್ನ ಒಲ್ಲದ ಮನಸ್ಸಿನಿಂದ ಬದಲಾಯಿಸಿಕೊಂಡಿತ್ತು.

ಹಾಸ್ಯ ನಟ ವೈಜನಾಥ ಬಿರಾದಾರ್

ಇದೀಗ ಆಡಿಯೋ ಮೂಲಕ ಭಾರಿ ಬೆಳವಣಿಗೆಯಿಂದಾಗಿ ಚಿತ್ರತಂಡ ಖಷ್ ಆಗಿದೆ. ಹಾಗೆ ನೋಡಿದರೆ, ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿ ನಗರದಲ್ಲಿ ಇವರ ಹೊಸ ಸಾಹಸದ ಬಗ್ಗೆ ಸದ್ದಂತು ಇದ್ದೇ ಇತ್ತು. 70 ವರ್ಷ ವಯಸ್ಸಿನ ಹಿರಿಯ ನಟನನ್ನ, ಕಮರ್ಷಿಯಲ್ ಚಿತ್ರಕ್ಕೆ ಹೀರೋ ಮಾಡಿದ್ದೇ ಒಂದು ಹೊಸ ಪ್ರಯೋಗ ಮತ್ತು ಸಾಹಸ ಎಂಬುದು ಸಿನಿಪಂಡಿತರ ಲೆಕ್ಕಾಚಾರದ ಮಾತಾಗಿದೆ. ಅದರಂತೆ ಇದೀಗ ಸಿನಿಮಾ ಪೂರ್ಣಗೊಂಡು ಫಸ್ಟ್ ಕಾಪಿ ತಯಾರಾಗಿದೆ.

ಹಾಸ್ಯ ನಟ ವೈಜನಾಥ ಬಿರಾದಾರ್

ಮುಂದುವರೆದ ಚಿತ್ರತಂಡ ಸಿನಿಮಾ ಸೆನ್ಸಾರ್ ಕಾರ್ಯ ಮುಗಿಸಿಕೊಂಡು, ಚಿತ್ರದ ಮುಂದಿನ ಬೆಳವಣಿಗೆಯ ಕಾರ್ಯವಾಗಿ ಆಡಿಯೋ ಕಂಪನಿಯ ಕದ ತಟ್ಟಿದೆ. ಅಲ್ಲಿ ಹಾಡು ಭಾರಿ ಬೆಲೆಗೆ ಮಾರಾಟ ಆಗಿದೆ. ಮೂಲಗಳ ಪ್ರಕಾರ 30 ರಿಂದ 40 ಲಕ್ಷಕ್ಕೆ ಮಾರಾಟ ಆಗಿದೆ. ಈ ಚಿತ್ರದ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಹೇಳುವ ಹಾಗೆ, ಮೊದಲಿಗೆ ನಾವು ತೋರಿಸಿದ ಪ್ರಿವ್ಯೂವ್ ಹಾಡು ಕಂಡ ಕಂಪನಿಯವರು, ಎಪ್ಪತ್ತು ವರ್ಷದ ಬಿರಾದಾರ್ ಡಾನ್ಸ್ ಸ್ಟೆಪ್ಸ್​​ಗೆ ಫುಲ್ ಫಿದಾ ಆಗಿದ್ದಾರೆ. ನಮ್ಮ ಈ ಸಾಹಸಕ್ಕೆ ಬೆನ್ನು ತಟ್ಟಿ ಭೇಷ್ ಎಂದಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ:ಕರೀನಾ ಕಪೂರ್ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ 'ಲಾಲ್ ಸಿಂಗ್ ಚಡ್ಡಾ'

For All Latest Updates

TAGGED:

ABOUT THE AUTHOR

...view details