ಕರ್ನಾಟಕ

karnataka

ETV Bharat / entertainment

ಕಬ್ಜ ಚಿತ್ರದ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್ - ಈಟಿವಿ ಭಾರತ ಕನ್ನಡ

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಕಬ್ಜ ಚಿತ್ರದ ಧ್ವನಿ ಸುರುಳಿ ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಆಡಿಯೋ ಬಿಡುಗಡೆ ದಿನಾಂಕವನ್ನು ನಿಗದಿ ಪಡಿಸಿದೆ.

ಕಬ್ಜ ಚಿತ್ರದ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್
ಕಬ್ಜ ಚಿತ್ರದ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್

By

Published : Feb 13, 2023, 4:57 PM IST

ಕನ್ನಡ ಚಿತ್ರರಂಗದ ವಜ್ರೇಶ್ವರಿ ಸಂಸ್ಥೆಯಿಂದ ಹಿಡಿದು, ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗದ ಅಂಗಳದಲ್ಲಿ ಹೆಚ್ಚು ಸೌಂಡ್ ಮಾಡುತ್ತಿರುವ ಸಿನಿಮಾ ಕಬ್ಜ. ಆರ್.ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿರೋ ಕಬ್ಜ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ದಿನದೊಂದು ವರ್ಲ್ಡ್ ವೈಡ್ ತೆರೆ ಕಾಣುತ್ತಿದೆ. ಈ ಕಾರಣಕ್ಕೆ ಬಿಡುಗಡೆಯ ವಿಚಾರದಲ್ಲಿ ಚಂದ್ರು ಕಾಂಪ್ರಮೈಜ್ ಆಗ್ತಿಲ್ಲ.

ಕಬ್ಜ ಚಿತ್ರವನ್ನ ಏಳು ಭಾಷೆಯಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಕೆಲ ದಿನಗಳ ಹಿಂದೆ ನಾರ್ಥ್ ಅಮೆರಿಕದಲ್ಲಿ ಬರೋಬ್ಬರಿ 450ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕಬ್ಜ ಚಿತ್ರವನ್ನ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ಇದೀಗ ಟೈಟಲ್ ಟ್ರ್ಯಾಕ್ ನಿಂದಲೇ ಹಲ್ ಚಲ್ ಎಬ್ಬಿಸಿರೋ ಕಬ್ಜ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡೋದಕ್ಕೆ ನಿರ್ದೇಶಕ ಆರ್ ಚಂದ್ರು ಪ್ಲಾನ್ ಮಾಡಿದ್ದಾರೆ.

ತಾಜ್ ಮಹಲ್, ಚಾರ್ ಮಿನಾರ್, ಬ್ರಹ್ಮ, ಐ ಲವ್ ಯೂ ಅಂತಹ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿರೋ ಆರ್ ಚಂದ್ರು ತಮ್ಮ ಹುಟ್ಟೂರಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಧ್ವನಿ ಸುರುಳಿಯನ್ನ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಕಬ್ಜ ಚಿತ್ರದ ಹಾಡುಗಳನ್ನು ರಿಲೀಸ್​ ಮಾಡಲು ತಯಾರಿ ನಡೆಯುತ್ತಿದೆ. ಅದಕ್ಕಾಗಿ ಬೃಹತ್​ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.

ಶಿಡ್ಲಘಟ್ಟದ ಜೂನಿಯರ್​ ಕಾಲೇಜು ಮೈದಾನದಲ್ಲಿ ಕಬ್ಜ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇನ್ನು ಕಾರ್ಯಕ್ರಮಕ್ಕೆ ಉಪೇಂದ್ರ, ಶ್ರೇಯಾ ಸರಣ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ನಟ ಪೊಸನಿ ಕೃಷ್ಣ ಮುರಳಿ ಸೇರಿದಂತೆ ಕನ್ನಡದ ಕೆಲ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಚಿತ್ರದ ಡಿಜಿಟಲ್ ರೈಟ್ಸ್ ಹಾಗು ಆಡಿಯೋ ರೈಟ್ಸ್ ಮತ್ತು ಬಾಲಿವುಡ್ ಹಾಗು ಟಾಲಿವುಡ್​ನ ವಿತರಕರಾದ ಆನಂದ್ ಪಂಡಿತ್ ಹಾಗೂ ತೆಲುಗು ನಟ ನಿತಿನ್ ತಂದೆ ಈ ಸಿನಿಮಾವನ್ನ ವಿತರಣೆ ಮಾಡುತ್ತಿದ್ದು, ಕಬ್ಜ ಚಿತ್ರಕ್ಕೆ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಲ್ಲದೇ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ.

ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಚಿತ್ರಕಿದೆ. ಸದ್ಯ ಕಬ್ಜ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಅದ್ದೂರಿಯಾಗಿ ಕಬ್ಜ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕಾಂತಾರ ಸ್ಟಾರ್ ಜೊತೆ ಊರ್ವಶಿ ರೌಟೇಲಾ: ಮತ್ತೆ ಟ್ರೋಲ್​ಗೊಳಗಾದ ಬಾಲಿವುಡ್​ ಬ್ಯೂಟಿ

ABOUT THE AUTHOR

...view details