ಕೋಟಾ (ರಾಜಸ್ಥಾನ):ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಪಠಾಣ್ ಚಿತ್ರ ಬುಧವಾರ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಸುಮಾರು 100 ದೇಶಗಳಲ್ಲಿ ಬಿಡುಗಡೆ ಕಂಡಿರುವ ಈ ಸಿನಿಮಾ ವಿರುದ್ಧ ಭಾರತದ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಕೆಲ ಚಿತ್ರಮಂದಿರಗಳ ಹೊರಗೆ ಪ್ರತಿಭಟನೆಯ ಧೂಳೆದ್ದಿದ್ದರೆ, ಅದೆಷ್ಟೋ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ನೂಕು ನುಗ್ಗಲು ನಡೆಸಿದ್ದಾರೆ.
ಕೋಟಾ ಥಿಯೇಟರ್‌ನಲ್ಲಿ ನೂಕುನುಗ್ಗಲು: ರಾಜಸ್ಥಾನದ ಕೋಟಾ ನಗರದ ಥಿಯೇಟರ್‌ನಲ್ಲಿ ಪಠಾಣ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಗುರುವಾರದಂದು ಸಿನಿಮಾ ವೀಕ್ಷಿಸಲು ಈ ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕರು ನೂಕಾಟ ತಳ್ಳಾಟ ನಡೆಸಿದ್ದಾರೆ. ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದೇ ಚಿತ್ರಮಂದಿರದಲ್ಲಿ ಉಂಟಾದ ಗದ್ದಲಕ್ಕೆ ಕಾರಣ. ಪಠಾಣ್ ಚಿತ್ರ ವೀಕ್ಷಿಸಲು ಬಂದಿದ್ದ ಅಪಾರ ಸಂಖ್ಯೆಯ ಸಿನಿಪ್ರೇಮಿಗಳು ಕೆಲ ಹೊತ್ತು ಗಲಾಟೆ ನಡೆಸಿ ಪರಿಸ್ಥಿತಿಯನ್ನು ತೀವ್ರರೂಪಕ್ಕೆ ಕೊಂಡೊಯ್ದಿದ್ದರು. ಪ್ರೇಕ್ಷಕರು ಥಿಯೇಟರ್ ಕ್ಯಾಂಟೀನ್ಗೆ ನುಗ್ಗಿ ಅಲ್ಲಿನ ತಿಂಡಿ ತಿನಿಸುಗಳನ್ನು ಲೂಟಿ ಮಾಡಲು ಆರಂಭಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕ್ಯಾಂಟೀನ್ ಮತ್ತು ಥಿಯೇಟರ್ ಸಿಬ್ಬಂದಿ ಚಿತ್ರಮಂದಿರದಿಂದ ಹೊರ ಹೋದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸಿನಿಮಾ ಪ್ರದರ್ಶನ ರದ್ದು:ಇನ್ನೂ ನಗರದ ಭೀಮಗಂಜ್ಮಂಡಿ ಬಡಾವಣೆಯ ಸ್ಟೇಷನ್ ರಸ್ತೆಯಲ್ಲಿರುವ ನಟರಾಜ್ ಅಡ್ಲಾಬ್ಸ್ ಥಿಯೇಟರ್ ಬಳಿ ನಿನ್ನೆ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಹಿನ್ನೆಲೆ, ಹತ್ತು ನಿಮಿಷಗಳ ನಂತರ ಸಿನಿಮಾ ಪ್ರದರ್ಶನವಾಗುವುದು (ಒಂದು ಶೋ) ಸ್ಥಗಿತಗೊಂಡಿತು. ಗುರುವಾರ ಥಿಯೇಟರ್ ಹೌಸ್ ಫುಲ್ ಆಗಿತ್ತು. ಥಿಯೇಟರ್‌ನ ಆಸನ ಸಾಮರ್ಥ್ಯಕ್ಕೂ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಇದು ಗದ್ದಲಕ್ಕೆ ಕಾರಣವಾಯಿತು.
ಮಹಿಳೆಯರು, ಮಕ್ಕಳ ಪರದಾಟ:ಮಾಹಿತಿ ಪಡೆದ ಭೀಮಗಂಜ್ಮಂಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಚಿತ್ರ ವೀಕ್ಷಿಸಲು ಸಾಧ್ಯವಾಗದವರಿಗೆ (ಹೆಚ್ಚುವರಿ ಟಿಕೆಟ್ ಪಡೆದವರು) ಥಿಯೇಟರ್ ಮಾಲೀಕರೊಂದಿಗೆ ಮಾತನಾಡಿ ಹಣ ಮರುಪಾವತಿಸಲು ವ್ಯವಸ್ಥೆ ಮಾಡಲಾಗಿದೆ. ಚಿತ್ರಮಂದಿರದಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆ, ಮಹಿಳೆಯರು, ಮಕ್ಕಳು ಪರದಾಡುವಂತಾಯಿತು.