ಟೈಟಲ್ ಹಾಗೂ ಟೀಸರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ಉಸಿರೇ ಉಸಿರೇ'. ಬಿಗ್ ಬಾಸ್ ಖ್ಯಾತಿಯ ರಾಜೀವ್ ಅಭಿನಯದ ಉಸಿರೇ ಉಸಿರೇ ಚಿತ್ರಕ್ಕೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಎಂಟ್ರಿಯಾಗುತ್ತಲೇ ಚಿತ್ರಕ್ಕೆ ಹೈ ವೋಲ್ಟೇಜ್ ಸಿಕ್ಕಿತ್ತು. ಶೂಟಿಂಗ್ ಸಮಯದಲ್ಲೇ ಚಿತ್ರ ಗಮನ ಸೆಳೆದಿತ್ತು. ಇದೀಗ ಚಿತ್ರದ ಟೀಸರ್ ಅನಾವರಣಗೊಂಡು ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸಿತ್ತು.
ಇತ್ತೀಚೆಗೆ ಈ ಚಿತ್ರದ ಟೀಸರ್ ಅನ್ನು ಬಳ್ಳಾರಿ ಶ್ರೀ ರೇಣುಕಾ ಎಲ್ಲಮ್ಮ ಜಾತ್ರೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಸದ್ಗುರು ಜುಮಾರಿ ತಾತಾಯ್ಯ ಅವರಿಂದ ಅನಾವರಣಗೊಳಿಸಲಾಗಿದೆ. ಅಂದು ಸಂಜೆ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಕೂಡ ಟೀಸರ್ ಬಿಡುಗಡೆ ಮಾಡಿ ಆಶೀರ್ವಾದಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಶ್ರೀಜಿತ ಹಾಗೂ ನಿರ್ದೇಶಕ ಸಿ.ಎಂ. ವಿಜಯ್ ಸೇರಿ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಆಗಿ ಎರಡು ದಿನಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಯಾಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಟೀಸರ್ನಲ್ಲಿರುವ ಸಂಗೀತ, ಹೀರೋನ ಎಂಟ್ರಿ, ಅಲಿ, ಬ್ರಹ್ಮಾನಂದಮ್ ಕಾಮಿಡಿ, ದೇವರಾಜ್ ಅವರ ಪಾತ್ರ ಹಾಗೂ ಸಂಭಾಷಣೆ ಪ್ರೇಕ್ಷಕರ ಮನಸನ್ನು ದೋಚಿ ಒಂದೇ ದಿನದಲ್ಲಿ ಒಂದು ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಚಿತ್ರದಲ್ಲಿ ನಾಯಕ ರಾಜೀವ್ ಹಾಗೂ ನಾಯಕಿ ಶ್ರೀಜಿತ ಅಲ್ಲದೇ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮತ್ತು ವಿಶೇಷ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಇದ್ದಾರೆ.