ಕರ್ನಾಟಕ

karnataka

ETV Bharat / entertainment

'Bawaal' ರಿಲೀಸ್​: ಸಿನಿಮಾ ಬಗ್ಗೆ 'ಜವಾನ್'​ ನಿರ್ದೇಶಕ ಅಟ್ಲೀ ಹೇಳಿದ್ದೇನು? - ಈಟಿವಿ ಭಾರತ ಕನ್ನಡ

'ಬವಾಲ್'​ ಚಿತ್ರ ಇಂದು ಓಟಿಟಿ ಪ್ಲಾಟ್​ಫಾರ್ಮ್ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಬಗ್ಗೆ ನಿರ್ದೇಶಕ ಅಟ್ಲೀ ಪ್ರತಿಕ್ರಿಯಿಸಿದ್ದಾರೆ.

Bawaal
ಬವಾಲ್​

By

Published : Jul 21, 2023, 8:08 PM IST

ಬಾಲಿವುಡ್​ ನಟರಾದ ಜಾಹ್ನವಿ ಕಪೂರ್​ ಮತ್ತು ವರುಣ್​ ಧವನ್​ ಅಭಿನಯದ 'ಬವಾಲ್'​ ಚಿತ್ರ ಶುಕ್ರವಾರ (ಇಂದು) ಒಟಿಟಿ ಪ್ಲಾಟ್​ಫಾರ್ಮ್ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್​ ಈಗಾಗಲೇ ಬಿಡುಗಡೆಯಾಗಿ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಸಿನಿಮಾ ಕೂಡ ಇಂದು ರಿಲೀಸ್​ ಆಗಿದ್ದು, ಮೊದಲ ಬಾರಿಗೆ ಜಾಹ್ನವಿ ಕಪೂರ್​ ಮತ್ತು ವರುಣ್​ ಧವನ್​ ಜೊತೆಯಾಗಿ ನಟಿಸಿರುವ ಈ ಚಿತ್ರ ಪ್ರೇಕ್ಷಕರನ್ನು ಸೆಳೆದಿದೆ. ಇವೆಲ್ಲದರ ಮಧ್ಯೆ ನಿರ್ದೇಶಕ ಅಟ್ಲೀ ಸೋಷಿಯಲ್​ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಅಟ್ಲೀ ಟ್ವೀಟ್​ ಹೀಗಿದೆ.."ಬವಾಲ್​, ಹಿತವಾದ ಅನುಭವ ನೀಡುವಂತಹ ಸಿನಿಮಾವಿದು. ಒಂದು ಪುಸ್ತಕವನ್ನು ಓದುತ್ತಾ, ದೃಶ್ಯಗಳನ್ನು ಕಲ್ಪಿಸಿಕೊಳ್ಳುವ ರೀತಿಯಲ್ಲಿ ಬವಾಲ್​ ಮೂಡಿ ಬಂದಿದೆ. ವರುಣ್​ ಧವನ್​ ಮತ್ತು ಜಾಹ್ನವಿ ಕಪೂರ್​ ನಟನೆ ತುಂಬಾ ಚೆನ್ನಾಗಿದೆ. ನಿರ್ದೇಶಕ ನಿತೇಶ್​ ತಿವಾರಿ ಅವರಿಗೆ ಅಭಿನಂದನೆಗಳು" ಎಂದು ಜವಾನ್​ ಸಿನಿಮಾದ ನಿರ್ದೇಶಕ ಅಟ್ಲೀ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಇದೇ ಶೀರ್ಷಿಕೆಯೊಂದಿಗೆ ಇನ್​ಸ್ಟಾ ಸ್ಟೋರಿ ಹಾಕಿಕೊಂಡಿದ್ದಾರೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, "ನಾವೆಲ್ಲರೂ ನೀವು ಮತ್ತು ವರುಣ್ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಅದನ್ನು ಘೋಷಿಸಿ" ಎಂದು ಹೇಳಿದ್ದಾರೆ.

2023ರ ಬಹುನಿರೀಕ್ಷಿತ ಸಿನಿಮಾ ಬವಾಲ್​.. ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ 'ಬವಾಲ್‌'. ಚಿತ್ರಕ್ಕೆ ನಿತೀಶ್​ ತಿವಾರಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ವಿಶ್ವ ಸಮರ 2 ರ ಹಿನ್ನೆಲೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ. ಚಿತ್ರದಲ್ಲಿ 'ಅಜಯ್' ಪಾತ್ರದಲ್ಲಿ ವರುಣ್ ಧವನ್ ಮತ್ತು 'ನಿಶಾ' ಪಾತ್ರದಲ್ಲಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಾಹ್ನವಿ ಮತ್ತು ವರುಣ್​ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಜಾನ್ವಿ ಕಪೂರ್ ಕಿವಿ ಕಚ್ಚಿದ ವರುಣ್ ಧವನ್.. ಫೋಟೋ ವೈರಲ್​, ನೆಟ್ಟಿಗರಿಂದ ಟ್ರೋಲ್​

ನಿರ್ದೇಶಕ ನಿತೀಶ್ ತಿವಾರಿ ಅವರ ಅತ್ಯಂತ ದುಬಾರಿ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, 'ಬವಾಲ್' ಅನ್ನು ಪ್ಯಾರಿಸ್, ಬರ್ಲಿನ್, ಪೋಲೆಂಡ್, ಆಮ್ಸ್ಟರ್‌ಡ್ಯಾಮ್, ಕ್ರಾಕೋವ್, ವಾರ್ಸಾ ಜೊತೆಗೆ ಲಖನೌ ಮತ್ತು ಭಾರತದ ಇತರ ಎರಡು ನಗರಗಳಲ್ಲಿ ಚಿತ್ರೀಕರಿಸಲಾಗಿದೆ. ಜರ್ಮನಿಯ ಸಾಹಸ ನಿರ್ದೇಶಕರು ಮತ್ತು ಸ್ಟಂಟ್‌ಮೆನ್‌ಗಳು ಸೇರಿದಂತೆ ಚಿತ್ರತಂಡವು 700 ಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ ಎನ್ನಲಾಗಿದೆ.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಿತೇಶ್ ತಿವಾರಿ ಮತ್ತು ಅಶ್ವಿನಿ ಅಯ್ಯರ್ ತಿವಾರಿ ಜೋಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೇಲರ್​ ಮಾತ್ರವಲ್ಲದೇ ಎರಡು ಹಾಡುಗಳು ಕೂಡ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆದಿದೆ. ಇಂದಿನಿಂದ ಚಿತ್ರ ಓಟಿಟಿ ಪ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಲಿದೆ.

ಇದನ್ನೂ ಓದಿ:Bawaal: ರೊಮ್ಯಾಂಟಿಕ್​ ಮೂಡ್​ನಲ್ಲಿ ಬವಾಲ್​ ಜೋಡಿ - ಜಾನ್ವಿ ಮಾದಕ ನೋಟ! Photos

ABOUT THE AUTHOR

...view details