ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್ ಕಟ್ ಹೇಳಿರುವ 'ಜವಾನ್' ಸಿನಿಮಾ ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾಲಿವುಡ್ನಲ್ಲಿ ದೊಡ್ಡ ಹಿಟ್ ಪಡೆದುಕೊಂಡಿರುವ ನಿರ್ದೇಶಕ ಇದೀಗ ತೆಲುಗು ಚಿತ್ರರಂಗಕ್ಕೂ ದಾಪುಗಾಲಿಡಲು ಸಜ್ಜಾಗಿದ್ದಾರೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಚಾರವನ್ನು ಇತ್ತೀಚೆಗೆ ನಿರ್ದೇಶಕ ಅಟ್ಲೀ ಅವರೇ ಖಚಿತಪಡಿಸಿದ್ದಾರೆ.
'ಜವಾನ್' ಯಶಸ್ಸಿನಲ್ಲಿ ಮುಳುಗಿರುವ ಅಟ್ಲೀ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ನಟ ಅಲ್ಲು ಅರ್ಜುನ್ ಅವರೊಂದಿಗಿನ ಪ್ರಾಜೆಕ್ಟ್ ಬಗ್ಗೆ ತೆರೆದುಕೊಂಡಿದ್ದಾರೆ. ವೆಬ್ಲಾಯ್ಡ್ನೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿರುವ ಅವರು, ಬನ್ನಿ ಜೊತೆಗಿನ ಸ್ನೇಹ ಮತ್ತು ಪರಸ್ಪರ ಗೌರವವನ್ನು ಹಂಚಿಕೊಂಡಿದ್ದಾರೆ. ದೇವರ ಆಶೀರ್ವಾದಿಂದ ನಮ್ಮ ಮುಂದಿನ ಸಿನಿಮಾ ಬರಲಿದೆ ಎಂದು ಹೇಳಿದ್ದಾರೆ.
"ಅಲ್ಲು ಸರ್ ಒಬ್ಬ ಒಳ್ಳೆಯ ಸ್ನೇಹಿತ. ನಾವು ಪರಸ್ಪರ ಕಲೆಯನ್ನು ಪ್ರೀತಿಸುತ್ತೇವೆ. ಸಹಜವಾಗಿ ನಾವು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬ ಕಲ್ಪನೆಯನ್ನು ಹೊಂದಿದ್ದೇವೆ. ದೇವರ ಆಶೀರ್ವಾದದಿಂದ ಚಿತ್ರವೊಂದು ಒಟ್ಟಿಗೆ ಬರುತ್ತಿದೆ. ಆದರೆ ಆ ಆಶೀರ್ವಾದವು ಲಿಖಿತ ರೂಪದಲ್ಲಿ ಬೇಕಿದೆ (ಅಂದರೆ ಉತ್ತಮ ಸ್ಕ್ರಿಪ್ಟ್). ನಮ್ಮ ಜೊತೆ ಒಂದೊಳ್ಳೆ ಐಡಿಯಾ ಇದೆ. ಈಗ ದೇವರ ಆಶೀರ್ವಾದಕ್ಕಾಗಿ ಕಾಯುತ್ತಿದ್ದೇವೆ" ಎಂದು ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ ಬಗ್ಗೆ ಅಟ್ಲೀ ಮಾತನಾಡಿದ್ದಾರೆ.
ಭವಿಷ್ಯದ ಯೋಜನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಟ್ಲೀ ಅವರಿಗೆ ಹೆಚ್ಚಿನ ಪ್ರೇಕ್ಷಕರನ್ನು ಸಂಪಾದಿಸುವ ಗುರಿ ಇದೆ. ತಮ್ಮ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಆಸೆ ಇದೆ. ಅದಕ್ಕಾಗಿ ಅವರು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಅಲ್ಲದೇ, ಅಟ್ಲೀ ಅವರು ಜವಾನ್ಗಿಂತ ದೊಡ್ಡದಾಗಿ ಏನನ್ನಾದರೂ ಮಾಡಬೇಕು ಎಂದು ಆಕಾಂಕ್ಷೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಇತ್ತೀಚೆಗೆ ಬಾಲಿವುಡ್ ಸೂಪರ್ಸ್ಟಾರ್ಗಳಾದ ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ರಣ್ವೀರ್ ಸಿಂಗ್ ಹಾಗೂ ಹೃತಿಕ್ ರೋಷನ್ ಅವರಿಗೆ ಆ್ಯಕ್ಷನ್ ಕಟ್ ಹೇಳುವ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು.
ಜವಾನ್ ಸಿನಿಮಾದ ಮೂಲಕ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ಗೆ ಅಟ್ಲೀ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಅವರಿಗೆ ನೀವು ಬೇರೆ ಯಾವ ಬಾಲಿವುಡ್ ನಟರೊಂದಿಗೆ ಕೆಲಸ ಮಾಡಲು ಬಯಸುತ್ತೀರಾ? ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ಖಂಡಿತಾ ನನಗೆ ಒಳ್ಳೆಯ ನಟರ ಜೊತೆ ಕೆಲಸ ಮಾಡಲು ಇಷ್ಟ ಇದೆ ಎಂಬುದಾಗಿ ಹೇಳಿದ್ದರು. ಹೆಸರನ್ನು ಬಹಿರಂಗಪಡಿಸುವಂತೆ ಕೇಳಿದಾಗ, ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ರಣ್ವೀರ್ ಸಿಂಗ್ ಹಾಗೂ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದರು.
ಇದರ ಹೊರತಾಗಿ ನೋಡುವುದಾದರೆ, ನಿರ್ದೇಶಕ ಅಟ್ಲೀ ಅವರು ಮೊದಲ ಬಾರಿಗೆ ನಿರ್ಮಾಪಕರ ಟೋಪಿ ಧರಿಸಲು ಸಜ್ಜಾಗಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ VD18 ಎಂದು ಹೆಸರಿಡಲಾಗಿದೆ. ಮುಖ್ಯಭೂಮಿಕೆಯಲ್ಲಿ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ನಟಿಸಲಿದ್ದಾರೆ. ಅಟ್ಲೀ ಮತ್ತು ಅವರ ಪತ್ನಿ ಪ್ರಿಯಾ ಅವರ ಮುರಾದ್ ಖೇತಾನಿ ನಿರ್ಮಾಣ ಸಂಸ್ಥೆಯಡಿ ಚಿತ್ರ ನಿರ್ಮಾಣವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾ 2024ರ ಬೇಸಿಗೆ ಸಮಯದಲ್ಲಿ ವಿಶ್ವದಾದ್ಯಂತ ದೊಡ್ಡ ಪರದೆ ಮೇಲೆ ಬರಲಿದೆ.
ಇದನ್ನೂ ಓದಿ:ಬಾಲಿವುಡ್ನ ಇನ್ನೂ 4 ತಾರೆಯರಿಗೆ ಆ್ಯಕ್ಷನ್ ಕಟ್ ಹೇಳುವಾಸೆ: 'ಜವಾನ್' ನಿರ್ದೇಶಕ ಅಟ್ಲೀ ಮನದಿಂಗಿತ