ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಅವರ ಪತ್ನಿ ಪ್ರಿಯಾ ಮೋಹನ್ ಅವರು ಮಂಗಳವಾರದಂದು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಸಿನಿಮಾ ನಿರ್ಮಾಪಕರೂ ಆಗಿರುವ ಪ್ರಿಯಾ ಮೋಹನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಅಟ್ಲೀ ಮತ್ತು ಪ್ರಿಯಾ ಮೋಹನ್ ತಾವು ಪೋಷಕರಾಗಿರುವ ಸುದ್ದಿಯನ್ನು ಹಂಚಿಕೊಂಡ ಕೂಡಲೇ, ನಟಿಯರಾದ ಸಮಂತಾ ರುತ್ ಪ್ರಭು, ಕೀರ್ತಿ ಸುರೇಶ್, ಕಾಜಲ್ ಅಗರ್ವಾಲ್ ಸೇರಿದಂತೆ ಚಿತ್ರರಂಗದ ಅನೇಕರು ಈ ದಂಪತಿಗೆ ಶುಭ ಕೋರಿದ್ದಾರೆ. ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಿಯಾ ಮೋಹನ್ ಪೋಸ್ಟ್: ''ಅವರು ಹೇಳಿದ್ದು ಸರಿ. ಜಗತ್ತಿನಲ್ಲಿ ಈ ರೀತಿಯ ಯಾವುದೇ ಭಾವನೆ ಇಲ್ಲ. ನಮ್ಮ ಗಂಡು ಮಗು ನಮ್ಮೊಂದಿಗಿರುವ ಭಾವನೆ ವಿಶೇಷ. ಪಿತೃತ್ವದ, ಮಾತೃತ್ವದ ಹೊಸ ರೋಮಾಂಚನಕಾರಿ ಸಾಹಸ ಇಂದು ಪ್ರಾರಂಭವಾಗುತ್ತದೆ, ಕೃತಜ್ಞರಾಗಿದ್ದೇವೆ, ಸಂತೋಷವಾಗಿದೆ ಮತ್ತು ಆಶೀರ್ವದಿಸಲ್ಪಟ್ಟಿದ್ದೇವೆ ಎಂದು ಪ್ರಿಯಾ ಮೋಹನ್ ಅವರು ಪತಿಯೊಂದಿಗಿನ ಫೋಟೋಗಳೊಂದಿಗೆ ಬರೆದಿದ್ದಾರೆ.
ಅಟ್ಲೀ - ಪ್ರಿಯಾ ಮೋಹನ್: ಅಟ್ಲೀ ಮತ್ತು ಪ್ರಿಯಾ ಮೋಹನ್ 2014ರಲ್ಲಿ ದಾಂಪತ್ಯ ಜೀವನ ಆರಂಭಿದರು. 2022ರಲ್ಲಿ ತಾವು ಪೋಷಕರಾಗುತ್ತಿರುವ ಶುಭ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಇದೀಗ ತಂದೆ ತಾಯಿ ಆಗಿರುವ ಖುಷಿಯಲ್ಲಿ ಅಟ್ಲೀ ಮತ್ತು ಪ್ರಿಯಾ ಮೋಹನ್ ಇದ್ದಾರೆ. ಈ ವಿಷಯವನ್ನು ಶೇರ್ ಮಾಡುತ್ತಿದ್ದಂತೆ ಅವರ ಕಾಮೆಂಟ್ ವಿಭಾಗ ಶುಭಾಶಯಗಳೊಂದಿಗೆ ತುಂಬಿತು. ಹಲವು ನಟ ನಟಿಯರು ಸೇರಿದಂತೆ ಅಭಿಮಾನಿಗಳು ಈ ದಂಪತಿಗೆ ಶುಭ ಕೋರಿದ್ದಾರೆ.
ಚಿತ್ರ ರಂಗದವರ ಪ್ರತಿಕ್ರಿಯೆ:ಹ್ಯಾಪಿ ನ್ಯೂಸ್ ಹೊರ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ನಟಿ ಸಮಂತಾ ರುತ್ ಫ್ರಭು, ಅಭಿನಂದನೆಗಳು ನನ್ನ ಪ್ರೀತಿ ಪಾತ್ರರಿಗೆ ಎಂದು ಬರೆದಿದ್ದಾರೆ. ಹೊಸ ತಾಯಿ ಮತ್ತು ತಂದೆಗೆ ನನ್ನ ಕಡೆಯಿಂದ ದೊಡ್ಡ ಅಭಿನಂದನೆಗಳು, ದೇವರ ಆಶೀರ್ವಾದ ಇರಲಿ ಎಂದು ನಟಿ ಕೀರ್ತಿ ಬರೆದಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಗಂಡು ಮಗುವಿನ ತಾಯಿಯಾಗಿರುವ ಕಾಜಲ್ ಅಗರ್ವಾಲ್ ಸಹ ಅಭಿನಂದನೆ ತಿಳಿಸಿದ್ದಾರೆ. ದಂಪತಿಗೆ ಪ್ರೀತಿ ವ್ಯಕ್ತಪಡಿಸಿರುವ ಕಾಜಲ್ ಮೂವರನ್ನೂ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.